Kodagu: ಹಿಂದೂ ಧರ್ಮ ವಿರೋಧಿ ಪುಸ್ತಕ ಮಾರಾಟ ಯತ್ನ: ಓರ್ವನ ಬಂಧನ

By Govindaraj S  |  First Published Jan 8, 2023, 11:00 AM IST

ಹಿಂದೂ ಧರ್ಮದ ಅವಹೇಳನ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಿದ ಘಟನೆ ಕೊಡಗಿನಲ್ಲಿ ನಡೆದಿದೆ. ನಿಶಾಂತ್ ಹಿಂದೂ ಧರ್ಮ ಅವಹೇಳನ ಆರೋಪದಲ್ಲಿ ಬಂಧಿತ ವ್ಯಕ್ತಿ.


ಕೊಡಗು (ಜ.08): ಹಿಂದೂ ಧರ್ಮದ ಅವಹೇಳನ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಿದ ಘಟನೆ ಕೊಡಗಿನಲ್ಲಿ ನಡೆದಿದೆ. ನಿಶಾಂತ್ ಹಿಂದೂ ಧರ್ಮ ಅವಹೇಳನ ಆರೋಪದಲ್ಲಿ ಬಂಧಿತ ವ್ಯಕ್ತಿ. ಕ್ರೈಸ್ತ ಧರ್ಮದ ಪುಸ್ತಕ ಮಾರಾಟ ಮಾಡುವ ವೇಳೆ ಅವಹೇಳನ ಆರೋಪವಿದ್ದು, ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ನಿಶಾಂತ್ ಪುಸ್ತಕ ಮಾರುತ್ತಿದ್ದ. ಈ ವೇಳೆ ಹಿಂದೂ ದೇವತೆಗಳಿಂದ ಮನುಷ್ಯನ ಆರೋಗ್ಯ ಸುಧಾರಿಸಲು ಸಾಧ್ಯವಿಲ್ಲ ಎಂದು ಜನರಿಗೆ ಹೇಳಿ ಕ್ರೈಸ್ತಧರ್ಮದ ಬೆಳಕು ಪುಸ್ತಕ ಮಾರಾಟಕ್ಕೆ ಯತ್ನಿಸಿದ್ದಾನೆ. ಈ ಬಗ್ಗೆ ಮಡಿಕೇರಿಯ ಸುಭಾಷ್ ನಗರದ ಕುಮಾರ್ ನಿಶಾಂತ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪುಸ್ತಕ ಮಾರುತ್ತಿದ್ದ ನಿಶಾಂತ್‌ನನ್ನು ಬಂಧಿಸಲಾಗಿದೆ. ಸದ್ಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್‌ ಕಳ್ಳರ ಬಂಧನ: ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಜನರಿಂದ ಮೊಬೈಲ್‌ ದೋಚಿದ್ದ ನಾಲ್ವರು ಕಿಡಿಗೇಡಿಗಳನ್ನು 90 ಸಿಸಿಟಿವಿ ಕ್ಯಾಮೆರಾಗಳ ಮಾಹಿತಿ ಆಧರಿಸಿ ಮೈಕೋ ಲೇಔಟ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಸಿ.ಕೆ.ಪಾಳ್ಯದ ಮಾರಿಮುತ್ತು, ಬಿಲ್ಲವಾರದಹಳ್ಳಿಯ ಶೋಯೆಬ್‌ ಅಲಿಯಾಸ್‌ ಸೇಬು, ಭರತ್‌ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಜೆ.ಡಿ.ಮರದ ಸ್ಲಂನ ಅಜಯ್‌ ಪತ್ತೆಗೆ ತನಿಖೆ ಮುಂದುವರೆದಿದೆ. ಆರೋಪಿಗಳಿಂದ .8.55 ಲಕ್ಷ ಮೌಲ್ಯದ 35 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. 

