ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತನ ಕೊಲೆಗೆ ಸ್ಕೇಚ್ ಹಾಕಿ ನಾಡ ಪಿಸ್ತೂಲ್ ದಿಂದ ಫೈಯರ್ ಮಾಡಿ ಜೈಲು ಕಂಬಿ ಎನಿಸಿ ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದಾತ ಈಗ ಕೊಲೆಯಾಗಿದ್ದಾನೆ.
ಬೆಳಗಾವಿ (ಸೆ.5): ಆತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತನ ಕೊಲೆಗೆ ಸ್ಕೇಚ್ ಹಾಕಿ ನಾಡ ಪಿಸ್ತೂಲ್ ದಿಂದ ಫೈಯರ್ ಮಾಡಿ ಜೈಲು ಕಂಬಿ ಎನಿಸಿ ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ. ಹೀಗೆ ಬಂದವ ಎರಡು ದಿನಗಳ ಹಿಂದೆ ಹುಟ್ಟು ಹಬ್ಬ ಆಚರಿಸಿಕೊಂಡು ಗೆಳೆಯರಿಗೆ ಬರ್ತಡೆ ಪಾರ್ಟಿ ಕೊಡಲು ಹೋಗಿದ್ದ. ಹೀಗೆ ಹೋದವ ಮನೆಗೆ ವಾಪಾಸ್ ಆಗುವಾಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಪೋಟೊದಲ್ಲಿರುವ ಯುವಕನ ಹೆಸರು ವಿನಾಯಕ ಹೋರಿಕೇರಿ(28)ಅಂತಾ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ನಿವಾಸಿ. ನಿನ್ನೆ ರಾತ್ರಿ ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ಹೋಗ್ತಿ ಆತನ ಬೈಕ್ ಅಡ್ಡಹಾಕಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನೂ ಮದುವೆಯಾಗದ ಈ ವಿನಾಯಕ ಒಬ್ಬನೇ ಮಗನಿದ್ದು ಯಾವುದೇ ಕೆಲಸ ಕಾರ್ಯಗಳನ್ನ ಮಾಡುತ್ತಿರಲಿಲ್ಲ. ಇನ್ನೂ ಕಳೆದ ವರ್ಷ ಇದೇ ವಿನಾಯಕ ಇಡೀ ಜಿಲ್ಲೆಯಲ್ಲೇ ಮಾಡಬಾರದ ಕೆಲಸ ಮಾಡಿ ಸುದ್ದಿಯಾಗಿದ್ದ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತ ಭರಮು ದೂಪದಾಳೆ ಎಂಬುವವರ ಮೇಲೆ ನಾಡ ಪಿಸ್ತೂಲ್ ದಿಂದ ಪೈರಿಂಗ್ ಮಾಡಿ ಹತ್ಯೆಗೆ ಯತ್ನಿಸಿರುತ್ತಾನೆ. ಇನ್ನೂ ಭರಮಾ ದೂಪದಾಳೆ ಅಂದು ಬದುಕುಳಿದಿದ್ರೇ ಈತ ಅರೆಸ್ಟ್ ಆಗಿ ಹಿಂಡಲಗಾ ಜೈಲು ಸೇರಿರುತ್ತಾನೆ.
ಎರಡು ತಿಂಗಳ ಹಿಂದಷ್ಟೇ ಜಾಮೀನು ಮೇಲೆ ಹೊರ ಬಂದಿದ್ದ ಈತ ಕೆಲಸ ಕಾರ್ಯ ಇಲ್ಲದೇ ಊರಲ್ಲಿ ಯುವಕರ ಗುಂಪು ಕಟ್ಟಿಕೊಂಡು ಓಡಾಡ್ತಿರ್ತಾನೆ. ಶನಿವಾರದಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಈತ ನಿನ್ನೆ ಸ್ನೇಹಿತರು ಪಾರ್ಟಿ ಕೇಳಿದ್ರೂ ಅಂತಾ ಹತ್ತರಗಿ ಬಳಿ ದಾಬಾಕ್ಕೆ ಪಾರ್ಟಿ ಕೊಡಿಸಿ ವಾಪಾಸ್ ಯಮಕನಮರಡಿಗೆ ಬರ್ತಿರುತ್ತಾನೆ. ಈ ವೇಳೆ ಈತನನ್ನ ಹಿಂಬಾಲಿಸಿದ ದುಷ್ಕರ್ಮಿಗಳು ರಸ್ತೆ ಮಧ್ಯದಲ್ಲಿ ಈತನನ್ನ ಅಡ್ಡಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
POCSO Case ಚಿತ್ರದುರ್ಗ ಮುರುಘಾ ಶ್ರೀಗಳಿಗೆ ಶಾಕ್ ಕೊಟ್ಟ ಕೋರ್ಟ್, ಶರಣರಿಗೆ ಜೈಲೇ ಗತಿ..!
ಇನ್ನೂ ಕೊಲೆ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿರುತ್ತಾರೆ. ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬಸ್ಥರು ಅದೊಂದು ವಿಚಾರಕ್ಕೆ ಕೊಲೆ ಆಗಿರಬಹುದು ಅಂತಾ ಸಂಶಯ ವ್ಯಕ್ತಪಡಿಸಿದ್ದಾರೆ. ಹೌದು ವಿನಾಯಕ ಪ್ರೀತಿ ವಿಚಾರದಲ್ಲಿ ಕೆಲ ವರ್ಷಗಳ ಹಿಂದೆ ಗಲಾಟೆ ಮಾಡಿಕೊಂಡಿದ್ದನಂತೆ. ಆಗ ವಿನಾಯಕನನ್ನ ಹುಡುಗಿ ಮನೆಯರು ಕೊಲೆ ಮಾಡಲು ಪ್ರಯತ್ನ ಮಾಡಿದ್ದರಂತೆ. ಅಲ್ಲಿ ಬಚಾವ್ ಆಗಿ ಬಂದಿದ್ದ ವಿನಾಯಕನನ್ನ ದುಷ್ಕರ್ಮಿಗಳು ನಿನ್ನೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಅಂತಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
Crime News: ಕೌಟುಂಬಿಕ ದೌರ್ಜನ್ಯದಿಂದ ತಾಯಿ ರಕ್ಷಿಸಲು ತಂದೆಯನ್ನೇ ಕೊಂದ ಪುತ್ರಿ
ಒಟ್ಟಾರೆ ಸತೀಶ್ ಜಾರಕಿಹೊಳಿ ಆಪ್ತನ ಕೊಲೆ ಮಾಡಲು ಹೋಗಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದವ ಕೊಲೆಯಾಗಿದ್ದಾನೆ. ಪ್ರೀತಿ ವಿಚಾರಕ್ಕೆ ವಿನಾಯಕನನ್ನ ಕೊಲೆ ಮಾಡಿದ್ರಾ ಅಥವಾ ಹಳೆ ದ್ವೇಷ ಇಟ್ಟುಕೊಂಡು ಹತ್ಯೆ ಮಾಡಿದ್ರಾ ಅನ್ನೋದು ಪೊಲೀಸರ ತನಿಖೆಯಿಂದ ಗೊತ್ತಾಗಲಿದೆ. ಆದ್ರೇ ಮಗನನ್ನ ಕಳೆದುಕೊಂಡ ಕುಟುಂಬ ಬೀದಿಗೆ ಬಂದಿದ್ದು ದುರ್ದೈವ.