"ಜೈ ಶ್ರೀ ರಾಮ್" ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ವ್ಯಕ್ತಿ ಥಳಿಸಿ ಮರಕ್ಕೆ ಕಟ್ಟಿ ಹಾಕಿದ ಪಾಪಿಗಳು: ಓವೈಸಿ ಆಕ್ರೋಶ

By BK Ashwin  |  First Published Jun 18, 2023, 7:16 PM IST

ಹೈದರಾಬಾದ್ ಸಂಸದ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ವಿಡಿಯೋವನ್ನು ಹಂಚಿಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.


ಹೊಸದಿಲ್ಲಿ (ಜೂನ್ 18, 2023): ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ಕಾರ್ಮಿಕನನ್ನು ಮರಕ್ಕೆ ಕಟ್ಟಿ, ಥಳಿಸಿ, ಭಾಗಶಃ ತಲೆ ಬೋಳಿಸಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ ಇಬ್ಬರು ವ್ಯಕ್ತಿಗಳನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಘಟನೆಯ ನಂತರ ತನ್ನ ಮಗನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಕೂಲಿ ಕಾರ್ಮಿಕ ಸಾಹಿಲ್‌ನ ತಂದೆ ಶಕೀಲ್ ಆರೋಪಿಸಿದ್ದಾರೆ. ಅಲ್ಲದೆ, ಆರೋಪಿಯೊಂದಿಗೆ ರಾಜಿ ಮಾಡಿಕೊಳ್ಳುವಂತೆ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದೂ ಅವರು ಮಾಧ್ಯಮಗಳಿಗೆ ತಿಳಿಸಿದರು.

ಪ್ರಕರಣದ ಮೂವರು ಆರೋಪಿಗಳ ಪೈಕಿ ಒಬ್ಬರು ಚಿತ್ರೀಕರಿಸಿದ ಘಟನೆಯ ವಿಡಿಯೋ ವೈರಲ್ ಆಗಿದ್ದು, ಇದು ರಾಜಕೀಯ ಬಿರುಗಾಳಿಯನ್ನೂ ಎಬ್ಬಿಸಿದೆ. ಹೈದರಾಬಾದ್ ಸಂಸದ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ವಿಡಿಯೋವನ್ನು ಹಂಚಿಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

दूसरी ख़बर: बुलंदशहर में एक दिहाड़ी मज़दूर को एक दरख़्त से बांध कर पीटा गया और JSR के नारे लगाने पर मजबूर किया गया।बाद में पुलिस की हमदर्दी तो देखिए मुजरिमों के खिलाफ़ कार्रवाई करने के बजाय साहिल को ही जेल भेज दिया।

अपने ऊपर हो रहे ज़ुल्म के खिलाफ़ फरयाद लेकर जाए तो कहां जाए? pic.twitter.com/T7iPckN6is

— Asaduddin Owaisi (@asadowaisi)

Tap to resize

Latest Videos

ಇದನ್ನು ಓದಿ: ಸಾಲ ವಾಪಸ್‌ ಕೊಡ್ಲಿಲ್ಲ ಅಂತ ವ್ಯಕ್ತಿಯ ಇಬ್ಬರು ಸೋದರಿಯರನ್ನು ಗುಂಡಿಕ್ಕಿ ಕೊಂದ ಪಾಪಿಗಳು!

"ಪೊಲೀಸರ ಸಹಾನುಭೂತಿಯನ್ನು ನೋಡಿ, ಅವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರು ಸಾಹಿಲ್‌ನನ್ನು ಜೈಲಿಗೆ ಕಳುಹಿಸಿದ್ದಾರೆ. ಅನ್ಯಾಯದ ವಿರುದ್ಧ ನಮ್ಮ ಮನವಿಗಳನ್ನು ನಾವು ಎಲ್ಲಿಗೆ ತೆಗೆದುಕೊಂಡು ಹೋಗಬೇಕು?" ಎಂದು ಹಿಂದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ವಾಯಿರ್‌ ಗ್ರಾಮದಲ್ಲಿ ಚಿತ್ರೀಕರಿಸಿದ ವಿಡಿಯೋದಲ್ಲಿ ಕಳ್ಳತನದ ಶಂಕೆಯ ಮೇಲೆ ಮೂವರು ಪುರುಷರು ಅದೇ ಗ್ರಾಮದ ನಿವಾಸಿ ಸಾಹಿಲ್‌ಗೆ ಥಳಿಸುತ್ತಿರುವುದನ್ನು ತೋರಿಸುತ್ತದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಸುರೇಂದ್ರನಾಥ್ ತಿವಾರಿ ಹೇಳಿದ್ದಾರೆ. ಹಾಗೂ "ವಿಡಿಯೊವನ್ನು ಗಮನದಲ್ಲಿಟ್ಟುಕೊಂಡು, ಕುಟುಂಬದಿಂದ ಬಂದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕಾಕೋಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ" ಎಂದೂ ಅವರು ಹೇಳಿದರು.

