Sodomising Case 14 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ಡೆಯಡಿ ಮದರಸಾ ಶಿಕ್ಷಕ ಅರೆಸ್ಟ್!

By Suvarna News  |  First Published Sep 5, 2022, 10:14 PM IST

ಶಿಕ್ಷಕ ದಿನಾಚರಣೆಯಂದೇ ಮದರಸಾ ಶಿಕ್ಷಕ ಅರೆಸ್ಟ್ ಆಗಿದ್ದಾನೆ. 14 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ಕಾರಣ ಇದೀಗ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.  ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.


ಹೈದರಾಬಾದ್(ಸೆ.05): ಭಾರತದಲ್ಲಿ ಶಿಕ್ಷಕರಿಗೆ ವಿಶೇಷ ಗೌರವ ಹಾಗೂ ಸ್ಥಾನವಿದೆ. ಇಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗಿದೆ. ಇದೇ ದಿನ ಮದರಸಾ ಶಿಕ್ಷಕನನ್ನು ಅರೆಸ್ಟ್ ಮಾಡಲಾಗಿದೆ. ಹೈದರಾಬಾದ್‌ನ 21 ವರ್ಷದ ಶಿಕ್ಷಕ ಮದರಸಾಗೆ ಆಗಮಿಸುತ್ತಿದ್ದ 14 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.  ಈ ಕುರಿತು ಬಾಲಕ ಪೋಷಕರಿಗೆ ಮಾಹಿತಿ ನೀಡಿದ್ದ. ಶಿಕ್ಷನ ವಿರುದ್ಧ ರೊಚ್ಚಿಗೆದ್ದ ಪೊಲೀಸರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸಲು ಪ್ರಕರಣದ ಗಂಭೀರತೆ ಅರಿತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಮದರಸಾ ಶಿಕ್ಷಕನ ಬಂಧಿಸಿದ್ದಾರೆ. ಬಳಿಕ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಹಾಜರುಪಡಿಸಿದ್ದಾರೆ. ಇದೀಗ ಆರೋಪಿ ಶಿಕ್ಷಕನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹೈದರಾಬಾದ್‌ನ ಮದರಸಾ ಶಾಲೆಯಲ್ಲಿ ಈ ಘಟನೆ ನಡೆದಿದೆ. 14 ವರ್ಷದ ಸ್ಥಳೀಯ ಬಾಲಕ ಮದರಸಾ ಶಿಕ್ಷಣ ಪಡೆಯುತ್ತಿದ್ದ. ಆದರೆ ಈತನ ಟಾರ್ಗೆಟ್ ಮಾಡಿದ ಶಿಕ್ಷಕ, ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಶಿಕ್ಷನ ಬೆದರಿಕೆ, ಲೈಂಗಿಕ ದೌರ್ಜನ್ಯದಿಂದ ಬಾಲಕನ ಆರೋಗ್ಯ ಕ್ಷೀಣಿಸಿದೆ. ಇದರಿಂದ ಪೋಷಕರು ಆತಂಕಗೊಂಡಿದ್ದಾರೆ. ಈ ಕುರಿತು ವಿಚಾರಿಸಿದಾಗ ಮಾಹಿತಿ ಬಾಯ್ಬಿಟ್ಟಿದ್ದಾನೆ. ಬಾಲಕನ ಪೋಷಕರು, ಕುಟುಂಬಸ್ಥರು ಮದರಸಾದಲ್ಲಿ ಸೇರಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಇತ್ತ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಮದರಾ ಶಿಕ್ಷಕನ ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

Tap to resize

Latest Videos

AIMPLB vs BJP ಮದರಸಾ ಸಮೀಕ್ಷೆ ನಿಯಮ ಮಠದ ಮೇಲಿಲ್ಲ ಯಾಕೆ? ಮುಸ್ಲಿಂ ಲಾ ಬೋರ್ಡ್ ಪ್ರಶ್ನೆ!

ಲೈಂಗಿಕ ಕಿರುಕುಳ ಆರೋಪ: ಪ್ರೌಢಶಾಲೆ ಶಿಕ್ಷಕನ ಬಂಧನ
ಮಂಡ್ಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರೌಢಶಾಲೆ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿರುವ ಪ್ರಕರಣ ಕೆ.ಆರ್‌.ಪೇಟೆ ತಾಲೂಕಿನಿಂದ ವರದಿಯಾಗಿದೆ. ತಾಲೂಕಿನ ಹರಿಹರಪುರ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕ ಬಿ.ಟಿ.ಕೃಷ್ಣೇಗೌಡ ಬಂಧಿತರು. ಮುಖ್ಯಶಿಕ್ಷಕನ ಅಸಭ್ಯ ವರ್ತನೆಯಿಂದ ನೊಂದ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದು, ಈ ವಿಚಾರವನ್ನು ಪೋಷಕರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಜ.27ರಂದು ಶಾಲಾಭಿವೃದ್ಧಿ ಸದಸ್ಯರ ಸಭೆ ಕರೆದು ಚರ್ಚಿಸಿ ವಿದ್ಯಾರ್ಥಿನಿಯರೊಂದಿಗೆ ಮಹಿಳಾ ಶಿಕ್ಷಕಿಯರ ಮೂಲಕ ಪ್ರತ್ಯೇಕವಾಗಿ ವಿಷಯ ಸಂಗ್ರಹಿಸಿ ಮೇಲಧಿಕಾರಿಗಳಿಗೆ ವರದಿ ಮಾಡಿದ್ದಾರೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ಬಿಇಒ ಜ.30ರಂದು ಕೆ.ಆರ್‌.ಪೇಟೆ ಗ್ರಾಮಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿ ಶಿಕ್ಷಕನನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿನಿಗೆ ಕಿರುಕುಳ: ಅರೆಬಿಕ್‌ ಶಿಕ್ಷಕನ ಬಂಧನ
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಸುಳ್ಯದ ಅರೆಬಿಕ್‌ ಶಾಲೆಯ ಶಿಕ್ಷಕನ್ನು ಉಪ್ಪಿನಂಗಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಧರ್ಮಸ್ಥಳದಿಂದ ಉಪ್ಪಿನಂಗಡಿಯತ್ತ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಈ ಘಟನೆ ಸಂಭವಿಸಿದ್ದು, ಆರೋಪಿ ಮೂಲತಃ ಚಿಕ್ಕಮಗಳೂರು ನಿವಾಸಿ, ಸುಳ್ಯದ ಅರೆಬಿಕ್‌ ಶಾಲಾ ಶಿಕ್ಷಕ ಮಹಮ್ಮದ್‌ ಸೈಪುಲ್ಲಾ (32) ಆರೋಪಿ. ಈತ ವಿದ್ಯಾರ್ಥಿನಿಗೆ ಮೈ ಮುಟ್ಟಿಕಿರುಕುಳ ನೀಡುತ್ತಿದ್ದು, ಇದನ್ನು ಆಕ್ಷೇಪಿಸಿದ ವಿದ್ಯಾರ್ಥಿನಿಯು ಬಸ್ಸಿನ ನಿರ್ವಾಹಕರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ , ಬಸ್ಸನ್ನು ನೇರವಾಗಿ ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಮುಂದೆ ನಿಲ್ಲಿಸಿ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಲು ನೆರವಾದರು.

click me!