
ಪಾಲ್ಗಾರ್(ಜು.29) ಮದುವೆಯಾಗೋದೇ ಈತನ ಖಯಾಲಿ. ಮದುವೆಯಾದ ಬಳಿಕ ಒಂದೆರೆಡು ದಿನ ಮಾತ್ರ. ಮದುವೆ ಬಳಿಕ ಮೊದಲ ರಾತ್ರಿ, ಮರುದಿನ ರಾತ್ರಿ ಈತ ನಾಪತ್ತೆ. ಹೆಚ್ಚೆಂದರೆ ಒಂದು ವಾರ. ಒಂದೊಂದು ಪಟ್ಟಣ, ನಗರ, ಹಳ್ಳಿಯಲ್ಲಿ ಒಂದೊಂದು ಹೆಸರನ್ನಿಟ್ಟುಕೊಂಡು 25 ಮದುವೆಯಾಗಿದ್ದಾನೆ. ಇದು ಅಧಿಕೃತ, ಇನ್ನು ಅನಧಿಕೃತ ಮದುವೆ, ಸಂಸಾರ ಕುರಿತು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ಚಾಲಾಕಿ ಹೆಸರು ಫಿರೋಜ್ ಶೇಕ್. ವಿಧವೆಯರು, ವಿಚ್ಛೇದನ ಪಡೆದ ಮಹಿಳೆಯರ ಟಾರ್ಗೆಟ್ ಮಾಡುವ ಈತ, 26ನೇ ಮದುವೆ ತಯಾರಿಯಲ್ಲಿ ಸಿಕ್ಕಿ ಬಿದ್ದಿ ಘಟನೆ ಮಹಾರಾಷ್ಟ್ರಯ ಪಾಲ್ಗಾರ್‌ನಲ್ಲಿ ನಡೆದಿದೆ.
ಆನ್‌ಲೈನ್ ವಧು ವರರ ವೇದಿಕೆಗಳಲ್ಲಿ ಡಿವೋರ್ಸ್, ವಿಧವೆಯರ ಪ್ರೊಫೈಲ್ ಹುಡುಕಾಡಿ, ಅವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾನೆ. ಅಕ್ಕ ಪಕ್ಕದ ಜಿಲ್ಲೆಗಳ ಮಹಿಳೆಯರನ್ನೇ ಟಾರ್ಗೆ ಮಾಡಿಕೊಳ್ಳುತ್ತಾನೆ. ಬಳಿಕ ತಾನು ಪಕ್ಕದ ಜಿಲ್ಲೆಯವನ್ನು ಎಂದು ಹೊಸ ಹೆಸರು ಹೊಸ ವಿಳಾಸ ನೀಡಿ ಪುಸಲಾಯಿಸುತ್ತಾನೆ. ಮಹಿಳೆಯರು ಹಳೆ ನೋವುಗಳನ್ನು ಮರೆತ ಹೊಸ ಬದುಕು ಕಟ್ಟಿಕೊಳ್ಳುವ ಭರದಲ್ಲದ್ದರೆ ಈತ ಮದುವೆಯಾದ ಕೆಲವೇ ದಿನಗಳಲ್ಲಿ ನಾಪತ್ತೆಯಾಗುತ್ತಾನೆ.
ಮದ್ವೆಯಾಗಿ ಒಂದೂವರೆ ವರ್ಷ, ಜೊತೆಯಲ್ಲಿದಿದ್ದು 8 ದಿನ.. ಸಂಬಂಧ ಬೆಳೆಸದ IRS ಅಧಿಕಾರಿ ಗಂಡನ ವಿರುದ್ಧ ಪತ್ನಿ ದೂರು
26ನೇ ಮದುವೆ ತಯಾರಿಯಲ್ಲಿದ್ದ ಈತನ ವಿರುದ್ಧ 15ಕ್ಕೂ ಹೆಚ್ಚು ಮಹಿಳೆಯರು ದೂರು ದಾಖಲಿಸಿದ್ದಾರೆ. ಹೀಗಾಗಿ ಹುಡುಕಾಡುತ್ತಿದ್ದ ಪೊಲೀಸರಿಗೆ ಈತ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರ ವಿಚಾರಣೆ ನಡೆಸಿದಾಗ ಅಚ್ಚರಿಯಾಗಿದೆ. ಕಾರಣ ಈತನ 25 ಮದುವೆಯಾಗಿ ವಂಚಿಸಿರುವುದು ಬೆಳೆಕಿಗೆ ಬಂದಿದೆ. ರೆಹಮಾನ್, ಸುಲೇಮಾನ್, ರಮೇಶ, ಸುರೇಶ ಸೇರಿದಂತೆ ಹಲವು ಹೆಸರಿನಲ್ಲಿ ಈತ ಮಹಿಳೆಯರನ್ನು ವಂಚಿಸಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಈತ 6 ಬಾರಿ ಜೈಲು ಶಿಕ್ಷೆ ಕೂಡ ಅನುಭವಿಸಿದ್ದಾನೆ. ಆದರೂ ಈತನ ಖಯಾಲಿ ಬಿಟ್ಟಿರಲಿಲ್ಲ. ಈತನ ಮಾಹಿತಿ ತಿಳಿದ ಪೊಲೀಸರು ದಂಗಾಗಿದ್ದಾರೆ. ಮದುವೆಯಾಗುವ ಖಯಾಲಿ ಯಾಕೆ? ನೆಟ್ಟಗೆ ಸಂಸಾರ ಮಾಡಲು ಆಗುತ್ತಿಲ್ಲವೇ? ಎಂದು ಪೊಲೀಸರು ತಮ್ಮದೇ ಭಾಷೆಯಲ್ಲಿ ಕೇಳಿದ್ದಾರೆ. ಈ ವೇಳೆ ಮತ್ತಷ್ಟು ರೋಚಕ ಕತೆಗಳನ್ನು ಈತ ಬಾಯ್ಬಿಟ್ಟಿದ್ದಾನೆ.
ಈತ ಮದುವೆಯಾಗುವ ಮೊದಲ ಉದ್ದೇಶ ಅವರ ಒಡವೆ, ಹಣ ಎಲ್ಲವನ್ನು ದೋಚಲು. ಯಾವುದೇ ಕೆಲಸಕ್ಕೆ ಹೋಗುತ್ತಿಲ್ಲ. ಬದುಕಲು ಬೇರೆ ಆದಾಯವಿಲ್ಲ. ಹೀಗಾಗಿ ಮದುವೆಯನ್ನೇ ಬ್ಯೂಸಿನೆಸ್ ಮಾಡಿಕೊಂಡಿದ್ದಾನೆ. ಮದುವೆಯಾದ ಒಂದೆರೆಡು ದಿನದಲ್ಲಿ ಚಿನ್ನಾಭರಣ, ನಗದು ಹಣ ಸೇರಿದಂತೆ ಇತರ ಅಮೂಲ್ಯ ವಸ್ತುಗಳನ್ನು ದೋಚುವುದೇ ಈತನ ಕೆಲಸ.
ಅಪಘಾತದಲ್ಲಿ ಮೃತಪಟ್ಟ ಬಾಯ್‌ಫ್ರೆಂಡ್ ಭೂತದ ಜೊತೆ ಮದುವೆ: ಗೆಳತಿ ನಿರ್ಧಾರಕ್ಕೆ ಭಾರಿ ಮೆಚ್ಚುಗೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