
ಅಹಮದಾಬಾದ್(ಅ. 25) ಇದೊಂದು ವಿಚಿತ್ರ ಪ್ರಕರಣ. ಪತಿ ಮಾಡುತ್ತಿದ್ದ ಕ್ರೌರ್ಯ ಬಹಿರಂಗವಾಗಿದೆ. ಒಡವೆ ಹಿಂದಕ್ಕೆ ನೀಡುವ ವಿಚಾರಕ್ಕೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಂಡ ತನ್ನ ಖಾಸಗಿ ಪೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಅಹಮದಾಬಾದ್‌ನ ನಾರನ್‌ಪುರದ 33 ವರ್ಷದ ಖಾಸಗಿ ಕಂಪನಿಯ ಉದ್ಯೋಗಿ ಗಂಡ ಖತರ್ ನಾಕ್ ಕೆಲಸ ಮಾಡಲು ಪ್ಲಾನ್ ಮಾಡಿದ್ದ. ಕಿಂಜಾಲ್ (ಹೆಸರು ಬದಲಾಯಿಸಲಾಗಿದೆ) 2018 ರಲ್ಲಿ ಜಿಗ್ನೇಶ್ (ಹೆಸರು ಬದಲಾಯಿಸಲಾಗಿದೆ) ಜೊತೆ ಮದುವೆಯಾಗಿದ್ದರು. ಮದುವೆಯ ಸಮಯದಲ್ಲಿ, ಕಿಂಜಾಲ್ ಅವರ ತಂದೆ ಅವಳಿಗೆ 10 ತೊಲೆ ಚಿನ್ನವನ್ನು ನೀಡಿದ್ದರು. ನಂತರ, ಕಿಂಜಾಲ್ ಅವರ ಅನುಮತಿಯೊಂದಿಗೆ ಜಿಗ್ನೇಶ್ ಬಿಜಿನಸ್ ಆರಂಭಿಸಲು ಚಿನ್ನದ ಆಧಾರದಲ್ಲಿ ಶೇ. 8.5 ರೂ. ಬಡ್ಡಿಯಲ್ಲಿ ಸಾಲ ಕೊಡಿಸಿದ್ದರು. ಕಳೆದ ವರ್ಷ ಚಿನ್ನದ ಆಭರಣ ವಾಪಸ್ ತರುವಂತೆ ಹೇಳಿ ಗಂಡ ಹೆಂಡತಿಯನ್ನು ತವರಿಗೆ ಕಳಿಸಿದ್ದ.
ದುಡ್ಡಿಗಾಗಿ ಹೆಂಡತಿಯೊಂದಿಗಿನ ಸೆಕ್ಸ್ ಲೈವ್ ಬಿಟ್ಟ ಪತಿರಾಯ
ಹೆಂಡತಿ ತವರು ಮನೆಗೆ ಬರುತ್ತಿದ್ದಂತೆ ಆಕೆಯ ವಸ್ತುಗಳನ್ನು ಕಳಿಸಿದ ಗಂಡ ನನ್ನ ನಿನ್ನ ಸಂಬಂಧ ಇಲ್ಲಿಗೆ ಮುಗಿಯಿತು ಎಂದು ಆಕೆಯ ವಸ್ತುಗಳನ್ನೆಲ್ಲ ಕಳುಹಿಸಿದ್ದ. ಇದಾದ ಮೇಲೆ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರು. ಗಂಡ ಚಿನ್ನ ಹಿಂದಕ್ಕೆ ನೀಡಿದ ನಂತರ ವಿಚ್ಛೇದನ ಪಡೆಯಬಹುದು ಎಂದು ನ್ಯಾಯಾಲಯ ಹೇಳಿತ್ತು.
ಇದರಿಂದ ಕೋಪಗೊಂಡ ಪಾಪಿ ಪತಿ ಖಾಸಗಿ ಪೋಟೋಗಳನ್ನು ಕಳಿಸಿ ಇದನ್ನು ವೈರಲ್ ಮಾಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