ಆದಾಯ ತೆರಿಗೆ ವೆಬ್‌ಸೈಟ್‌ನ ಲೋಪ ಬಳಸಿಕೊಂಡು ಐಟಿ ರೀಫಂಡ್‌ ಸ್ಕ್ಯಾಮ್‌ ಮಾಡಿದ್ದ ವ್ಯಕ್ತಿ ಬಂಧನ!

Published : May 16, 2023, 04:19 PM ISTUpdated : Jun 01, 2024, 05:56 PM IST
ಆದಾಯ ತೆರಿಗೆ ವೆಬ್‌ಸೈಟ್‌ನ ಲೋಪ ಬಳಸಿಕೊಂಡು ಐಟಿ ರೀಫಂಡ್‌ ಸ್ಕ್ಯಾಮ್‌ ಮಾಡಿದ್ದ ವ್ಯಕ್ತಿ ಬಂಧನ!

ಸಾರಾಂಶ

ಬಹುಕೋಟಿ ಆದಾಯ ತೆರಿಗೆ ಮರುಪಾವತಿ ಹಗರಣದಲ್ಲಿ ಭಾಗಿಯಾದ  32 ವರ್ಷದ ಸೈಬರ್ ಕ್ರಿಮಿನಲ್‌ನನ್ನು ಇತ್ತೀಚೆಗೆ ಸೈಬರ್ ಕ್ರೈಂ ಪೊಲೀಸರಿಂದ ಬಂಧಿಸಲಾಗಿದೆ.  

ಬೆಂಗಳೂರು (ಮೇ.16): ಸಿಐಡಿ ಪೊಲೀಸರಿಂದ ಕರ್ನಾಟಕದ ಅತಿದೊಡ್ಡ ಸೈಬರ್ ವಂಚಕನನ್ನು ಬಂಧಿಸಲಾಗಿದೆ. ಐಟಿ ರೀಫಂಡ್‌ ಸ್ಟ್ಯಾಮ್‌ನಲ್ಲಿ ಭಾಗಿಯಾಗಿದ್ದ 32 ವರ್ಷದ ದಿಲೀಪ್ ರಾಜೇಗೌಡ ಎಂಬ ಅರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಎಸ್‌ಪಿ,  ಎಂ ಡಿ ಶರತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದಿಲೀಪ್‌ನನ್ನು ಬಂಧಿಸಲಾಗಿದೆ. ಆದಾಯ ತೆರಿಗೆ ವೆಬ್‌ ಸೈಟ್ ನಲ್ಲಿನ ಲೋಪವನ್ನು ಪತ್ತೆ ಮಾಡಿಕೊಂಡಿದ್ದ ಅರೋಪಿ, ಆ ಮೂಲಕ ಮಹಾವಂಚನೆ ಎಸಗಿದ್ದ. ವೆಬ್‌ಸೈಟ್‌ನಲ್ಲಿನ ಲೋಪದ ಮೂಲಕ ಐಟಿ ಕಟ್ಟಿದ್ದವರಿಗೆ ಸಲ್ಲಬೇಕಿದ್ದ ಐಟಿ ರೀಫಂಡ್‌ ತನ್ನ ಖಾತೆಗೆ ಬರುವಂತೆ ಮಾಡಿಕೊಳ್ಳುತ್ತಿದ್ದ. ಐಟಿ ಇಲಾಖೆ ಯಿಂದ ಬರೋಬ್ಬರಿ 1,41,84,360  ಹಣ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಐಟಿ ಇಲಾಖೆಯ ಐಟಿ ಕಟ್ಟಿದವರ ರಿಫಂಡ್ ಮಾಡುವ ಖಾತೆಗಳನ್ನೇ ಈತ ಬದಲಾವಣೆ ಮಾಡುತ್ತಿದ್ದ. ಆದಾಯ ತೆರಿಗೆ ಕಟ್ಟಿದವರ ಹೆಸರಲ್ಲಿ ಬೇರೆ ಬ್ಯಾಂಕ್ ಖಾತೆ ತೆರೆದು ನಕಲಿ ದಾಖಲೆಗಳ ಸಹಿತ ಕೆವೈಸಿ ಮಾಡಿಕೊಳ್ಳುತ್ತಿದ್ದ.  ಐಟಿ ಇಲಾಖೆ ರೀಫಂಡ್‌ ನೀಡಿದ ಬೆನ್ನಲ್ಲಿಯೇ ಈ ಹಣ ಈತನ ಖಾತೆಗೆ ಬರುತ್ತಿತ್ತು. ಇದೇ ರೀತಿಯಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ.

