ತಾಲೂಕಿನ ಪರಸನಹಳ್ಳಿ ಗ್ರಾಮದಲ್ಲಿ ಕಾವ್ಯ(25) ಎಂಬ ಮಹಿಳೆಯನ್ನು ಕೊಲೆ ಮಾಡಿ, ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿರುವ ಘಟನೆ ಬಯಲಾಗಿದ್ದು, ಅವಿನಾಶ್ ಎಂಬ ಪ್ರೇಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಳೆನರಸೀಪುರ (ಡಿ.14): ತಾಲೂಕಿನ ಪರಸನಹಳ್ಳಿ ಗ್ರಾಮದಲ್ಲಿ ಕಾವ್ಯ(25) ಎಂಬ ಮಹಿಳೆಯನ್ನು ಕೊಲೆ ಮಾಡಿ, ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿರುವ ಘಟನೆ ಬಯಲಾಗಿದ್ದು, ಅವಿನಾಶ್ ಎಂಬ ಪ್ರೇಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಬಿಎಂ ಓದಿರುವ ಕಾವ್ಯ ಕೆಲವು ವರ್ಷಗಳ ಹಿಂದೆ ಅಕ್ಷಯ್ ಎಂಬ ಯುವಕನನ್ನು ಮದುವೆಯಾಗಿ, ಸಂಸಾರದಲ್ಲಿ ಹೊಂದಾಣಿಕೆಯಾಗದ ಕಾರಣದಿಂದ ಕಾನೂನು ಪ್ರಕಾರ ಗಂಡನನ್ನು ಬಿಟ್ಟಿದ್ದರು. ನಂತರ ತಾಲೂಕಿನ ಹಳೇಕೋಟೆ ಹೋಬಳಿಯ ಪರಸನಹಳ್ಳಿ ಗ್ರಾಮದ ಅವಿನಾಶ್ ಜತೆಯಲ್ಲಿ ಕಳೆದ ಒಂದೂವರೆ ವರ್ಷದಿಂದ (ಲಿವಿಂಗ್ ಟುಗೆದರ್) ವಾಸವಾಗಿದ್ದರು.
ಕಾವ್ಯ ಅವರ ತಾಯಿ ಮಾತನಾಡಿ, ಕಾವ್ಯ ನಮಗೆ ವಾಯ್ಸ್ ರೆಕಾರ್ಡ್ ಮೂಲಕ ಮೆಸೇಜ್ ಮಾಡುತ್ತಿದ್ದರು. ಇತ್ತೀಚೆಗೆ ಹಣ ಕೇಳಿದ ಕಾರಣ 15 ಸಾವಿರ ರು. ಕಳುಹಿಸಲಾಗಿತ್ತು. ಆದರೆ ನ. 25 ರ ನಂತರ ಯಾವುದೇ ಮೆಸೇಜ್ ಬಾರದ ಕಾರಣ ಅನುಮಾನದಿಂದ ನಗರ ಪೊಲೀಸ್ ಠಾಣೆಯಲ್ಲಿ ಅವಿನಾಶ್ ಮತ್ತು ಅವರ ತಂದೆ, ತಾಯಿ ವಿರುದ್ಧ ದೂರು ನೀಡಲಾಗಿತ್ತು ಎಂದು ತಿಳಿಸಿದರು. ಪ್ರಕರಣ ಸಂಬಂಧ ಅವಿನಾಶನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿ, ಕಬ್ಬಿನ ಗದ್ದೆಯಲ್ಲಿ ಹೂತಿದ್ದ ಮೃತದೇಹವನ್ನು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಉಪಸ್ಥಿತಿಯಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮನೆ ಕಳ್ಳತನಕ್ಕೆ ಬಂದವನಿಗೆ ಗುಂಡು ಹಾರಿಸಿದ ಮಾಲೀಕ
