ಅತಿಯಾದ ಪ್ರೀತಿ ಎಂತೆಂತಾ ಕೃತ್ಯ ಮಾಡ್ಸತ್ತೆ: ಅಕ್ಕನಿಗೆ ಡಿವೋರ್ಸ್ ಕೇಳಿದ ಬಾವನ ಮೇಲೆ ಬಾಮೈದ ಹಲ್ಲೆ

Published : Apr 03, 2022, 06:14 PM ISTUpdated : Apr 03, 2022, 06:15 PM IST
ಅತಿಯಾದ ಪ್ರೀತಿ ಎಂತೆಂತಾ ಕೃತ್ಯ ಮಾಡ್ಸತ್ತೆ: ಅಕ್ಕನಿಗೆ ಡಿವೋರ್ಸ್ ಕೇಳಿದ ಬಾವನ ಮೇಲೆ ಬಾಮೈದ ಹಲ್ಲೆ

ಸಾರಾಂಶ

*  ಬಾಮೈದನಿಂದ ಏಟು ತಿಂದು ಆಸ್ಪತ್ರೆ ಪಾಲಾದ ಬಾವ *  2017ರಲ್ಲಿ ಮದುವೆಯಾಗಿದ್ದ ನಾಗೇಶ್-ಗೌತಮಿ *  ಆರೋಪಿ ಗಗನ್ ಹುಡುಕಾಟಕ್ಕೆ ಪೊಲೀಸರ ಶೋಧಕಾರ್ಯ

ವರದಿ: ಕಿರಣ್.ಕೆ.ಎನ್. ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಏ.03): ಕೆಲವೊಮ್ಮೆ ಒಬ್ಬರ ಮೇಲಿನ ಅತಿಯಾದ ಪ್ರೀತಿ ಎಂತೆಂತಾ ಕೃತ್ಯಗಳನ್ನ ಮಾಡೋಕು ಕಾರಣವಾಗುತ್ತೆ. ಅಕ್ಕನ ಮೇಲೆ ಅತಿಯಾದ ಪ್ರೀತಿ ಇಟ್ಟುಕೊಂಡಿದ್ದ ತಮ್ಮ ಅಕ್ಕನಿಗೆ ಡಿವೋರ್ಸ್(Divorce) ಕೇಳಿದ ಅಂತ ಬಾವನ ಮೇಲೆಯೇ ಮಾರಣಾಂತಿಕ ಹಲ್ಲೆ(Assault) ಮಾಡಿದ ಘಟನೆ ಇಂದು(ಭಾನುವಾರ) ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ನಾಗೇಶ್ ಹಾಗೂ ಗಗನ್ ಹಲ್ಲೆ ಮಾಡಿದ ಬಾಮೈದ ಅಂತ ಗುರುತಿಸಲಾಗಿದೆ. 

ಕೆಲವೊಮ್ಮೆ ನಮ್ಮೋರ ಮೇಲಿನ ಅತಿಯಾದ ಪ್ರೀತಿ(Love) ಕೆಟ್ಟ ಕೃತ್ಯಗಳಿಗೂ ಕಾರಣವಾಗುತ್ತೆ ಅನ್ನೋದಕ್ಕೆ ಈ ಕೇಸ್ ನಿದರ್ಶನ.  ಬೆಂಗಳೂರಿನ(Bengaluru) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿರೋ ನಾಗೇಶ್ ಎಂಬಾತ ಶಿವಮೊಗ್ಗದ ತೀರ್ಥಹಳ್ಳಿಯ ಗೌತಮಿ ಎಂಬಾಕೆಯನ್ನ 2017ರಲ್ಲಿ ಮದುವೆಯಾಗಿದ್ದ.  ಗೌತಮಿ ಕುಟುಂಬಸ್ಥರು ಅಷ್ಟೇ ಪ್ರೀತಿಯಿಂದ ಮದುವೆ ಮಾಡಿಕೊಟ್ಟಿದ್ರು. ಅಕ್ಕನ ಮೇಲೆ ಅತಿಯಾದ ಪ್ರೀತಿ ಹೊಂದಿರೋ ತಮ್ಮ ಗಗನ್ ಕೂಡ ಅಕ್ಕನ ಬಾಳು ಚೆಂದಾಗಿರಲಿ ಅಂತಾ ಅಕ್ಕ-ಬಾವನಿಗೆ ಹಾರೈಸಿದ್ದ. ಆದ್ರೆ 2019ರಲ್ಲಿ ಗೌತಮಿ-ನಾಗೇಶ್ ದಂಪತಿ ಮದ್ಯೆ ಕೌಟುಂಬಿಕ ಕಲಹ ಉಂಟಾಗಿತ್ತು. ಗಂಡ ಹೆಂಡತಿ ಜಗಳ ಕೊನೆಗೂ ನ್ಯಾಯಾಲಯ(Court) ಮೆಟ್ಟಿಲೇರಿ ಡಿವೋರ್ಸ್‌ವರೆಗೆ ಬಂದು ನಿಂತಿದೆ. ಇತ್ತ ಅಕ್ಕನ ಲೈಫ್ ಹಾಳಾಗುತ್ತೆ ಅನ್ನೋ ಭಯದಲ್ಲಿ ಬಾವನ ಮೇಲೆಯೇ ಬಾಮೈದ ಗಗನ್ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಅನ್ನೋ ಆರೋಪ(Allegation) ಕೇಳಿ ಬಂದಿದೆ.