ವಿಚಾರಣೆ ವೇಳೆ ಮತ್ತಷ್ಟು ಸೈಬರ್ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.  ಈ ಹಿಂದೆ ಇದೇ ರೀತಿ ಮಾಡಿ 3.60 ಕೋಟಿ ರೂಪಾಯಿ ಹಣ ಪಡೆದುಕೊಂಡಿದೆ. ವಿಚಾರಣೆ ವೇಳೆ ಬಜಾಜ್‌ ಕಾರ್‌ ಲೋನ್‌ ವಂಚನೆ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ. ಬಜಾಜ್‌ ಕಂಪನಿಗೆ ನಕಲಿ ದಾಖಲೆ ಸಲ್ಲಿಸಿ ಸಾಲ ಪಡೆದುಕೊಂಡಿರುವುದು ಪತ್ತೆಯಾಗಿದೆ. ಈ ನಡುವೆ ಕರ್ನಾಟಕ ಸರ್ಕಾರದ ಕಾವೇರಿ ಆನ್ಲೈನ್ ಪೋರ್ಟಲ್ ನಲ್ಲಿ ಈತ ಪ್ರವೇಶ ಮಾಡಿದ್ದ ಎನ್ನುವುದೂ ತಿಳಿದುಬಂದಿದೆ. ಆಸ್ತಿಗಳನ್ನು ರಿಜಿಸ್ಟರ್‌ ಮಾಡಲು ಕಾವೇರಿ ವೆಬ್‌ ಪೋರ್ಟಲ್‌ ಬಳಸಲಾಗುತ್ತದೆ. ಈ ಹಿಂದೆ ದಾಖಲಾಗಿದ್ದ ಈ ಕೇಸ್ ನಲ್ಲಿ ಶ್ರೀಕೃಷ್ಣ ಅಲಿಯಾಸ್  ಹ್ಯಾಕರ್ ಶ್ರೀಕಿಯನ್ನು ವಿಚಾರಣೆ ಮಾಡಲಾಗಿತ್ತು. ಕಾವೇರಿ ವೆಬ್ ಪೋರ್ಟಲ್ ನಿಂದ ಕೋಟ್ಯಾಂತರ ರೂಪಾಯಿ ಸರ್ಕಾರದ ಹಣ ದುರ್ಬಳಕೆ ಅರೋಪ ಕೇಳಿ ಬಂದಿತ್ತು. ಸದ್ಯ ಅರೋಪಿಯನ್ನು ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.

ಹೇಗೆ ಸಿಗ್ತಿತ್ತು ದಾಖಲೆಗಳು: ಕಾವೇರಿ ಪೋರ್ಟಲ್ ನಿಂದ ಆಸ್ತಿ ಮಾರಾಟ ಮಾಡಿದವರ ದಾಖಲೆಯನ್ನು ದಿಲೀಪ್‌ ಸಂಗ್ರಹ ಮಾಡುತ್ತಿದ್ದ ಎನ್ನಲಾಗಿದೆ. ದಾಖಲೆಯಲ್ಲಿ ಪಾನ್ ನಂಬರ್ , ವಿಳಾಸ ಎಲ್ಲವನ್ನು ಪಡೆದುಕೊಳ್ಳುತ್ತಿದ್ದ. ಆ ದಾಖಲಾತಿ ಬಳಸಿಕೊಂಡು ನಕಲಿ ಆಧಾರ್ ಕಾರ್ಡ್‌ ಸೃಷ್ಟಿ ಮಾಡಿಕೊಳ್ಳುತ್ತಿದ್ದ. ಇದೇ ಆಧಾರ್ ಹಾಗೂ ಪ್ಯಾನ್ ನಂಬರ್ ಬಳಸಿಕೊಂಡು ಬ್ಯಾಂಕ್ ಖಾತೆಯನ್ನು ತೆರೆಯುತ್ತಿದ್ದ. ಬ್ಯಾಂಕ್ ಖಾತೆ ಮತ್ರು ಪಾನ್ ಬಳಸಿ ಐಟಿ ಇಲಾಖೆ ವೆಬ್ ಸೈಟ್‌ಗೆ ಲಾಗ್‌ ಇನ್‌ ಆಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 

