ಬಾಂಬ್ ಹಿಡಿದುಕೊಂಡು ನೇರವಾಗಿ ಪೊಲೀಸ್ ಸ್ಟೇಶನ್‌ಗೆ ಬಂದ!

Published : Jun 13, 2021, 09:19 PM IST
ಬಾಂಬ್ ಹಿಡಿದುಕೊಂಡು ನೇರವಾಗಿ ಪೊಲೀಸ್ ಸ್ಟೇಶನ್‌ಗೆ ಬಂದ!

ಸಾರಾಂಶ

* ಬಾಂಬ್ ತೆಗೆದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಬಂದ * ಕಾಲೇಜಿನ ಬಳಿ ಬ್ಯಾಗ್ ಸಿಕ್ಕಿತು ಎಂದು ಹೇಳಿದ್ದ * ವಿಚಾರಣೆ ಮಾಡಿದಾಗ ಆತನೇ ಬಾಂಬ್ ತಯಾರಿಕೆ ಮಾಡಿದ್ದು ಬಯಲಾಗಿತ್ತು * ಆನ್ ಲೈನ್ ನಲ್ಲಿ ನೋಡಿ ಕೆಲಸ ಮಾಡಿದ್ದ

ನಾಗಪುರ(ಜೂ.  13)  ಇದು  ಯಾವ ಸಿನಿಮಾ ದೃಶ್ಯವಲ್ಲ.  ಇದ್ದಕ್ಕಿದ್ದಂತೆ ಪೊಲೀಸ್ ಸ್ಟೇಶನ್ ಗೆ ಬ್ಯಾಗ್ ಹಿಡಿದು ವ್ಯಕ್ತಿಯೊಬ್ಬ ಬಂದಿದ್ದಾನೆ. ಬಂದವನೆ ಈ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದಿದ್ದಾನೆ.

ಪೊಲೀಸ್ ಠಾಣಗೆ ಬಂದ 25 ವರ್ಷದ ರಾಹುಲ್ ಪಾಗಡೆಯನ್ನು ನಂತರ ಪ್ರಶ್ನೆ ಮಾಡಲಾಗಿದೆ. ಆನ್ ಲೈನ್ ನಲ್ಲಿ ನೋಡಿಕೊಂಡು  ಪೆಟ್ರೋಲ್ ಬಾಟಲ್ ಮತ್ತು ಬ್ಯಾಟರಿ ಉಪಯೋಗಿಸಿ ಬಾಂಬ್ ತಯಾರಿಸಿದ್ದೇನೆ ಎಂದು ಹೇಳಿದ್ದಾನೆ.

ನಕಲಿ ಬಾಂಬ್‌ನೊಂದಿಗೆ ಮೆಡಿಕಲ್ ಶಾಪ್ ಗೆ ಎಂಟ್ಟಿ ಕೊಟ್ಟು ಇಟ್ಟ ಬೇಡಿಕೆ

ಯಾರಿಗೂ ಹಾನಿ ಮಾಡಲು ಅಥವಾ ಸ್ಫೋಟ ಮಾಡಲು ಇದನ್ನು ಆತ ತಯಾರು ಮಾಡಿರಲಿಲ್ಲ ಎನ್ನುವುದನ್ನು ತನಿಖೆ ನಡೆಸಿದ ಅಧಿಕಾರಿಗಳು ಹೇಳಿದ್ದಾರೆ. ಸಲೂನ್ ಒಂದರಲ್ಲಿ ಕೆಲಸ ಮಾಡುವ ರಾಹುಲ್  ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ.

ಮೊದಲು ಈ ಬ್ಯಾಗ್ ನನಗೆ ಕೆಡಿಕೆ ಕಾಲೇಜಿನ ಬಳಿ ಸಿಕ್ಕಿತು. ಇದರಲ್ಲಿ ಬಾಂಬ್ ಇದೆ ಎಂದಿದ್ದ. ನಂತರ ವಿಚಾರಣೆ ಮಾಡಿದಾಗ ತಾನೇ ತಯಾರಿಸಿದ್ದು ಎಂಬುದನ್ನು ಒಪ್ಪಿಕೊಂಡಿದ್ದಾನೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!