ಓರ್ವನ ಹತ್ಯೆ, 6 ಜನರಿಗೆ ಗಾಯ: ಬೆಳಗಾವಿಯ ಗ್ಯಾಂಗ್‌ವಾರ್‌ ಭೀಕರತೆ ಬಿಚ್ಚಿಟ್ಟ ಬೊಲೆರೋ ವಾಹನ

ಕಳೆದ ಎರಡು ಮೂರು ದಿನಗಳಿಂದಲೂ ಬಾವನನ್ನ ಫಾಲೋ ಮಾಡ್ತಿದ್ದ ಆರೋಪಿ ಗಗನ್ ಆತನ ಮೇಲೆ ಕೋಪ ನೆತ್ತಿಗೇರಿಸಿಕೊಂಡಿದ್ದ. ಅಕ್ಕನ ಡಿವೋರ್ಸ್ ಕೇಸ್ ನ್ಯಾಯಾಲಯದವರೆಗೂ ಹೋಗಿದೆ ಇನ್ನೇನು ಡಿವೋರ್ಸ್ ಬಂದ್ರೆ ಅಕ್ಕನ ಲೈಫ್ ಹಾಳಾಗುತ್ತೆ ಅಂತಾ ಅಂದುಕೊಂಡು ಬಾವನಿಗೆ ಹಲ್ಲೆ ಮಾಡೋಕೆ ಎಲ್ಲಾ ತಯಾರಿ ಮಾಡ್ಕೊಂಡಿದ್ದ, ಒಂದು ರಾಡ್ ಮತ್ತು ಡ್ರ್ಯಾಗರ್ ತೆಗೆದುಕೊಂಡು ಸೀದಾ ಬಾವನ ಆಫೀಸಿಗೆ ನುಗ್ಗಿದ್ದ ಗಗನ್ ಏಕಾಏಕಿ ಆತನ ಮೇಲೆ ಹಲ್ಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಆರೋಪಿ ಮಾರಕಾಸ್ತ್ರಗಳನ್ನ ತೆಗೆದುಕೊಂಡು ಹೋಗ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇತ್ತ ಗಾಯಾಳು ನಾಗೇಶ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ. ರಾಮಮೂರ್ತಿ ನಗರ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ(Accused) ಗಗನ್ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. 

QR Code Scam: ಸೈನಿಕರ ಹೆಸರಲ್ಲಿ ವಿಜಯಪುರ ವ್ಯಾಪಾರಿಗಳಿಗೆ ವಂಚನೆ ಜಾಲ.. ಹುಷಾರ್!

ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್ ಉದ್ಯೋಗಿ!

ಹುಬ್ಬಳ್ಳಿ: ಮೊದಲಿನಂತೆ ಸಾಲ ಪಡೆಯೋಕೆ ಬ್ಯಾಂಕ್‌ಗಳಿಗೆ (Bank) ಅಲಿಯೋದು ಬೇಕಾಗಿಲ್ಲ. ಕುಳಿತಲ್ಲೇ ಆನ್‌ಲೈನ್ (Online) ಮೂಲಕ ಲೋನ್ (Loan) ಕೊಡ್ತೀವಿ ಅಂತ ಹೊಸ ಹೊಸ ಆಪ್‌ಗಳು (App) ಹುಟ್ಟಿಕೊಂಡಿವೆ. ವ್ಯಾಪಾರ ಮಾಡೋಕೆ, ವಾಹನ ಖರೀದಿಗೆ, ಅಂತೇಳಿ ಕ್ಷಣ ಮಾತ್ರದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಮಾಡ್ತಾರೆ. ಹಾಗಂತ ನೀವು ಸಾಲ ತೆಗದುಕೊಂಡರೆ ನಿಮ್ಮ ಜೀವನವೇ ಬರ್ಬಾದ್ ಮಾಡ್ತಾರೆ ಈ ಆನ್‌ಲೈನ್ ಸಾಲ‌ ನೀಡುವ ಆ್ಯಪ್‌ಗಳು. ಅದಕ್ಕೆ ತಾಜ ಉದಾಹರಣೆ ಇಲ್ಲಿದೆ‌ ನೋಡಿ. 

ಇದು ಲೋನ್ ಆ್ಯಪ್‌ನಲ್ಲಿ ಬ್ಯಾಂಕ್ ಸಿಬ್ಬಂದಿಗೇ ಪಂಗನಾಮ ಹಾಕಿರೋ ಘಟನೆ.  ಇದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಲೋನ್ ಕ್ಯೂಬ್ (Loan Cube) ಎನ್ನುವ ಆ್ಯಪ್‌ನಲ್ಲಿ ಸಾಲ ಪಡೆದಿದ್ದ ವ್ಯಕ್ತಿ ಕಿರುಕುಳಕ್ಕೆ ತಾಳದೆ ಲಕ್ಷಾಂತರ ರೂಪಾಯಿ ಹಣ ಪಾವತಿಸಿಯೂ ಕಾಟ ತಪ್ಪದೆ ಪೊಲೀಸರ (Police) ಮೊರೆ ಹೋಗಿದ್ದಾನೆ.  ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ರೋಹನ್ ವಂಚನೆಗೆ ಒಳಗಾದ ವ್ಯಕ್ತಿ. ಲೋನ್ ಕ್ಯೂಬ್ ಆ್ಯಪ್ ಮೂಲಕ ಮೊದಲು 8 ಸಾವಿರ ಲೋನ್ ಪಡೆದಿದ್ದ. 8 ಸಾವಿರಕ್ಕೆ ಆ್ಯಫ್ 4960 ರೂ ಹಣವನ್ನ ಮಾತ್ರ ಲೋನ್ ಆ್ಯಪ್ ನೀಡಿತ್ತು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!