ಯುವತಿಯಂತೆ ವೇಷ ಧರಿಸಿ ಲಕ್ಷ ಲಕ್ಷ ಮೌಲ್ಯದ ಅಂಥೋರಿಯಂ ಗಿಡ ಕದ್ದವ ಅಂದರ್

By Anusha KbFirst Published Jan 14, 2023, 3:24 PM IST
Highlights

ಹುಡುಗಿಯಂತೆ ವೇಷ ಧರಿಸಿ ಲಕ್ಷಾಂತರ ಮೌಲ್ಯದ ಅಂಥೋರಿಯಂ ಗಿಡಗಳನ್ನು ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ನೆಯ್ಯಟ್ಟಿಂಕರ: ಹುಡುಗಿಯಂತೆ ವೇಷ ಧರಿಸಿ ಲಕ್ಷಾಂತರ ಮೌಲ್ಯದ ಅಂಥೋರಿಯಂ ಗಿಡಗಳನ್ನು ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.  ಬಂಧಿತನನ್ನು 28 ವರ್ಷ ಪ್ರಾಯದ ವಿನೀತ್ ಕ್ಲೀಟಸ್  ಎಂದು ಗುರುತಿಸಲಾಗಿದೆ.  ಈತ ಹೀಗೆ ಹೆಣ್ಣು ಮಕ್ಕಳ ವೇಷ ಧರಿಸಿ ಬರೋಬ್ಬರಿ 2 ಲಕ್ಷ ಮೌಲ್ಯದ   ಸುಮಾರು 200 ಅಂಥೋರಿಯಂ ಗಿಡಗಳನ್ನು ಕದ್ದಿದ್ದಾನೆ. 

ಬಂಧಿತ ವಿನೀತ್ ಕ್ಲೀಟಸ್ (Vineeth Cletus), ಕೊಲ್ಲಂನ (Kollam) ಛವರ ಗ್ರಾಮದ ಪುಡುಕ್ಕಡ್ (Pudukkad) ಕಿಝಕ್ಕತ್ತಿಲ್ ನಿವಾಸಿಯಾಗಿದ್ದು,  ಈತ  ಐಆರ್‌ಇ ಅಧಿಕಾರಿ ಜಪಮಣಿ  ಎಂಬುವವರ ಪತ್ನಿ ವಿಲಾಸಿನಿ ಬಾಯಿ ಎಂಬುವವರು,  ಅಮರವಿಲ ಕೊಲ್ಲ ಎಂಬಲ್ಲಿಯ ಮಂಚಂಕುಝಿ ಎಂಬಲ್ಲಿ ತಮ್ಮ ಹಸಿರು ಮನೆಯಲ್ಲಿ  ವಿಶೇಷವಾಗಿ ಬೆಳೆಸಿದ್ದ ಹಲವು ವಿವಿಧ ಬಗೆಯ 200 ಕ್ಕೂ ಹೆಚ್ಚು ಅಂಥೋರಿಯಂ ಗಿಡಗಳನ್ನು ಕದ್ದಿದ್ದ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೆಚ್ಚಾಯಿತು ಕಳ್ಳರ‌ ಕಾಟ: ಬೀಗ ಹಾಕಿದ ಮನೆಗಳೇ ಟಾರ್ಗೆಟ್

ಈ ಅಂಥೋರಿಯಂ ಗಿಡಗಳ ಮಾಲೀಕರಾದ ಜಪಮಣಿ (Japamani) ಹಾಗೂ ವಿಲಾಸಿನಿ ಭಾಯ್ (Vilaasini)2017ರಲ್ಲಿ ರಾಷ್ಟ್ರಪತಿ ಅವರಿಂದ ಅಲಂಕಾರಿಕ ಗಿಡಗಳ ನಿರ್ವಹಣೆಗಾಗಿ ಪ್ರಶಸ್ತಿಯನ್ನು ಗಳಿಸಿದ್ದರು.  ಇದಕ್ಕೂ ಮೊದಲಿನಿಂದ ಅಂದರೆ 2011ರ ಮಾರ್ಚ್‌ನಿಂದಲೇ ಆರೋಪಿ ಹೆಣ್ಣಿನಂತೆ ವೇಷ ಧರಿಸಿ ಗಿಡಗಳನ್ನು ಕದಿಯಲು ಆರಂಭಿಸಿದ ಎಂಬುದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ.  ಈ ಬಗ್ಗೆ ತನಿಖೆ ಆರಂಭಿಸಿ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಈ ಆರೋಪಿ ಸಿಕ್ಕಿ ಬಿದ್ದಿದ್ದ.  

ಇದಾದ ಬಳಿಕ ಆರೋಪಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ಹೀಗೆ ಕದ್ದ ಆಂಥೋರಿಯಂ ಗಿಡಗಳನ್ನು ಆತ ಸಾಮಾಜಿಕ ಜಾಲತಾಣಗಳ (Social Media) ಮೂಲಕ ಮಾರಾಟ ಮಾಡುತ್ತಿದ್ದ. ಅಲ್ಲದೇ ಆರೋಪಿ ಈ ಹಿಂದೆಯೂ ಇಂತಹ ಕೆಲಸದಲ್ಲಿ ಭಾಗಿಯಾದ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ನಂತರ ಪೊಲೀಸ್ ಅಧಿಕಾರಿಗಳು ಈತನ ಬಂಧನಕ್ಕೆ ತಂಡ ರಚಿಸಿ ಆರೋಪಿಯನ್ನು ಬಂಧಿಸಿದ್ದಾರೆ. 

Bengaluru: ಬಿಬಿಎಂಪಿಯ ಕನ್ನಡತಿ ವೈದ್ಯೆಯ ಮೇಲೆ ಮಲೆಯಾಳಿ ಯುವತಿಯ ಹಲ್ಲೆ: ಕನ್ನಡಕ್ಕೆ ಅಪಮಾನ

click me!