ನಗ್ನ ವಿಡಿಯೋ ಕಳಿಸಿ 30 ಲಕ್ಷಕ್ಕೆ ಕನ್ನಡ ನಟಿಯನ್ನ ಬ್ಲಾಕ್​ಮೇಲ್​ ಮಾಡ್ತಿದ್ದ ಮೇಕಪ್​ ಮ್ಯಾನ್​!

Published : Oct 25, 2022, 08:40 PM ISTUpdated : Oct 25, 2022, 08:59 PM IST
ನಗ್ನ ವಿಡಿಯೋ ಕಳಿಸಿ 30 ಲಕ್ಷಕ್ಕೆ ಕನ್ನಡ ನಟಿಯನ್ನ ಬ್ಲಾಕ್​ಮೇಲ್​ ಮಾಡ್ತಿದ್ದ ಮೇಕಪ್​ ಮ್ಯಾನ್​!

ಸಾರಾಂಶ

ನಟ-ನಟಿಯರೇ ಎಚ್ಚರ. ನಿಮ್ಮ ಮೇಕಪ್​ ಮ್ಯಾನ್​ಗಳಿಗೆ ಸಲಿಗೆ ಜತೆಗೆ ನಿಮ್ಮ ಮೊಬೈಲ್​ ಕೊಡುವ ಮುನ್ನ ಕೊಂಚ ಹುಷಾರು. ಕನ್ನಡದ ಖ್ಯಾತ ನಟನ ಜೊತೆ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿರುವ ನಟಿಯೊಬ್ಬರು ಈ ರೀತಿ ಮೋಸ ಹೋಗಿದ್ದಾರೆ.

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಅ.25):  ನಟ-ನಟಿಯರೇ ಎಚ್ಚರ. ನಿಮ್ಮ ಮೇಕಪ್​ ಮ್ಯಾನ್​ಗಳಿಗೆ ಸಲಿಗೆ ಜತೆಗೆ ನಿಮ್ಮ ಮೊಬೈಲ್​ ಕೊಡುವ ಮುನ್ನ ಕೊಂಚ ಹುಷಾರು. ಹೌದು, ಮೇಕಪ್​ ಮ್ಯಾನ್​​ ಆಗಿ ಕೆಲಸ ಮಾಡ್ತಿದ್ದವ್ನು ಆ ನಟಿಯ ನಗ್ನ ವಿಡಿಯೋ ಇಟ್ಟುಕೊಂಡೇ 30 ಲಕ್ಷಕ್ಕಾಗಿ ಆಕೆಯನ್ನೇ ಬ್ಲಾಕ್​ ಮೇಲ್​ ಮಾಡುತ್ತಿದ್ದ ಕಿರಾತಕ ಈಗ ಅಂದರ್​ ಆಗಿದ್ದಾನೆ. ಕೆಲ ಟಿಕ್​ ಟಾಕ್​ ಸ್ಟಾರ್​ಗಳು ಹಾಗೂ ನಟಿಯರು ಲೈವ್​ ಸ್ಟ್ರೀಮಿಂಗ್​​ ಆ್ಯಪ್​ಗಳಲ್ಲಿ ಅರೆ ನಗ್ನ ಹಾಗೂ ನಗ್ನವಾಗಿ ಕಾಣಿಸಿಕೊಳ್ಳೋ ವಿಷಯ ಹೊಸದೇನಲ್ಲ. ಇಂತಹ ಲೈವ್​ ಸ್ಟ್ರೀಮಿಂಗ್​ ಆ್ಯಪ್​ಗಳಲ್ಲಿ ಕೇವಲ ಸಬ್​ಸ್ಕ್ರೈಬರ್ಸ್​ ಮಾತ್ರ ಈ ವಿಡಿಯೋಗಳನ್ನು ನೋಡಬಹುದಾಗಿದೆ. ಹೌದು, ಕನ್ನಡದ ಖ್ಯಾತ ನಟನ ಜೊತೆ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿರುವ ನಟಿಯೊಬ್ಬರು ಟ್ಯಾಂಗೊ ಎಂಬ ಆ್ಯಪ್​ನಲ್ಲಿ ತನ್ನ ಖಾತೆ ತೆರೆದು ಅರೆನಗ್ನ ವಿಡಿಯೋಗಳನ್ನ ಹಂಚಿಕೊಂಡಿದ್ದರು. ಈ ವಿಡಿಯೋಗಳನ್ನ ರೆಕಾರ್ಡ್​ ಮಾಡಿಕೊಂಡಿದ್ದ ಓರ್ವ ಆಕೆಗೆ ಅದರ ತುಣುಕು ಹಾಗೂ ಫೋಟೋಗಳನ್ನು ಕಳುಹಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಹಣ ಕೊಡದೆ ಹೋದರೆ, ಅವುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡೋದಾಗಿ ವಾಟ್ಸ್​ಆ್ಯಪ್​ ಮೂಲಕ ಬ್ಲಾಕ್​ ಮೇಲ್​ ಮಾಡ್ತಿದ್ದ. ಈ ಸಂಬಂಧ ಆ ನಟಿ ಈಶಾನ್ಯ ವಿಭಾಗದ ಸೆನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸ್ತಾರೆ. 

