Bengaluru: ಮ್ಯಾಟ್ರಿಮೋನಿ ಸೈಟ್‌ ನಲ್ಲಿ ಪರಿಚಯವಾಗಿ ಯುವತಿಗೆ 43.51 ಲಕ್ಷ ವಂಚಿಸಿದ ಆನ್‌ಲೈನ್ ಮದುವೆ ಗಂಡು!

By Gowthami K  |  First Published May 16, 2023, 6:05 PM IST

ಮ್ಯಾರೇಜ್ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಗೆ ಬರೋಬ್ಬರಿ 43.51 ಲಕ್ಷ ರೂ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಬೆಂಗಳೂರು (ಮೇ.16): ಮ್ಯಾರೇಜ್ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಗೆ ಲಕ್ಷಾಂತರ ಹಣ ವಂಚನೆ ಮಾಡಿರುವ ಘಟನೆ ನಗರದ ಆರ್ ಟಿ ನಗರದಲ್ಲಿ ನಡೆದಿದೆ. ಆರ್ ಟಿ‌ ನಗರದ ಬಳಿಯಿರುವ ಗಂಗಾನಗರದ 39 ವರ್ಷದ ಮಹಿಳೆಗೆ ಯುವಕ ರಾಜೇಶ್ ಕುಮಾರ್ ಮೋಸ ಮಾಡಿದ್ದಾನೆ. ಈ ಬಗ್ಗೆ ಈಗಾಗಲೇ 39 ವರ್ಷದ ಮಹಿಳೆ  ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. 39 ವರ್ಷದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಹಂತ ಹಂತವಾಗಿ  43.51 ಲಕ್ಷ ಪಡೆದು  ವಂಚಿಸಿದ್ದು, ಈ ಸಂಬಂಧ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇನ್ನೂ 'ದೂರುದಾರ ಮಹಿಳೆ, ಭಾರತ್ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಅಕೌಂಟ್ ಓಪನ್ ಮಾಡಿದ್ದರು. ಅಲ್ಲಿಯೇ ಅವರಿಗೆ ಆರೋಪಿ ರಾಜೇಶ್‌ಕುಮಾರ್ ಪರಿಚಯವಾಗಿತ್ತು. ಇಂಗ್ಲೆಂಡ್‌ನಲ್ಲಿ ವಾಸವಿರುವುದಾಗಿ ಹೇಳಿದ್ದ ರಾಜೇಶ್, ಹಲವು ದೇಶಗಳಲ್ಲಿ ನೂರಾರು ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿರುವುದಾಗಿ ತಿಳಿಸಿದ್ದ. ಅದನ್ನು ನಂಬಿದ್ದ ಮಹಿಳೆ, ಆತನ ಜೊತೆ ಹೆಚ್ಚು ಮಾತನಾಡಲಾರಂಬಿಸಿದ್ದರು.

Latest Videos

undefined

'ಏಪ್ರಿಲ್ 6ರಂದು ದೂರುದಾರ ಮಹಿಳೆಗೆ ಮೆಸೇಜ್ ಕಳುಹಿಸಿದ್ದ ಆರೋಪಿ, 'ಹೊಸ ಬ್ಯುಸಿನೆಸ್ ಆರಂಭಿಸಲು ದುಬೈಗೆ ಹೊರಟಿದ್ದೇನೆ. ಇಂಗ್ಲೆಂಡ್‌ನಲ್ಲಿರುವ ಬೆಲೆಬಾಳುವ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ನಿನಗೆ ಕಳುಹಿಸುತ್ತೇನೆ. ದುಬೈನಿಂದ ನೇರವಾಗಿ ಭಾರತಕ್ಕೆ ಬಂದು ನಿನ್ನನ್ನು ಮದುವೆಯಾಗುತ್ತೇನೆ' ಎಂದು ಆರೋಪಿ ಹೇಳಿದ್ದ. ಅದನ್ನು ಮಹಿಳೆ ನಂಬಿದ್ದರು' ಎಂದು ಪೊಲೀಸರು ತಿಳಿಸಿದರು.

ಓಟು ಹಾಕಲು ಬಂದವಳಿಗ ಅಪಘಾತ, ಸಾವು ಬದುಕಿನ ಹೋರಾಟದಲ್ಲಿ ನರ್ಸಿಂಗ್

ಏಪ್ರಿಲ್ 10ರಂದು ಮಹಿಳೆಗೆ ಕರೆ ಮಾಡಿದ್ದ ಅನಾಮಿಕ ನಿಮ್ಮ ಹೆಸರಿಗೆ ಪಾರ್ಸೆಲ್ ಬಂದಿದೆ. ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳಿವೆ. ಕಸ್ಟಮ್ಸ್ ದರ ಪಾವತಿ ಮಾಡಿದರೆ, ನಿಮ್ಮ ವಿಳಾಸಕ್ಕೆ ಪಾರ್ಸೆಲ್ ಕಳುಹಿಸುತ್ತೇವೆ' ಎಂದಿದ್ದ. ಅದನ್ನು ನಂಬಿದ್ದ ಮಹಿಳೆ, ಆರಂಭದಲ್ಲಿ 32,000 ಪಾವತಿಸಿದ್ದರು.

ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ, ಹಿಂದೂ ಪರ ಸಂಘಟನೆ ಪ್ರತಿಭಟನೆ

'ಪುನಃ ಕರೆ ಮಾಡಿದ್ದ ಆರೋಪಿ, 'ಪಾರ್ಸೆಲ್‌ನಲ್ಲಿ ದೊಡ್ಡ ಪ್ರಮಾಣದ ಹಣವಿದೆ. ಹೀಗಾಗಿ, ಮತ್ತಷ್ಟು ಕಸ್ಟಮ್ಸ್ ಹಾಗೂ ಇತರೆ ಶುಲ್ಕ ಪಾವತಿಸಬೇಕು' ಎಂದಿದ್ದ. ಅದನ್ನೂ ನಂಬಿದ್ದ ದೂರುದಾರ ಮಹಿಳೆ, ಹಂತ ಹಂತವಾಗಿ 43.51 ಲಕ್ಷ ಹಣವನ್ನು ವರ್ಗಾಯಿಸಿದ್ದರು. ಇದಾದ ನಂತರ, ಆರೋಪಿಗಳು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ. ಆನ್‌ಲೈನ್ ಮದುವೆ ಗಂಡು ಹಾಗೂ ಇತರೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ' ಎಂದು ಪೊಲೀಸರು ತಿಳಿದರು.  ಈ ಬಗ್ಗೆ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

click me!