Koppala: ಪ್ರೀತಿ ನೀರಾಕರಿಸಿದ ಮನೆಯವರು, ಕತ್ತು ಕೊಯ್ದುಕೊಂಡು ಪ್ರೇಮಿಗಳ ಆತ್ಮಹತ್ಯೆ

By Gowthami K  |  First Published Jan 14, 2023, 3:16 PM IST

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಮನೆಯವರು ಪ್ರೀತಿ ನಿರಾಕರಿಸಿದ್ದಕ್ಕೆ  ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಜರುಗಿದೆ.


ಕೊಪ್ಪಳ (ಜ.14): ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ  ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಜರುಗಿದೆ. ಪ್ರೇಮಿಗಳಿಬ್ಬರು ಚಾಕುವಿನಿಂದ  ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಯುಸಿ ಓದುತ್ತಿರುವ 17ರ ಹರೆಯದ ಸುಮಾ ಮತ್ತು ಪಿಯುಸಿ ಮುಗಿಸಿ ಐಟಿಐ ಓದುತ್ತಿದ್ದ  ಪ್ರಕಾಶ್ (20) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.  ಕಳೆದ ಹಲವು ದಿನಗಳಿಂದ ಪ್ರೇಮಿಗಳು ಪ್ರೀತಿಸುತ್ತಿದ್ದರು.  ಇವರಿಬ್ಬರ ಪ್ರೀತಿಗೆ ಹುಡುಗಿ ಮನೆಯಲ್ಲಿ ವಿರೋಧ ಇತ್ತು. ಈ ಹಿನ್ನಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಡುಗಿ ಮನೆಯೇ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯೊಗಾಥಾನ್ ವಿಶ್ವದಾಖಲೆ ಕಾರ್ಯಕ್ರಮದ ರಿಹರ್ಸಲ್ ವೇಳೆ  ಸೌಂಡ್ ಬಾಕ್ಸ್ ಬಿದ್ದು ವಿದ್ಯಾರ್ಥಿ ಗಂಭೀರ
ಹಾವೇರಿ: ನಾಳೆ ನಡೆಯಲಿರುವ ಯೊಗಾಥಾನ್ ವಿಶ್ವದಾಖಲೆ ಕಾರ್ಯಕ್ರಮದ ಹಿನ್ನೆಲೆ ರಿಹರ್ಸಲ್ ವೇಳೆ ಸೌಂಡ್ ಬಾಕ್ಸ್ ಬಿದ್ದು 6ನೇ ತರಗತಿ ವಿದ್ಯಾರ್ಥಿಗೆ ಗಂಭೀರ ಗಾಯವಾಗಿರುವ ಘಟನೆ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಸಮೀರ ಬಿಜ್ಜೂರ 12 ವರ್ಷದ ಗಾಯಗೊಂಡ ಬಾಲಕನಾಗಿದ್ದಾನೆ. ಈತ ಲಯನ್ಸ್ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ. ಘಟನೆಯಲ್ಲಿ ಹೊಟ್ಟೆಯ ಭಾಗದಲ್ಲಿ ಪೆಟ್ಟು ಬಿದ್ದು ಗಾಯವಾಗಿದೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ವಿದ್ಯಾರ್ಥಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ‌ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿ ಹಾಗೂ ಗಾಯಾಳುವಿನ ಪೋಷಕರಲ್ಲಿ ಜಿಲ್ಲಾಧಿಕಾರಿ ಧೈರ್ಯ ತುಂಬಿದ್ದಾರೆ.

Latest Videos

undefined

ಬಾಯ್‌ಫ್ರೆಂಡ್ ಬರ್ತ್‌ಡೇ ಆಚರಿಸಲು ಸ್ವಂತ ಮನೆಯನ್ನೇ ದೋಚಿದ 18ರ ಹುಡುಗಿ

ಸಾಲಕ್ಕೆ ಹೆದರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರ​ಣು
ಶಿವಮೊಗ್ಗ: ಇಲ್ಲಿನ ಮಿಳಘಟ್ಟದ ಮೊದಲನೇ ತಿರುವಿನಲ್ಲಿ ವಾಸವಿರುವ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಭಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಲವ್​ ಜಿಹಾದ್​ಗೆ ನಟಿ ಬಲಿ? ನಟ ಶೀಜಾನ್​ ಖಾನ್​ಗೆ ಸಿಗಲಿಲ್ಲ ಬೇಲ್​, ಕೋರ್ಟ್​ ಹೇಳಿದ್ದೇನು?

ಪರಂದಯ್ಯ(70), ದಾನಮ್ಮ(60), ಮಂಜುನಾಥ್‌ (25) ಮೃತ ದುರ್ದೈವಿಗಳು. ದಾನಮ್ಮ ಮತ್ತು ಪರಂದಯ್ಯ 40 ವರ್ಷಗಳ ಹಿಂದೆ ವಿವಾಹವಾಗಿದ್ದರು. ಕೆಲ ವರ್ಷಗಳ ಹಿಂದೆ ಶಿವಮೊಗ್ಗದಿಂದ ಹೊಸಪೇಟೆಗೆ ಹೋಗಿ ನೆಲಸಿದ್ದರು. ಹೊಸಪೇಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಇವರು 4 ವರ್ಷದ ಹಿಂದೆ ಹೊಸಪೇಟೆಯಿಂದ ಪುನಃ ಶಿವಮೊಗ್ಗಕ್ಕೆ ಬಂದು ನೆಲೆಸಿದ್ದರು. ಮಿಳಘಟ್ಟದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರಿಗೆ ಮಕ್ಕಳಿಲ್ಲದ ಕಾರಣ 20 ವರ್ಷ ಹಿಂದೆ ಮಂಜು ನಾಥ್‌ನನ್ನು ದತ್ತು ಪಡೆದಿದ್ದರು. ದತ್ತು ಮಗ ಮಂಜನಾಥ್‌ಗೆ ಪಾಶ್ರ್ವವಾಯು ಹೊಡೆದಿತ್ತು. ಇತನ ಚಿಕಿತ್ಸೆಗೆ ಹಲವಡೆ ಸಾಲ ಮಾಡಿಕೊಂಡಿದ್ದರು. ಮಾಡಿಕೊಂಡ ಸಾಲ ತೀರಿಸಲಾಗದೆ ಸಾಲಕ್ಕೆ ಹೆದರಿ ದತ್ತು ಮಗ ಮಂಜುನಾಥ್‌ ಜೊತೆ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

click me!