ಶ್ವಾನದ ಖಾಸಗಿ ಅಂಗದೊಳಗೆ ಮರದ ತುಂಡು ನುಗ್ಗಿಸಿದ್ದ ಕಿರಾತಕರು!

Published : Oct 25, 2020, 10:17 PM IST
ಶ್ವಾನದ ಖಾಸಗಿ ಅಂಗದೊಳಗೆ ಮರದ ತುಂಡು ನುಗ್ಗಿಸಿದ್ದ ಕಿರಾತಕರು!

ಸಾರಾಂಶ

ಮುಂಬೈನಲ್ಲೊಂದು ಘೋರ ಪ್ರಕರಣ/ ಶ್ವಾನದ ಮೇಲೆ ಲೈಂಗಿಕ ದೌರ್ಜನ್ಯ/ ಅಪರಚಿತರಿಂದ ಅಸಹ್ಯಕರ ಕೆಲಸ/ ಶ್ವಾನದ ಖಾಸಗಿ ಅಂಗದೊಳಕ್ಕೆ ಮರದ ತುಂಡು ನುಗ್ಗಿಸಿದ್ದ ದುಷ್ಕರ್ಮಿಗಳು

ಮುಂಬೈ(ಅ. 25) ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಶ್ವಾನವೊಂದು ಮುಂಬೈನ ಪೊವಾರಿ ಏರಿಯಾದಲ್ಲಿ ಸಿಕ್ಕಿದೆ.  ಎಂಟು ವರ್ಷದ ಶ್ವಾನದ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ರಕ್ತದ ಮಡುವಿನಲ್ಲಿ ಬಿದ್ದುಕೊಂಡಿತ್ತು. 

ನೂರಿ ಎನ್ನುವ ಶ್ವಾನದ ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ವಿಡಿಯೋ ದೇವಿ ಶೇಠ್ ಎಂಬುವವರಿಗೆ ಬಂದು ಸೇರುತ್ತದೆ.  ಶ್ವಾನದ ಖಾಸಗಿ ಅಂಗದೊಳಕ್ಕೆ ಹನ್ನೊಂದು ಇಂಚಿನ ಮರದ ತುಂಡನ್ನು ಸಿಕ್ಕಿಸಲಾಗಿತ್ತು.  ತಕ್ಷಣ ಎನ್‌ಜಿ ಒದ ನೆರವು ಪಡೆದುಕೊಂಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆಕೆ(ಶ್ವಾನ) ರಕ್ತದ ಮಡುವಿನಲ್ಲಿ ಬಿದ್ದುಕೊಂಡಿತ್ತು. ಅನೇಕರು ಪಕ್ಕದಲ್ಲಿಯೇ ನಡೆದುಕೊಂಡು ಹೋದರೂ ಯಾರೂ ಗಮನ ನೀಡಲಿಲ್ಲ. ನಮ್ಮ ಸಮಾಜ ಎಲ್ಲಿಗೆ ಬಂದು ತಲುಪಿದೆ? ಮೂಕ ಪ್ರಾಣಿಗೆ ಯಾರೂ ನೆರವು ನೀಡಲಿಲ್ಲ.. ಎಂದು ಎನ್‌ಜಿಒದ ಸಿಬ್ಬಂದಿ ಒಬ್ಬರು ನೊಂದು ನುಡಿಯುತ್ತಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಅನಿಮಲ್ ರೈಟ್ಸ್ (ಬಿಎಆರ್) ಪ್ರಕರಣ ದಾಖಲಿಸಿಕೊಂಡಿದೆ.   ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶ್ವಾನ ಚೇತರಿಸಿಕೊಳ್ಳುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!