ನನ್ನ ಜೊತೆ ಮಲಗು, ಪೈಪ್ ಮೂಲಕ 4ನೇ ಮಹಡಿ ಹತ್ತಿದ ಕಾಮುಕನಿಂದ ಮಹಿಳೆಗೆ ಕಿರುಕುಳ!

By Suvarna News  |  First Published Oct 24, 2023, 5:10 PM IST

ಸಮಯ ಬೆಳಗಿನ ಜಾವ 3.30. ಹೊಟೆಲ್ ಕಟ್ಟಡ ಹೊರಭಾಗದಲ್ಲಿ ಹಾಕಿದ್ದ ಪೈಪ್ ಹಿಡಿದು ಕಾಮಕನೋರ್ವ ನಾಲ್ಕನೇ ಮಹಡಿ ಹತ್ತಿ ಕೋಣೆಗೆ ನುಗ್ಗಿದ್ದಾನೆ. ನಿದ್ದೆ ಮಂಪರಿನಲ್ಲಿದ್ದ ಮಹಿಳೆ ಜೊತೆ ಸೆಕ್ಸ್‌ಗೆ ಬೇಡಿಕೆ ಇಟ್ಟು ಕಿರಕುಳ ನೀಡಿದ ಘಟನೆ ನಡೆದಿದೆ. ಕಾಮಕನ ಬಂಧಿಸಲಾಗಿದ್ದು, ಹೊಟೆಲ್‌ನಲ್ಲಿ ತಂಗಿದ್ದ ಬಹುತೇಕರು ಜಾಗ ಖಾಲಿ ಮಾಡಿದ್ದಾರೆ.


ಅಹಮ್ಮದಾಬಾದ್(ಅ.24) ನಾಲ್ಕು ಮಹಡಿಗಳ ಹೊಟೆಲ್ ರೂಂನಲ್ಲಿ ದಂಪತಿಗಳು ತಂಗಿದ್ದರು. ಬೆಳಗಿನ ಜಾವ 3.30ಕ್ಕೆ ಸರಿಯಾಗಿ ಪತಿ ಹೊರಹೋಗಿದ್ದಾರೆ. ರಾತ್ರಿ ಇಡಿ ಕಾಯುತ್ತ ಕುಳಿತ ಕಾಮಕನೋರ್ವ, ಹೊಟೆಲ್ ಹಂಭಾಗದಲ್ಲಿ ಅಳವಡಿಸಿದ್ದ ಪೈಪ್ ಹಿಡಿದು ನಾಲ್ಕನೇ ಮಹಡಿಗೆ ಹತ್ತಿದ್ದಾನೆ.ಬಳಿಕ ಮಹಿಳೆಯ ಕೋಣೆಯೊಳಕ್ಕೆ ನುಗ್ಗಿದ್ದಾನೆ. ಸೆಕ್ಸ್‌ಗಾಗಿ ಬೇಡಿಕೆ ಇಟ್ಟ ಕಾಮುಕ ಮಹಿಳೆಗೆ ಕಿರುಕುಳ ನೀಡಿದ ಘಟನೆ ಅಹಮ್ಮದಾಬಾದ್‌ನ ನರೋದದಲ್ಲಿ ನಡೆದಿದೆ.

26 ವರ್ಷದ ಮಹಿಳೆ ತನ್ನ ಪತಿ ಜೊತೆ ಹೊಟೆಲ್‌ನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ತಂಗಿದ್ದಾರೆ. ದಂಪತಿಗಳ ಮನೆ ನವೀಕರಣದ ಕಾರಣ ಹೊಟೆಲ್‌ನಲ್ಲಿ ತಂಗಿದ್ದರು. ಇದನ್ನು ಗಮನಿಸಿದ ಕಾಮಕನೋರ್ವ ಪ್ರತಿ ದಿನ ಮಹಿಳೆಯ ಕೋಣೆಗೆ ನುಗ್ಗಲು ಪ್ಲಾನ್ ಮಾಡಿದ್ದಾನೆ. ಹೊಟೆಲ್ ಪ್ರವೇಶದ್ವಾರದ ಮೂಲಕ ತೆರಳಲು ಸಿಬ್ಬಂದಿಗಳು ಅನುವು ಮಾಡುವುದಿಲ್ಲ ಅನ್ನೋದು ಅರಿತ ಕಾಮಕ,  ಹೊಟೆಲ್ ಸುತ್ತ ಪರಿಶೀಲನೆ ನಡೆಸಿದ್ದಾನೆ.

