ಮದುವೆಗೆ ನಿರಾಕರಣೆ: ಯುವತಿಯ ಮೇಲೆ ಮಚ್ಚು ಬೀಸಿದ್ದ ಪಾಗಲ್‌ ಆತ್ಮಹತ್ಯೆ..!

By Suvarna News  |  First Published May 27, 2020, 5:59 PM IST

ಮದುವೆ ಮಾಡಿಕೊಳ್ಳು ನಿರಾಕರಿಸಿದ್ದ ಯುವತಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಪಾಗಲ್ ಪ್ರೇಮಿ ಆತ್ಮಹತ್ಯೆಗೆ ಶರಣಾಗಿದ್ದಾನೆ.


ಬೆಂಗಳೂರು, (ಮೇ.27): ಪ್ರೇಯಸಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದ ಪಾಗಲ್ ಪ್ರೇಮೆ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ ಯುವತಿಗೆ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಇಂದು(ಬುಧವಾರ) ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿಶಾಲ್ ಮಾರ್ಟ್ ಬಳಿ ಈ ಘಟನೆ ನಡೆದಿತ್ತು.

Tap to resize

Latest Videos

ಮದುವೆಗೆ ನಿರಾಕರಣೆ: ಯುವತಿಯ ಮೇಲೆ ಪಾಗಲ್‌ ಪ್ರೇಮಿಯಿಂದ ಮಚ್ಚಿನಿಂದ ಹಲ್ಲೆ

ಆದ್ರೆ, ಇದೀಗ ಗಿರೀಶ್ ಸಹ ತಾವರೆಕೆರೆ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ..?
ಮಂಡ್ಯದಲ್ಲಿ ಕಾಲೇಜು ವ್ಯಾಸಂಗ ಮಾಡುವ ವೇಳೆ ಆರೋಪಿ ಗಿರೀಶ್ ಹಾಗೂ ಹಲ್ಲೆಗೊಳಗಾದ 27 ವರ್ಷದ ಯುವತಿ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಜಗಳ ಆರಂಭವಾಗಿ ದೂರಾಗಿದ್ದರು. ಬಳಿಕ ಯುವತಿಗೆ ಮಂಡ್ಯದಿಂದ ಬಂದು ಬೆಂಗಳೂರಿನ ಪಾಪರೆಡ್ಡಿ ಪಾಳ್ಯದಲ್ಲಿ ನೆಲೆಸಿದ್ದಳು. ಆರೋಪಿ ಗಿರೀಶ್ ಸಹ ಖಾಸಗಿ ಆಸ್ಪತ್ರೆಯ ಸೆಕ್ಯೂರಿಟಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ. 

ಬಳಿಕ ರಾಜಿ ಮಾಡಿಕೊಂಡು ಸುಮ್ಮನಿರುವುದಾಗಿ ಆರೋಪಿ ಗಿರೀಶ್‌ ಹೇಳಿದ್ದ.ಯುವತಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಜೂನ್‌ನಲ್ಲಿ ಮದುವೆಗೆ ಡೆಟ್ ಫಿಕ್ಸ್ ಕೂಡ ಆಗಿತ್ತು. ಈ ಹಿನ್ನೆಲೆಯಲ್ಲಿ ಬಟ್ಟೆ ಶಾಪಿಂಗ್‌ಗೆಂದು ಯುವತಿ ಹೊರ ಬಂದಿದ್ದಳು. ಈ ವೇಳೆ ಮಂಡ್ಯದಿಂದ ಆಗಮಿಸಿದ್ದ ಆರೋಪಿ ಗಿರೀಶ್‌ ಯುವತಿ  ಮೇಲೆ ಮಚ್ಚಿನಿಂದ ಐದಕ್ಕೂ ಹೆಚ್ಚು ಬಾರಿ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿ ಇದೀಗ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ರೆ, ಗಾಯಗೊಂಡಿರುವ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
 

click me!