ಬೆಂಗಳೂರು; ಹೆಂಡತಿ ಖಾಸಗಿ ಅಂಗಕ್ಕೆ ಬೆಂಕಿ ಇಟ್ಟ ಪಾಪಿ ಗಂಡ!

By Suvarna News  |  First Published Oct 11, 2020, 3:55 PM IST

ತವರು ಮನೆಯಿಂದ ಹಣ ತೆಗೆದುಕೊಂಡು ಬಾ/ ಹೆಂಡತಿಯ ಖಾಸಗಿ ಅಂಗಾಂಗಕ್ಕೆ ಬೆಂಕಿ ಇಟ್ಟ ಭೂಪ/ ಪ್ರತಿದಿನ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ/ ಆರೋಪಿ ಪತ್ತಗೆ ಪೊಲೀಸರ ಬಲೆ


ಬೆಂಗಳೂರು (ಅ. 11)  ತವರು ಮನೆಯಿಂದ ಹಣ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಪಾಪಿ ಗಂಡ ಹೆಂಡತಿಯ ಖಾಸಗಿ ಅಂಗವನ್ನೇ ಸುಟ್ಟಿದ್ದಾನೆ.

ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಘಟನೆ ನಡೆದಿದೆ.  ಆರೋಪಿಯನ್ನು ಸೂರಜ್ ಸಿಂಗ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ  22 ವರ್ಷದ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂರಜ್ ಮತ್ತು ಅವರ ತಾಯಿ ಪರಾರಿಯಾಗಿದ್ದು ಪೊಲೀಸರು ಪತ್ತೆಗೆ ಬಲೆ ಬೀಸಿದ್ದಾರೆ.

Tap to resize

Latest Videos

ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೆ ಬಿಟ್ಟ!

ಸೂರಜ್ ಅವರು ಪಾನ್ ಬೀಡಾ ಅಂಗಡಿಯೊಂದನ್ನು ನಡೆಸುತ್ತಿದ್ದ.  ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಸೂರಜ್ ಪ್ರತಿದಿನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಅಕ್ಟೋಬರ್  7  ರಂದು ತವರು ಮನೆಯಿಂದ ಹಣ ತರುವಂತೆ ಹೆಂಡತಿಗೆ ಒತ್ತಾಯ ಮಾಡಿದ್ದಾನೆ.  ಈ ವೇಳೇ ತಿರುಗಿಬಿದ್ದ ಹೆಂಡತಿ ತನ್ನ ತವರು ಮನೆಯವರು ನೀಡಿದ್ದ ಆಭರಣಗಳನ್ನು ವಾಪಸ್ ನೀಡಲು ಕೇಳಿದ್ದಾಳೆ. ಇಬ್ಬರ ನಡುವೆ  ವಾದ-ವಿವಾದ ಆಗಿದೆ.

ಈ  ವೇಳೆ ಕೋಪಗೊಂಡ ಆರೋಪಿ ಹೆಂಡತಿಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಕಿರುಚಾಟ ಕೇಳಿ ಅಕ್ಕಪಕ್ಕದವರು ಮಹಿಳೆಯ ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಶುಕ್ರವಾರ, ಮಹಿಳೆಯ ಪೋಷಕರು ದೂರು ನೀಡಿದ್ದಾರೆ.  ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದು ಘಟನೆ ನಡೆಯುವಾಗ ಆರೋಪಿ ತಾಯಿ ಸಹ ಮನೆಯಲ್ಲಿ ಇದ್ದರು ಎಂಬ ಮಾಹಿತಿ ಸಿಕ್ಕಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.

ಮೊದಲ ಸಾರಿಗೆ ತುಂಬಾ ನೋವಾಗುತ್ತೆ ಅಂತಾರಲ್ಲ; ನಿಜಾನಾ?

click me!