Tap to resize

Latest Videos

ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಕಾಮುಕ ಶಿಕ್ಷಕ ಅರೆಸ್ಟ್

ಕಳೆದ ಒಂದು ತಿಂಗಳಿನಿಂದ ಹೊಟೆಲ್ ಹಿಂಭಾಗದಲ್ಲಿ ಅಳವಡಿಸಿರುವ ಪೈಪ್ ಮೂಲಕ ಹತ್ತಲು ಅಭ್ಯಾಸ ಮಾಡಿದ್ದಾನೆ. ಇತ್ತ ಪತಿ ಬೆಳಗಿನ ಜಾವ 3.30ಕ್ಕೆ ಹೊಟೆಲ್‌ನಿಂದ ಹೊರಹೋಗಿದ್ದಾನೆ. ರಾತ್ರಿಯಿಡಿ ಮಹಿಳೆಯ ಕೋಣೆ ಪ್ರವೇಶಿಸಿ ಆಕೆಯ ಜೊತೆ ಸೆಕ್ಸ್ ನಡೆಸಲು ಬಯಸಿದ್ದ ಈತ, ಪತಿ ಹೊಟೆಲ್‌ನಿಂದ ಹೊರಹೋಗುತ್ತಿದ್ದಂತೆ ಪೈಪ್ ಹತ್ತಲು ಆರಂಭಿಸಿದ್ದಾನೆ.

ಕೆಲ ಹೊತ್ತಲ್ಲೇ ಕಾಮುಕ ನಾಲ್ಕನೇ ಮಹಡಿ ಹತ್ತಿದ್ದಾನೆ. ಬಳಿಕ ಮಹಿಳೆಯ ಕೋಣೆಯ ಹೊರಭಾಗದಿಂದ ಕಿಟಕಿ ಬಳಿ ಬಂದು ನೇರವಾಗಿ ಕೋಣೆಯೊಳಕ್ಕೆ ಪ್ರವೇಶಿಸಿದ್ದಾನೆ. ನಿದ್ದೆ ಮಂಪರಿನಲ್ಲಿದ್ದ ಮಹಿಳೆ ಹೌಹಾರಿದ್ದಾಳೆ. ತನ್ನ ಜೊತೆ ಸೆಕ್ಸ್ ಮಾಡುವಂತೆ ಮಹಿಳೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದೇ ವೇಳೆ ಸಹಾಯಕ್ಕಾಗಿ ಕಿರುಚಾಡುತ್ತಾ ಮಹಿಳ ಹೊರಗೆ ಓಡಿದ್ದಾಳೆ. ಮಹಿಳೆಯ ಧ್ವನಿ ಕೇಳಿದ ಸಿಬ್ಬಂದಿಗಳು ನೆರವಿಗೆ ಧಾವಿಸಿದ್ದಾರೆ. ಇತ್ತ ಪೈಪ್ ಮೂಲಕ ಇಳಿಯಲು ಹೋದ ಕಾಮುಕನ್ನು ಕೆಳಭಾಗದಲ್ಲಿ ಸಿಬ್ಬಂದಿಗಳು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಲೈಂಗಿಕ ಕಿರುಕಳ ವಿರೋಧಿಸಿದ ವಿದ್ಯಾರ್ಥಿನಿಯ ರೈಲಿನಡಿಗೆ ತಳ್ಳಿದ ಕಾಮುಕ, ಬಾಲಕಿ ಸ್ಥಿತಿ ಗಂಭೀರ!

ಮಹಿಳೆ ಹಾಗೂ ಪತಿ ಈ ಘಟನೆ ಕುರಿತು ದೂರು ದಾಖಲಿಸಿದ್ದಾರೆ. ಕಾಮುಕನಿಂದ ಇದೀಗ ಹೊಟೆಲ್‌ಗೆ ಸಂಕಷ್ಟ ಎದುರಾಗಿದೆ. ಈ ಘಟನೆಯಿಂದ ಹೊಟೆಲ್‌ನಲ್ಲಿ ತಂಗಿದ್ದ ಇತರರು ಬೆಚ್ಚಿಬಿದ್ದಿದ್ದಾರೆ. ಸುರಕ್ಷತೆ ಕಾರಣದಿಂದ ಹಲವರು ಹೊಟೆಲ್ ರೂಂ ಖಾಲಿ ಮಾಡಿದ್ದಾರೆ. 

click me!