ಬೆಂಗಳೂರು: ತೆರಿಗೆ ಇಲಾಖೆ ವೆಬ್‌ಸೈಟ್ ಹ್ಯಾಕ್; ₹3.60 ಕೋಟಿ ಲೂಟಿ!

ಬ್ಯಾಂಕ್‌ ಅಕೌಂಟ್ ಮತ್ತು ಪಾನ್ ಐಡಿ ಮೂಲಕ ಲಾಗಿನ್ ಆದಲ್ಲಿ ಐಟಿ ವೆಬ್‌ಸೈಟ್‌ನಲ್ಲಿ ಯೂಸರ್‌ ಐಡಿ ಕೇಳುತ್ತಿರಲಿಲ್ಲ. ಅಲ್ಲಿ ಎಷ್ಟು ಐಟಿ ರಿಟರ್ನ್ ಮಾಡಿದ್ದಾರೆ ಎಂದು ಮಾಹಿತಿ ತೆಗೆದುಕೊಳ್ಳುತ್ತಿದ್ದ. ನಂತರ ಐಟಿ ರಿಟರ್ನ್ ಕಡಿಮೆ ಮಾಡಿ ರೀಫಂಡ್ ಬರುವಂತೆ ಮಾಡಿಕೊಳ್ಳುತ್ತಿದ್ದ. ಐಟಿ ಇಂದ ಬರುವ ರಿಟರ್ನ್  ಫಂಡ್ ಅನ್ನು ತಾನು ಸೃಷ್ಟಿ ಮಾಡಿದ್ದ ನಕಲಿ ಬ್ಯಾಂಕ್ ಖಾತೆ ಬರುವಂತೆ ಬದಲಾವಣೆ ಮಾಡಿದ್ದ. ಬಹುತೇಕ ಪ್ರಕರಣದಲ್ಲಿ ಎನ್‌ಆರ್‌ಐಗಳ ದಾಖಲಾತಿಯನ್ನು ಆರೋಪಿ ಬಳಸಿದ್ದಾನೆ. ಸದ್ಯ ಘಟನೆ ಬಗ್ಗೆ ಐಟಿ ಇಲಾಖೆಗೆ ಮಾಹಿತಿ ನೀಡಲಾಗಿದೆ‌. ವೆಬ್‌ಸೈಟ್‌ನ ಲೂಪ್‌ಅನ್ನು ಮುಚ್ಚುವಂತೆ ಸೂಚಿಸಲಾಗಿದೆ. ಅರೋಪಿ ಬಳಿ ಛತ್ತೀಸ್‌ಗಢಕ್ಕೆ ಸೇರಿದ್ದ ಹಲವಾರು ಪಾನ್ ಡೀಟೆಲ್ಸ್ ಮತ್ತು ಇತರ ದಾಖಲಾತಿ ಸಹ ಲಭ್ಯವಾಗಿದೆ.

ಮಾಜಿ ಸಿಎಂ ಸಹೋದರಿಗೆ ಐಟಿ ಶಾಕ್‌: ಕಾಂಗ್ರೆಸ್‌ ಮುಖಂಡನ ಮನೆಯಲ್ಲಿ 2.8 ಕೋಟಿ ನಗದು ಪತ್ತೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!