ಇದನ್ನೂ ಓದಿ: ಕುಡಿದು ಟೈಟಾಗಿದ್ದ ಮಹಿಳೆಯನ್ನು ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರವೆಸಗಿದ ಭಾರತೀಯ ಮೂಲದ ವಿದ್ಯಾರ್ಥಿ

ಆರೋಪಿಗಳನ್ನು ಗಜೇಂದ್ರ, ಸೌರಭ್ ಮತ್ತು ಧನ್ನಿ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಇನ್ನು, ಸಾಹಿಲ್‌ನ ತಂದೆ ಶಕೀಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ತನ್ನ ಮಗ ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋಗುತ್ತಿದ್ದಾಗ ಆರೋಪಿಗಳು ಆತನನ್ನು ಹಿಡಿದು ಮರಕ್ಕೆ ಕಟ್ಟಿ ಥಳಿಸಿದ್ದಾರೆ. "ನಮ್ಮ ಮನವಿಯನ್ನು ಯಾರೂ ಕೇಳುತ್ತಿಲ್ಲ, ಪೊಲೀಸರು ನಮ್ಮ ಮಗನನ್ನು ಎತ್ತಿಕೊಂಡು ಹೋಗಿ ಜೈಲಿಗೆ ಕಳುಹಿಸಿದ್ದಾರೆ’’ ಎಂದು ಹೇಳಿದ್ದಾರೆ.

ಅಲ್ಲದೆ, ನಾವು ಈ ಕೃತ್ಯದಲ್ಲಿ ಭಾಗಿಯಾದವರ ಹೆಸರನ್ನು ದೂರಿನಲ್ಲಿ ಹೇಳಿದ್ದೇವೆ. ಈ ಹಿನ್ನೆಲೆ, ಈಗ ನಮ್ಮನ್ನು ರಾಜಿ ಮಾಡಿಕೊಳ್ಳಲು ಕೇಳಲಾಗುತ್ತಿದೆ, ಒಂದು ವೇಳೆ ರಾಜಿ ಮಾಡಿಕೊಳ್ಳದಿದ್ದರೆ, ಅವರು ನಮ್ಮನ್ನು ಇಲ್ಲಿ ಇರಲು ಬಿಡುವುದಿಲ್ಲ ಎಂದು ನಮಗೆ ಬೆದರಿಕೆ ಹಾಕಲಾಗುತ್ತಿದೆ. ನಮಗೆ ನ್ಯಾಯ ಬೇಕು’’ ಎಂದು ಶಕೀಲ್ ಕಣ್ಣೀರು ಹಾಕುತ್ತಾ ಹೇಳಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ರೇಪ್‌ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ

ಇನ್ನೊಂದೆಡೆ, ಸಾಹಿಲ್ ಅವರ ತಾಯಿ ದಾಖಲಿಸಿದ ದೂರಿನಲ್ಲಿ ಆರೋಪಿಗಳು ತಮ್ಮ ಮಗನ ಮೊಬೈಲ್ ಫೋನ್ ಮತ್ತು ₹ 1,500 ನಗದನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಹಲವು ಬಾರಿ ಗ್ಯಾಂಗ್‌ ರೇಪ್‌: ಕೃತ್ಯ ಸೆರೆ ಹಿಡಿದು ಕಾಮುಕರ ಬ್ಲ್ಯಾಕ್‌ಮೇಲ್‌

click me!