 ಇವನೇ ನೋಡಿ ಬ್ಲಾಕ್​ ಮೇಲ್​ ಮಾಡಿದ ಕಿರಾತಕ. ಈ ಫೋಟೋದಲ್ಲಿ ಅಮಾಯಕನಂತೆ ಕಾಣುತ್ತಿರುವ ಈತನ ಹೆಸರು ಮಹಾಂತೇಶ. ಭುವನೇಶ್ವರಿ ನಗರದ ನಿವಾಸಿಯಾಗಿರುವ ಈತ ವೃತ್ತಿಯಲ್ಲಿ ಮೇಕಪ್​ ಮ್ಯಾನ್​. ದೂರು ನೀಡಿರುವ ನಟಿಯ ಬಳಿ ಬಹಳ ಸಮಯದಿಂದ ಮೇಕಪ್​ ಮ್ಯಾನ್​ ಆಗಿ ಕೆಲಸ ಮಾಡ್ತಿದ್ದ. ಅಷ್ಟೇ ಅಲ್ಲ ಆಕೆಯ ಹತ್ತಿರದ ಸಂಬಂಧಿಯೂ ಹೌದು. ಈ ಸಲಿಗೆಯಿಂದಲೇ ನಟಿಯ ಬಗ್ಗೆ ಈತನಿಗೆ ತುಂಬಾ ಮಾಹಿತಿ ಇತ್ತು. 

ಶಿವಮೊಗ್ಗದಲ್ಲಿ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ, ಮೃತ ಹರ್ಷನ ಕುಟುಂಬಸ್ಥರಿಗೆ ಬೆದರಿಕೆ!

ಇನ್ನು ಆರೋಪಿ ನಟಿ ಲೈವ್​ ಸ್ಟ್ರೀಮಿಂಗ್​ ಆ್ಯಪ್​ನಲ್ಲಿ ಖಾತೆ ಹೊಂದಿರುವ ವಿಷಯ  ಹಾಗೂ ಈ ಖಾತೆಯ ಬಗ್ಗೆ ಮನೆಯವರಿಗೆ ಮಾಹಿತಿ ಇಲ್ಲ ಅನ್ನೋದನ್ನೂ ತಿಳಿದುಕೊಂಡಿದ್ದ. ಜೊತೆಗೆ ಆಕೆಯ ಖಾತೆಯ ಹೆಸರನ್ನು ತಿಳಿದುಕೊಂಡು ಅದರಲ್ಲಿ ಬರುವ ಆಕೆಯ ಅರೆ ನಗ್ನ ವಿಡಿಯೋಗಳನ್ನ ರೆಕಾರ್ಡ್​ ಮಾಡಿಕೊಂಡಿದ್ದ. ನಂತರ ಅವುಗಳನ್ನ ಇಟ್ಟುಕೊಂಡು ಬ್ಲಾಕ್​ ಮೇಲ್​ ಮಾಡಲು ಹೊಸ ನಂಬರ್​ ಖರೀದಿಸಿದ್ದ. ನಂತರ ವಾಟ್ಸ್​ಆ್ಯಪ್​ ಮೂಲಕ ವಿಡಿಯೋ ಹಾಗೂ ಅರೆ ನಗ್ನ ಫೋಟೋ ಕಳುಹಿಸಿ 30 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಹೊಸ ನಂಬರ್​ನಿಂದ ಬಂದ ಮೆಸೇಜ್​ ಹಾಗೂ ವಿಡಿಯೋ ನೋಡಿ ಗಾಬರಿಗೊಂಡ ನಟಿ ಪೊಲೀಸ್ರ ಮೊರೆ ಹೋಗಿದ್ದಾರೆ. 

ಬ್ಯುಸಿನೆಸ್ ಮೆನ್ ಮಗನನ್ನ ಕಿಡ್ನಾಪ್ ಮಾಡಿ 1ಕೋಟಿ , 15KG ಚಿನ್ನಕ್ಕೆ ಬೇಡಿಕೆಯಿಟ್ಟ ಆರೋಪಿಗಳು ಅಂದರ್

ದೂರು ನೀಡಿದ ಕೂಡಲೇ ಪ್ರಕರಣದ ತನಿಖೆ ಆರಂಭಿಸಿದ ಸೆನ್​ ಪೊಲೀಸ್ರು ಆರೋಪಿಯನ್ನ ಬಂಧಿಸಿದ್ದಾರೆ. ಜೊತೆಗೆ ಆರೋಪಿಯ ಮೊಬೈಲ್​ ಹಾಗೂ ಸಿಮ್​ ಕಾರ್ಡ್​ ಅನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯ ಬಂಧನದ ನಂತರ ಆತ ತನ್ನ ಸಂಬಂಧಿಯಾಗಿದ್ದ ಮೇಕಪ್​ ಮ್ಯಾನ್​ ಅನ್ನೋದು ನಟಿಗೆ ಗೊತ್ತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!