Tap to resize

Latest Videos

undefined

ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ: ಉದ್ಯಮಿ ಶರತ್ ಭೂಪಾಳಂ ಸಾವು

ಇತ್ತೀಚಿಗೆ ಬಿಳೇಕಹಳ್ಳಿ 1ನೇ ಅಡ್ಡರಸ್ತೆಯಲ್ಲಿ ನೆಲೆಸಿರುವ ಎಸ್‌.ಸುಜಿತ್‌ ಅವರು, ಬೆಳಗ್ಗೆ ಊರಿಂದ ಬಂದು ಬಿಳೇಕಹಳ್ಳಿ ಬಸ್‌ ನಿಲ್ದಾಣದಲ್ಲಿ ಬಸ್‌ ಇಳಿದು ಮನೆಗೆ ತೆರಳುವಾಗ ಐ ಪೋನ್‌-11 ಮೊಬೈಲ್‌ ಅನ್ನು ಕಿಡಿಗೇಡಿಗಳು ದೋಚಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಗಿರೀಶ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ನಾಗರಾವ್‌ ಹಾವನೂರು ತಂಡವು, ಕೃತ್ಯ ನಡೆದ ಸುತ್ತಮುತ್ತಲಿನ 90 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳ ಜಾಡು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೈಕ್‌ ಕಳ್ಳನ ಬಂಧನ: ಜಮಖಂಡಿ ಶಹರ ಠಾಣೆ ಪೊಲೀಸರು ಬೈಕ್‌ ಕಳ್ಳನ ಬಂಧಿಸಿ, ಅಂದಾಜು 7 ಲಕ್ಷ ಮೌಲ್ಯದ 14 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಎಸ್ಪಿ ಜಯಪ್ರಕಾಶ ಹಾಗೂ ಡಿವೈಎಸ್ಪಿ ಶಾಂತವೀರ, ಸಿಪಿಐ ಗುರುನಾಥ ಚವಾಣ ಮಾರ್ಗದರ್ಶನದಲ್ಲಿ ಪಿಎಸ್‌ಐ ಬಸವರಾಜ ಕೊಣ್ಣೂರ ನೇತೃತ್ವದಲ್ಲಿ ಅಪರಾಧ ತನಿಖಾ ತಂಡ ರಚಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. 

ರೋಲ್ಡ್‌ಗೋಲ್ಡ್‌ ಎಂದು ಕಸದ ಗುಡ್ಡೆಗೆ ಅಸಲಿ ಚಿನ್ನ ಎಸೆದ ಕಳ್ಳ!

ನಗರದ ಬಸ್‌ ನಿಲ್ದಾಣದ ಬಳಿ ಶನಿವಾರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾತಲಗಾಂವದ ನಿವಾಸಿ ಅನಿಲ ವಡ್ಡಿ (23) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳೆದ ಒಂದು ವರ್ಷದಲ್ಲಿ ಬಾಗಲಕೋಟ ಜಿಲ್ಲೆಯ ಜಮಖಂಡಿ, ಬೀಳಗಿ, ಸಾವಳಗಿ, ಬಾದಾಮಿ, ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ವಿಜಯಪೂರ ಜಿಲ್ಲೆಯ ತಿಕೋಟಾ, ಬಬಲೇಶ್ವರ ಠಾಣೆಯ ವ್ಯಾಪ್ತಿಯಲ್ಲಿ ಒಟ್ಟು 7 ಲಕ್ಷ ಮೌಲ್ಯದ ಬೈಕ್‌ಗಳ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದು,ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಗಿದೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಬ್ಬಂದಿ ಶೇಖರ ಘಾಟಗೆ, ಎಎಸ್‌.ಐ ಎಚ್‌.ಎಸ್‌.ಮಂಡಗಾರ, ಎಂ.ಎಸ್‌.ನಿಂಗವ್ವಗೋಳ, ಜಗದೀಶ ದಳವಾಯಿ ಭಾಗವಹಿಸಿದ್ದರು.

click me!