ಸುಟ್ಟ ರೀತಿಯಲ್ಲಿ ಪತ್ತೆಯಾದ ಅಪರಿಚಿತ ಶವ ಮಹಿಳೆಯದ್ದು: ಸೋಮವಾರ ಸಂಜೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕನ್ಯಾಡಿಯ ಕೇಳ್ತಾಜೆ ಬಳಿ ಸುಟ್ಟರೀತಿಯಲ್ಲಿ ಪತ್ತೆಯಾದ ಅಪರಿಚಿತ ಮೃತದೇಹ ಮಹಿಳೆಯದು ಎಂಬುದು ಖಚಿತಪಟ್ಟಿದೆ. ಸ್ಥಳದಲ್ಲಿ ಕೆಲವೊಂದು ವಸ್ತುಗಳು ಪತ್ತೆಯಾಗಿದ್ದು ಇದರ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಮುಂದುವರಿಸುತ್ತಿದ್ದಾರೆ. ಸ್ಥಳದಲ್ಲಿಯೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಸ್ಥಳೀಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮಂಗಳವಾರ ನಡೆಸಿದ ತನಿಖೆಯಲ್ಲಿ ಸ್ಥಳದಲ್ಲಿ ಹಲವು ಕುರುಹುಗಳು ಪತ್ತೆಯಾಗಿದೆ. ಮೃತದೇಹದಲ್ಲಿ ಎರಡು ಕಾಲುಂಗುರ, ಕೈಯಲ್ಲಿ ನಾಗರ ಹಾವಿನ ರೀತಿಯ ಉಂಗುರ, ಬಳೆಗಳು, ಸುಟ್ಟರೀತಿಯಲ್ಲಿ ಚೈನ್ ವಾಚ್, ಕುತ್ತಿಗೆಗೆ ಹಾಕುವ ಶಿವಲಿಂಗಧಾರಣೆ , ಬಟ್ಟೆಯ ಬಟನ್, ಸುಟ್ಟು ಉಳಿದ ಸ್ವಲ್ಪ ಬಟ್ಟೆಗಳು, ತಲೆಗೆ ಹಾಕುವ ಕ್ಲಿಪ್ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಸುಮಾರು 30-40 ವರ್ಷದ ಮಹಿಳೆಯ ಮೃತದೇಹ ಇದಾಗಿದೆ ಎಂದು ಪ್ರಾಥಮಿಕ ಪರಿಶೀಲನೆಯಲ್ಲಿ ಅಂದಾಜಿಸಲಾಗಿದೆ.
ಉದ್ಯಮ ಯಶಸ್ಸಿಗೆ ಆತ್ಮವಿಶ್ವಾಸ, ಧೈರ್ಯ ಮುಖ್ಯ: ಕೆ.ಎಸ್.ಈಶ್ವರಪ್ಪ
ಮಂಗಳೂರು ದೇರಳಕಟ್ಟೆಆಸ್ಪತ್ರೆಯ ಡಾ. ಅನಂತನ್, ಡಾ. ಆಶಿವರ್ಮ, ಪ್ರಕಾಶ್ ಶವಪರೀಕ್ಷೆ ನಡೆಸಿದರು. ಬಳಿಕ ನಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಚೆಕಲ್ಲಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮಂಗಳೂರು ಎಫ್‌ಎಸ್‌ಎಲ್‌ನ ಡಾ. ವೀಣಾ ಮತ್ತು ತಂಡ ಹಾಗೂ ದೇರಳಕಟ್ಟೆಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ. ಮಹಾಬಲ ಶೆಟ್ಟಿ,ಡಾ. ಸೂರಜ್ ಮತ್ತು ತಂಡ ಪರಿಶೀಲನೆಯಲ್ಲಿ ಭಾಗಿಯಾಗಿದ್ದರು. ಸ್ಥಳದಲ್ಲಿ ಕಂಡು ಬಂದಿರುವ ಕುರುಹುಗಳ ಆಧಾರದಲ್ಲಿ ಮಹಿಳೆ ಸ್ಥಳೀಯರಲ್ಲ ಎಂದು ಅಂದಾಜಿಸಲಾಗಿದೆ.