
ಡೆಹ್ರಾಡೂನ್: ಫೈನಾನ್ಸ್ ಕಂಪನಿಯೊಂದಲ್ಲಿ ಸುಮಾರು 8 ಕೋಟಿ ರು.ಗೂ ಅಧಿಕ ಹಣವನ್ನು ದರೋಡೆ ಮಾಡಿ, ಪರಾರಿಯಾಗಿ ಮುಸುಕು ಹಾಕಿ ಓಡಾಡುತ್ತಿದ್ದ ಚಾಲಾಕಿ ದಂಪತಿ 10 ರು. ಜ್ಯೂಸ್ ಕುಡಿಯುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಸಂಗತಿ ಉತ್ತರಾಖಾಂಡ್‌ನಲ್ಲಿ ನಡೆದಿದೆ. ಇದೇ ಜೂ.10 ರಂದು ಪಂಜಾಬ್‌ನ ಲೂಧಿಯಾನಾದಲ್ಲಿರುವ ಸಿಎಂಎಸ್ ಸೆಕ್ಯುರಿಟೀಸ್ ಎಂಬ ಫೈನಾನ್ಸ್ ಕಂಪನಿಗೆ ನುಗ್ಗಿದ್ದ 12 ಜನರ ಗುಂಪೊಂದು ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಂಡು ಸುಮಾರು 8 ಕೋಟಿ 49 ಲಕ್ಷ ರು.ಗಳನ್ನು ದೋಚಿ ಪರಾರಿಯಾಗಿತ್ತು. ಸೆರೆಯಾಗಿರುವ ದಂಪತಿಯೂ ಅದೇ ಗುಂಪಿನಲ್ಲಿದ್ದರು. ಹಣ ದೋಚಿದ ಬಳಿಕ ಹಲವಾರು ತೀರ್ಥಕ್ಷೇತ್ರಗಳಿಗೆ ಹೋಗುತ್ತಿದ್ದ ಮಂದೀಪ್ ಕೌರ್ ಮತ್ತು ಪತಿ ಜಸ್ವಿಂದರ್ ಸಿಂಗ್‌ನನ್ನು ಬಂಧಿಸಲು ಪಂಜಾಬ್ ಪೊಲೀಸ್ ಬಲೆ ಬೀಸಿದ್ದರು.
ಉತ್ತರಾಖಂಡದ ಚಮೋಲಿಯ ಸಿಖ್ ತೀರ್ಥಕ್ಷೇತ್ರ (Sikh shrine in Chamoli) ಹೇಮಕುಂಡ್ (Hemkunda) ಸಾಹೀಬ್‌ನಲ್ಲಿ ದಂಪತಿ ಇದ್ದಾರೆ. ಆದರೆ ಮುಸುಕು ಹಾಕಿಕೊಂಡು ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆದರೆ ಮುಸುಕು ತೆಗೆಸುವುದು ಸವಾಲಾಗಿತ್ತು. ಈ ನಡುವೆ, ಹೇಮಕುಂಡದಲ್ಲಿ ಭಕ್ತಾದಿಗಳಿಗೆ ಉಚಿತವಾಗಿ 10 ರು. ಪ್ಯಾಕೆಟ್ ಜ್ಯೂಸ್ (Juice packets) ನೀಡಲಾಗುತ್ತದೆ. ಹೀಗಾಗಿ ಅಲ್ಲಿಗೆ ಬಂದ ದಂಪತಿ ಜ್ಯೂಸ್ ಕುಡಿಯಲು ತಮ್ಮ ಮುಸುಕು ಬಿಚ್ಚಿದ್ದಾರೆ. ಈ ವೇಳೆ ಪೊಲಿಸರಿಗೆ ಚಾಲಾಕಿ ದಂಪತಿ ಕಾಣಿಸಿದ್ದಾರೆ. ಆದರೆ ತಕ್ಷಣವೇ ಅವರನ್ನು ಬಂಧಿಸದೇ ಅವರು ಸಿಖ್ ಮಂದಿರದಲ್ಲಿ ದರ್ಶನ ಪಡೆದ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈಗಾಗಲೇ ಪ್ರಕರಣದ 9 ಆರೋಪಿಗಳನ್ನು ಬಂಧಿಸಲಾಗಿದೆ. ಕೇದಾರನಾಥ ಸೇರಿದಂತೆ ಹಲವು ಕ್ಷೇತ್ರಗಳಿಗೆ ಭೇಟಿ ನೀಡಿದ ಬಳಿಕ ನೇಪಾಳಕ್ಕೆ ಹೋಗಿ ನೆಲೆಸುವ ಯೋಜನೆ ದಂಪತಿಯದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Bengaluru: ಒಂಟಿ ಮಹಿಳೆಯ ಕೈ-ಕಾಲು ಕಟ್ಟಿ ಉಸಿರು ಗಟ್ಟಿಸಿ ಹತ್ಯೆ, ಮನೆ ದರೋಡೆ!
ಆಟೋ ಚಾಲಕನ ಮನೆಯಲ್ಲಿ ದರೋಡೆ ಮಾಡಿಸಿದ ಗೆಳೆಯ: ಮೂವರ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