ದೇವರ ಆಶೀರ್ವಾದ ಪಡೆದು 1.6 ಲಕ್ಷ ರೂಪಾಯಿಗಳನ್ನು ಕಳ್ಳನೊಬ್ಬ ಎಗರಿಸಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್ ಆಗಿದೆ.
ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ದೇವರ, ಹಿರಿಯರ, ತಂದೆ-ತಾಯಂದಿರ, ಗುರುಗಳ ಆಶೀರ್ವಾದ ಪಡೆಯುವುದು ಸಾಮಾನ್ಯ. ಆದರೆ ಹೀಗೆ ಆಶೀರ್ವಾದ ಪಡೆಯುವುದಾಗ ಅದರ ಹಿಂದೆ ಒಳ್ಳೆಯ ಕೆಲಸದ ಉದ್ದೇಶವಿರುತ್ತದೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯಲ್ಲಿ ಕಳ್ಳನೊಬ್ಬ ಕಳ್ಳತನ ಮಾಡುವುದಕ್ಕೂ ಮುನ್ನ ಅಲ್ಲಿಯೇ ಇದ್ದ ದೇವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾನೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗೆ ಆಶೀರ್ವಾದ ಪಡೆದಿ 1.6 ಲಕ್ಷ ರೂಪಾಯಿ ಎಗರಿಸಿದ್ದಾನೆ!
ಈ ಘಟನೆ ನಡೆದಿರುವುದು, ಮಧ್ಯಪ್ರದೇಶದ ರಾಜ್ ಗಢದ ಜೀರಾಪುರ-ಮಚಲ್ಪುರ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ. ಕಳೆದ ಶನಿವಾರ ನಸುಕಿನ ಸುಮಾರು 1 ಗಂಟೆಗೆ ಈ ಕಳ್ಳತನ ನಡೆದಿದೆ. ಒಬ್ಬ ಮುಸುಕುಧಾರಿ ಪೆಟ್ರೋಲ್ ಪಂಪ್ ಕಚೇರಿಯೊಳಗೆ ನುಗ್ಗಿರುವುದನ್ನು ಸಿಸಿಟಿವಿಯ ವಿಡಿಯೊದಲ್ಲಿ ನೋಡಬಹುದಾಗಿದೆ. ಅತ್ತ ಇತ್ತ ನೋಡುವ ಕಳ್ಳ, ಕಳ್ಳತನಕ್ಕೆ ಮೊದಲು ಅಲ್ಲಿಯೇ ಇದ್ದ ದೇವರ ಪೋಟೋಗೆ ನಮಸ್ಕರಿಸಿದ್ದಾನೆ, ಬಳಿಕ ಪೂಜಿಸಿದ್ದಾನೆ. ನಂತರ ಸಿಸಿಟಿವಿಯತ್ತ ಗಮನ ಹೋಗುತ್ತಿದ್ದಂತೆಯೇ ಅದನ್ನು ವಸ್ತ್ರದಿಂದ ಸುತ್ತಲು ನೋಡಿದ್ದಾನೆ. ಆದರೆ ಅದು ಸಾಧ್ಯವಾಗಲಿಲ್ಲ.
ಕುಣಿಯುತ್ತಲೇ ನೋರಾ ಫತೇಹಿಗೆ ದೆವ್ವ ಮೆಟ್ಟಿಕೊಳ್ತಾ? ನಟಿಯ ವಿಡಿಯೋ ನೋಡಿ ಫ್ಯಾನ್ಸ್ ಸುಸ್ತು!
ಬಳಿಕ, ಕಚೇರಿಯ ಡ್ರಾಯರ್ ತೆರೆದು ಹಣವನ್ನು ದೋಚಿದ್ದಾನೆ. ಕಳ್ಳತನದ ಬಳಿಕ ಮತ್ತೊಮ್ಮೆ ಕಾರ್ಯ ಯಶಸ್ವಿಯಾಗಿದ್ದಕ್ಕೆ ದೇವರಿಗೆ ನಮಸ್ಕರಿಸಿದ್ದಾನೆ, ಇವುಗಳನ್ನು ಈ ದೃಶ್ಯದಲ್ಲಿ ನೋಡಬಹುದಾಗಿದೆ. ಮರುದಿನ ಕಚೇರಿ ಸಿಬ್ಬಂದಿ ಬಂದಾಗ ಈ ವಿಷಯ ತಿಳಿದಿದೆ.
ಘಟನೆಗೆ ಪ್ರತಿಕ್ರಿಯೆ ನೀಡಿರುವ, ಸ್ಥಳೀಯ ಪೊಲೀಸ್ ಠಾಣೆಯ ಪ್ರಭಾರಿ ಜಿತೇಂದ್ರ ಸಿಂಗ್ ಅವರು, ಪೆಟ್ರೋಲ್ ಬಂಕ್ ನಲ್ಲಿ 1.57 ಲಕ್ಷ ರೂಪಾಯಿ ನಗದು ಕಳ್ಳತನವಾಗಿದೆ. ಸಿಸಿಟಿವಿಯನ್ನು ಆಧರಿಸಿ ದೂರು ದಾಖಲು ಮಾಡಲಾಗಿದೆ. ಕಳ್ಳತನ ಮಾಡುವ ಮೊದಲು ಕಳ್ಳ ದೇವರಿಗೆ ನಮಸ್ಕರಿಸುವುದನ್ನು ಸಿಸಿಟಿವಿ ದೃಶ್ಯಗಳು ತೋರಿಸುತ್ತದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಶೀಘ್ರವಾಗಿ ಬಂಧಿಸುವ ವಿಶ್ವಾಸವಿದೆ ಎಂದಿದ್ದಾರೆ.
ಚಿಪ್ಸ್ ಖರೀದಿಸ್ತಿದ್ದಾಕೆ ರೈಲು ಬಂತೆಂದು ಓಡಿದಳು! ಮುಂದಾದದ್ದು ದುರಂತ- ಶಾಕಿಂಗ್ ವಿಡಿಯೋ ವೈರಲ್