
ಮುಂಬೈ(ಡಿ.12) ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಬದಲು ಸಹ ಶಿಕ್ಷಕಿಯರಿಗೆ ಸೆಕ್ಸ್ ಪಾಠ ಮಾಡಲು ಹೋದ ಶಿಕ್ಷಕ ಆಮಿರ್ ಇದೀಗ ಭಾರಿ ವೈರಲ್ ಆಗಿದ್ದಾನೆ. ಮೂವರು ಮಹಿಳಾ ಶಿಕ್ಷಕಿಯರನ್ನು ಪುಸಲಾಯಿಸಿ ಅವರ ಜೊತೆ ಸರಸ ನಡೆಸಿದ ಶಿಕ್ಷಕ ಆಮಿರ್ ವಿಡಿಯೋಗಳು ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಆಮೀರ್ ಖ್ವಾಝಿ ನಾಪತ್ತೆಯಾಗಿದ್ದಾನೆ. ಇತ್ತ ಮೂವರು ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ಬೀಡ್ ಜಿಲ್ಲೆಯಲ್ಲಿರುವ ಅತೀ ದೊಡ್ಡ ಮುಸ್ಲಿಂ ಸಮುದಾಯದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ಆಮಿರ್ ಈ ಶಾಲೆಯ ಪ್ರಮುಖ ಶಿಕ್ಷಕ. ಇದೇ ಶಾಲೆಯಲ್ಲಿನ ಮಹಿಳಾ ಶಿಕ್ಷಕಿಯರ ಜೊತೆ ಆತ್ಮೀಯವಾಗಿದ್ದ. ಇತ್ತೀಚಿನ ದಿನಗಳಲ್ಲಿ ಈ ಆಮಿರ್ ಖ್ವಾಜಿ ಪಾಠಕ್ಕಿಂತ ಶಿಕ್ಷಕಿಯರ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಬ್ಯೂಸಿಯಾಗಿದ್ದ. ಶಿಕ್ಷಕಿಯರನ್ನು ಐಸ್ ಕ್ರೀಂ ಪಾರ್ಲರ್, ಜ್ಯೂಸ್ ಸೆಂಟರ್, ಸಣ್ಣ ಸಣ್ಣ ಟ್ರಿಪ್ ಕರೆದುಕೊಂಡು ಹೋಗುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದ.
ಶಾಲಾ ಆಡಳಿತ ಮಂಡಳಿ ಜೊತೆ ಉತ್ತಮ ಸಂಬಂಧ ಹಾಗೂ ಪ್ರಾಬಲ್ಯ ಹೊಂದಿದ್ದ ಈ ಆಮಿರ್ ಖ್ವಾಝಿಗೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಇತ್ತೀಚೆಗೆ ಮೂವರು ಶಿಕ್ಷಕಿಯರ ಜೊತೆ ಸರಸ ಸಲ್ಲಾಪ ನಡೆಸಿದ್ದಾನೆ. ಈ ಸಲ್ಲಾಪದ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಬೆಳಗ್ಗೆ ಶಾಲೆ, ರಾತ್ರಿ ಸೆಕ್ಸ್. ಇದು ಪ್ರತಿ ದಿನ ನಡೆಯುತ್ತಿತ್ತು. ಇದರ ನಡುವೆ ಆಮಿರ್ ಬೇಡಿಕೆ ಹೆಚ್ಚಾಗಿದೆ. ಪ್ರತಿ ದಿನ ಸೆಕ್ಸ್‌ಗೆ ಬೇಡಿಕೆ ಇಟ್ಟಿದ್ದಾನೆ. ಇಷ್ಟೇ ಅಲ್ಲ ಇತರ ಇಬ್ಬರು ಶಿಕ್ಷಕಿಯರನ್ನು ಒಪ್ಪಿಸಿ ಕರೆತರಲು ಸೂಚಿಸಿದ್ದಾನೆ.
ಈ ವಿಚಾರಕ್ಕೆ ಮೂವರು ಶಿಕ್ಷಕಿಯರ ಹಾಗೂ ಶಿಕ್ಷಕ ಆಮಿರ್ ಜೊತೆ ಮನಸ್ತಾಪವಾಗಿದೆ. ಇತ್ತ ಆಕ್ರೋಶಗೊಂಡ ಅಮೀರ್ ಖ್ವಾಜಿ, ತಾನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದ ಸೆಕ್ಸ್ ವಿಡಿಯೋಗಳನ್ನು ಪೋರ್ನ್ ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ಭಾರಿ ಸಂಚಲನ ಸೃಷ್ಟಿಯಾಗಿದೆ. ವಿಡಿಯೋಗಳು ವ್ಯಾಟ್ಸ್ಆ್ಯಪ್ ಸೇರಿದಂತೆ ಹಲವು ಪ್ಲಾಟ್‌ಪಾರ್ಮ್‌ನಲ್ಲಿ ವೈರಲ್ ಆಗಿದೆ.
ಬೆಂಗಳೂರಲ್ಲಿ ರಾಪಿಡೋ ಹತ್ತಿದ ಯುವತಿಗೆ ಲೈಂಗಿಕ ಕಿರುಕುಳ, ವಿರೋಧಿಸಿದ್ದಕ್ಕೆ ಹೊರದಬ್ಬಿದ ಚಾಲಕ!
ವಿಡಿಯೋ ಮಾಹಿತಿ ಶಾಲಾ ಆಡಳಿತ ಮಂಡಳಿ ಗಮನಕ್ಕೂ ಬಂದಿದೆ. ಇತ್ತ ವಿಡಿಯೋ ಪೋಸ್ಟ್ ಮಾಡಿ ಶಿಕ್ಷಕ ಆಮೀರ್ ಖ್ವಾಝಿ ನಾಪತ್ತೆಯಾಗಿದ್ದಾನೆ. ಇತ್ತ ಆಡಳಿತ ಮಂಡಳಿ ಮೂವರು ಶಿಕ್ಷಕಿಯರನ್ನು ಅಮಾನತು ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