Asianet Suvarna News Asianet Suvarna News

ಸ್ನೇಹಿತರಿಂದಲೇ ಮಹಿಳಾ ಟೆಕಿ ಮೇಲೆ ಮದ್ಯ ಕುಡಿಸಿ ರೇಪ್

  • ಮದ್ಯ ಕುಡಿಸಿ ಮತ್ತು ಬಂದ ಬಳಿಕ ನೈಜೀರಿಯಾ ಪ್ರಜೆಗಳಿಬ್ಬರಿಂದ ಸ್ನೇಹಿತೆ ಅತ್ಯಾಚಾರ  
  • ಟೆಕ್ಕಿಯೊಬ್ಬರು ಬಾಣಸವಾಡಿ ಠಾಣೆಗೆ ದೂರು ನೀಡಿದ್ದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
nigerian people arrested for raping woman techie in bangalore snr
Author
Bengaluru, First Published Sep 4, 2021, 8:34 AM IST
  • Facebook
  • Twitter
  • Whatsapp

ಬೆಂಗಳೂರು (ಸೆ.04): ಮದ್ಯ ಕುಡಿಸಿ ಮತ್ತು ಬಂದ ಬಳಿಕ ನೈಜೀರಿಯಾ ಪ್ರಜೆಗಳಿಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಟೆಕ್ಕಿಯೊಬ್ಬರು ಬಾಣಸವಾಡಿ ಠಾಣೆಗೆ ದೂರು ನೀಡಿದ್ದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಬಾಣಸವಾಡಿ ನಿವಾಸಿ ಟೋನಿ (35) ಹಾಗೂ ಉಬಾಕ (36)  ಬಂಧಿತರು. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಡಾ.ಎಸ್ಡಿ ಶರಣಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ, ಆರೋಪಿ ಅರೆಸ್ಟ್ 

ಯುವತಿ ಮೂಲತಃ  ಕಲಬುರಗಿಯವರಾಗಿದ್ದು ನಗರದ ಪ್ರತಿಷ್ಠಿತ ಕಂಪನಿಯಲ್ಲಿ  ಸಾಪ್ಟ್‌ವೇರ್‌  ಉದ್ಯೋಗಿಯಾಗಿದ್ದಾರೆ. ಯುವತಿಗೆ ಹಲವು ವರ್ಷಗಳಿಂದ ಟೋನಿ ಪರಿಚಯಸ್ಥನಾಗಿದ್ದ.  ಉಬಾಕ ಹಲವು ಬಾರಿ ಯುವತಿಯನ್ನು ಪರಿಚಯ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ ಇಬ್ಬರ ನಡುವೆ ಉತ್ತಮ ಸ್ನೇಹ ಇರಲಿಲ್ಲ. 

ಆ.29ರಂದು ಟೋನಿ ಸಂತ್ರಸ್ತೆಯನ್ನು ಸ್ವೇಹಿತರೊಬ್ಬರ ಮನೆಗೆ ಹೋಗೋಣ ಎಂದು ಉಬಾಕ ಮನೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಉಬಾಕನನ್ನು ನೋಡಿದ ಆಕೆ ಟೋನಿ ಮೇಲೆ ಸಿಟ್ಟಾಗಿದ್ದು  ಬಳಿಕ ಆಕೆಯನ್ನು ಸಮಾಧಾನಪಡಿಸಿ ಮದ್ಯ ಕುಡಿಸಿ ಮತ್ತಿನಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾರೆ.  

Follow Us:
Download App:
  • android
  • ios