Latest Crime News: ಹೈದರಾಬಾದ್‌ನಲ್ಲಿ 58 ವರ್ಷದ ವ್ಯಕ್ತಿಯನ್ನು ವಿವಿಧ ಫೋನ್ ಸಂಖ್ಯೆಗಳಿಂದ ಮಹಿಳೆಯರಿಗೆ ನೀಲಿ ಚಿತ್ರಗಳನ್ನು ಕಳುಹಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಹೈದರಾಬಾದ್ (ಜು. 07): ಹೈದರಾಬಾದ್‌ನಲ್ಲಿ 58 ವರ್ಷದ ವ್ಯಕ್ತಿಯನ್ನು ವಿವಿಧ ಫೋನ್ ಸಂಖ್ಯೆಗಳಿಂದ (Phone Numbers) ಮಹಿಳೆಯರಿಗೆ ನೀಲಿ ಚಿತ್ರಗಳನ್ನು (Porn Video) ಕಳುಹಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ರೈಸುದ್ದೀನ್ ( Raisuddin) ಎಂದು ಗುರುತಿಸಲಾಗಿರುವ ವ್ಯಕ್ತಿಯನ್ನು ಹೈದರಾಬಾದ್‌ನ ಬಜಾರ್‌ಘಾಟ್ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದೆ. ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ರಚಿಸಲಾದ ತೆಲಂಗಾಣ ಪೊಲೀಸರ ವಿಭಾಗವಾದ ಶೀ (SHE) ತಂಡಗಳು ಆರೋಪಿಯನ್ನು ಬಂಧಿಸಿವೆ. ರಾಜ್ಯದಲ್ಲಿ ಬಾಲ್ಯವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿಯೂ ಈ ವಿಭಾಗ ಕಾರ್ಯನಿರ್ವಹಿಸುತ್ತಿದೆ.
ರೈಸುದ್ದೀನ್ ತನ್ನ ಪತ್ನಿಯೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲದ ಕಾರಣ ಕಳೆದ ಕೆಲವು ತಿಂಗಳಿನಿಂದ ಮನನೊಂದಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಆದ್ದರಿಂದ, ಆರೋಪಿ ಮಹಿಳೆಯರ ಫೇಸ್‌ಬುಕ್ ಖಾತೆಗಳನ್ನು (Facebook Accounts) ಹುಡುಕಾಡಿ, ಅವರ ಫೇಸ್‌ಬುಕ್ ಐಡಿಗಳೊಂದಿಗೆ ತಮ್ಮ ಫೋನ್ ಸಂಖ್ಯೆಯನ್ನು ನೋಂದಾಯಿಸಿದ ಮಹಿಳೆಯರನ್ನು ಗುರಿಯಾಗಿಸಿದ್ದ. ಅವರ ಫೋನ್ ನಂಬರ್ ತೆಗೆದುಕೊಂಡು ಆ ಮಹಿಳೆಯರೊಂದಿಗೆ ಪೋರ್ನ್ ವೀಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದ ಎನ್ನಲಾಗಿದೆ.
“ತನಿಖೆಯ ಸಂದರ್ಭದಲ್ಲಿ, ಅವನು ಕಳೆದ ಕೆಲವು ತಿಂಗಳುಗಳಿಂದ ಮೂರು ವಿಭಿನ್ನ ಸಂಖ್ಯೆಗಳಿಂದ 5 ಕ್ಕೂ ಹೆಚ್ಚು ಮಹಿಳೆಯರಿಗೆ ಪೋರ್ನ್ ವೀಡಿಯೊಗಳನ್ನು ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ. ಮಹಿಳೆಯರಯ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ (Block) ಮಾಡಿದರೆ, ಅರೋಪಿ ಮತ್ತೊಂದು ಫೋನ್ ಸಂಖ್ಯೆಯಿಂದ ಆಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ" ಎಂದು ಶೀ ತಂಡಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳದಿಂಗಳ ಬಾಲೆಗೆ ಮನಸೋತು ಕೊಲೆಯಾದ ಯುವಕ: ಸುಪಾರಿ ಪಡೆದು ಕೊಲೆ ಮಾಡಿಸಿದ ಲೇಡಿ ಡಾನ್
ಆರೋಪಿ ಕಿರುಕುಳವನ್ನು ಸಹಿಸಲಾಗದೆ, ಮಹಿಳೆಯೊಬ್ಬರು ಶೀ ಟೀಮ್‌ಗಳನ್ನು ಸಂಪರ್ಕಿಸಿದ್ದು, ನಂತರ ಬೋವನಪಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. "ತನಗೆ ಬೇರೆ ಬೇರೆ ನಂಬರ್‌ಗಳಿಂದ ಪೋರ್ನ್ ವಿಡಿಯೋಗಳು ಬರುತ್ತಿವೆ ಎಂದು ಮಹಿಳೆ ಹೇಳಿದ್ದಾರೆ. ಇದಲ್ಲದೆ, ಅವರು ಪ್ರತಿ ಬಾರಿ ನಂಬರನ್ನು ನಿರ್ಬಂಧಿಸಿದಾಗ, ಮತ್ತೊಂದು ಸಂಖ್ಯೆಯಿಂದ ಪೋರ್ನ್ ವೀಡಿಯೊಗಳನ್ನು ಸ್ವೀಕರಿಸಿದ್ದರು. ಇದಾದ ಬಳಿಕ ಮಹಿಳೆ ತೀವ್ರ ಸಂಕಟಕ್ಕೊಳಗಾಗಿದ್ದರು. 58 ವರ್ಷದ ರೈಸುದ್ದೀನ್ ಎಂಬ ಆರೋಪಿಯನ್ನು ಎಸ್‌ಎಚ್‌ಇ ತಂಡಗಳು ಈಗ ಬಂಧಿಸಿವೆ. ಆತನನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಬೋವನಪಲ್ಲಿ ಠಾಣೆಗೆ ಹಸ್ತಾಂತರಿಸಲಾಗಿದೆ