
ಮೊಹಾಲಿ(ಅ. 05) ತನ್ನ ಸಹೋದರ ಮತ್ತು ಗೆಳೆಯನ ಜತೆ ಸರಸದಲ್ಲಿ( intimate ) ತೊಡಗಲು ಒಪ್ಪದ ಗೆಳತಿ ಮೇಲೆ ಬಾಯ್ ಫ್ರೆಂಡ್(Boy friend) ಮಾರಣಾಂತಿಕ ಹಲ್ಲೆ(Attack) ಮಾಡಿದ್ದಾನೆ.ಶನಿವಾರ ರಾತ್ರಿ ಪಂಜಾಬ್ ನ ನಯಗಾಂವದಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು ಹೋಟೆಲ್‌ಗೆ ಕರೆದೊಯ್ದು ಇಬ್ಬರು ಪುರುಷರೊಂದಿಗೆ ಮಲಗಲು ಕೇಳಿದ್ದ ಕಿರಾತಕ.
ಯುವತಿ ಗುರುಗ್ರಾಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಕಿರಾತಕ ( unemployed) ನಿರುದ್ಯೋಗಿ. ಫ್ಲಾಟ್ ನಲ್ಲಿ ವಾಸವಿದ್ದವ ಹಣಕ್ಕಾಗಿ ಹೀಗೆ ಮಾಡಿದ್ದಾನೆ ಎಂಬ ಆರೋಪ ಬಂದಿದೆ.
5 ವರ್ಷದಲ್ಲಿ 75 ಮದುವೆ, ನಂಬಿಸಿ ಕರೆತಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದ!
ಗೆಳೆಯನೊಂದಿಗೆ ಶನಿವಾರ ಯುವತಿ ನಯಗಾಂವ್‌ನ ಹೋಟೆಲ್‌ಗೆ ಹೋಗಿದ್ದಾಳೆ. ಈ ಸಮಯದಲ್ಲಿ ಕಂಠಪೂರ್ತಿ ಮದ್ಯ ಸೇವನೆ ಮಾಡಿದ ವ್ಯಕ್ತಿಯೊಬ್ಬ ಅಲ್ಲಿದ್ದ. ಈ ವೇಳೆ ಪಾಪಿ ಗೆಳೆಯ ತನ್ನ ಸಹೋದರ ಮತ್ತು ಸ್ನೇಹಿತನ ಜತೆ ನೀನು ಸಹಕರಿಸಬೇಕು ಎಂದು ಹೇಳಿದ್ದಾನೆ. ಅವರು ಹೊರಗೆ ನಿಂತಿದ್ದಾರೆ ನೀನು ಸಹಕರಿಸಬೇಕು ಎಂದು ಒತ್ತಡ ಹಾಕಿದ್ದಾನೆ.
ಇದಕ್ಕೆ ಒಪ್ಪದ ಯುವತಿ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಯುವತಿ ಮೂರ್ಛೆ ಹೋಗಿದ್ದು, ಆರೋಪಿಗಳು ಆಕೆಯನ್ನು ಹೋಟೆಲ್ ಹೊರಗೆ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಭಾನುವಾರ ಬೆಳಗ್ಗೆ ಗಾಯಗೊಂಡಿದ್ದ ಯುವತಿಯನ್ನು ಸ್ಥಳೀಯರು ಕಂಡಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗಿದೆ.
ಪೊಲೀಸರು ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡದ ಸೆಕ್ಷನ್(IPC) 323 (ಸ್ವಯಂಪ್ರೇರಣೆಯಿಂದ ನೋವನ್ನು ಉಂಟುಮಾಡುವ), 342 (ತಪ್ಪಾದ ಬಂಧನ), 308 (ತಪ್ಪಿತಸ್ಥ ನರಹತ್ಯೆಗೆ ಯತ್ನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆರೋಪಿಯ ಬಂಧನವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