ನೇಣಿಗೆ ಶರಣಾದ ಪ್ರೇಮಿಗಳು: ಕೊನೆಯಾಸೆಯಂತೆ ತಾಳಿ ಕಟ್ಟಿಸಿಕೊಂಡೇ ಪ್ರಾಣಬಿಟ್ಟ ಯುವತಿ..!

Published : Jan 19, 2023, 01:00 AM IST
ನೇಣಿಗೆ ಶರಣಾದ ಪ್ರೇಮಿಗಳು: ಕೊನೆಯಾಸೆಯಂತೆ ತಾಳಿ ಕಟ್ಟಿಸಿಕೊಂಡೇ ಪ್ರಾಣಬಿಟ್ಟ ಯುವತಿ..!

ಸಾರಾಂಶ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಜೈನಾಪೂರ ಗ್ರಾಮದ ಹೊರವಲಯದಲ್ಲಿ ನಡೆದ ಘಟನೆ

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ(ಜ.19): ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದು ಪ್ರೇಮಿಗಳಿಬ್ಬರು ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಜೈನಾಪೂರ  ಗ್ರಾಮದ ಹೊರವಲಯದಲ್ಲಿ ನಿನ್ನೆ(ಬುಧವಾರ) ನಡೆದಿದೆ.  ರಾಕೇಶ್ ಅಂಬಲಿ (23) ಹಾಗೂ ಸಾವಿತ್ರಿ ‌ಅಂಬಲಿ (19) ಮೃತಪಟ್ಟಿರುವ ಪ್ರೇಮಿಗಳು. ಜೈನಾಪೂರ ಗ್ರಾಮದ ಹೊರ ವಲಯದ ತೊಟವೊಂದರಲ್ಲಿ ಗಿಡಕ್ಕೆ ನೇಣು ಹಾಕಿ ಕೊಂಡಿದ್ದಾರೆ. ರಾಕೇಶ್ ಮತ್ತು ಸಾವಿತ್ರಿ  ಮನೆಯಿಂದ ಹೊರ ಹೋಗಿದ್ದರು ಎಂದು ತಿಳಿದು ಬಂದಿದೆ.‌ ಇಬ್ಬರೂ ಮೂರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. 

ಟ್ರಾಕ್ಟರ್ ಡ್ರೈವರ್ ಪ್ರೀತಿಯ ಬಲೆಗೆ ಬಿದ್ದಿದ್ದ ಸಾವಿತ್ರಿ..!

ರಾಕೇಶ ಹಾಗೂ ಸಾವಿತ್ರಿ ಜೈನಾಪುರ ಗ್ರಾಮದವ ರಾಗಿದ್ದರು. ಇಬ್ಬರ ಮನೆ ಎದುರು ಬದಿರು ಇತ್ತು, ಹೀಗಾಗಿ ನಿತ್ಯ ಒಬ್ಬರೊಬ್ಬರು ನೋಡುತ್ತ ಪ್ರೇಮಾಂಕುರವಾಗಿತ್ತು.  ರಾಕೇಶ ಟ್ಯಾಕ್ಟರ್ ಚಾಲಕನಾಗಿದ್ದನು. ಸಾವಿತ್ರಿ 9ನೇ ಕ್ಲಾಸ್ ವರೆಗೆ ಓದಿ ಕಲಿಯುವದು ಬಿಟ್ಟು ಮನೆಯಲ್ಲಿದ್ದಳು. ಕಳೆದ ನಾಲ್ಕೇದು ವರ್ಷಗಳಿಂದ ಒಬ್ವರಿಗೊಬ್ಬರು ಪ್ರತಿಸುತ್ತಿದ್ದರು. ಇದು ಇಬ್ಬರ ಮನೆಯಲ್ಲಿ ಗೊತ್ತಾದ ಮೇಲೆ ಮದುವೆ ಮಾಡಿ ಎಂದು ಮನೆಯವರ ಎದುರು ಪ್ರೇಮಿಗಳು ಒತ್ತಾಯಿಸುತ್ತಿದ್ದರು. ಆದರೆ ಜಾತಿ ಬೇರೆ ಹಾಗೂ ಎದುರು ಮನೆಯವರು ಬೇಡ ಎಂದು ಪೋಷಕರು ಮದುವೆಗೆ ನಿರಾಕರಿಸಿದ್ದರು. ಇದರಿಂದ ಮನನೊಂದಿದ್ದ ಪ್ರೇಮಿಗಳು ತಮ್ಮ ಪ್ರೀತಿಗೆ ಹಿರಿಯರು ಬೆಲೆ‌ಕೊಡುವದಿಲ್ಲ ಎಂದು ಹೇಳಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ. 

Vijayapura: ಉಳುಮೆ ಮಾಡುತ್ತಿದ್ದ ಟ್ರ್ಯಾಕ್ಟರ್‌ಗೆ ಸಿಲುಕಿ ಯುವಕ ಸಾವು

ಸಾಯುವ ಮುನ್ನ ಮದುವೆಯಾಗಿದ್ದ ಜೋಡಿ..!

ರಾಕೇಶ ಹಾಗೂ ಸಾವಿತ್ರಿ ಮದುವೆಗೆ ಎರಡು ಕುಟುಂಬದವರು ನಿರಾಕರಿಸಿದ್ದರಿಂದ ಮನ ನೊಂದಿದ್ದ ಪ್ರೇಮಿಗಳು ಮಂಗಳವಾರವೇ ಮನೆಯಿಂದ ಓಡಿ ಹೋಗಿದ್ದರು. ತಮ್ಮ ಆಸೆಯಂತೆ ಮದುವೆಯಾಗಿ ನಂತರ ನೇಣಿಗೆ ಶರಣಾಗಿದ್ದಾರೆ. ನೇಣು ಬಿಗಿದುಕೊಂಡು ಸಾವನ್ನಪ್ಪಿದ ಮೇಲೆ ಗ್ರಾಮದ ಜನರಿಗೆ ವಿಷಯ ಗೊತ್ತಾಗಿದೆ.

ಶವದ ಕೊರಳಲ್ಲಿತ್ತು ತಾಳಿ..!

ಶವಗಳನ್ನು ನೇಣಿನಿಂದ ಕೆಳಗೆ ಇಳಿಸಿದ ಮೇಲೆ ಸಾವಿತ್ರಿ ಕೊರಳಲ್ಲಿ ತಾಳಿ ಇರುವದು ಗೊತ್ತಾಗಿದೆ. ಹೀಗಾಗಿ ತಮ್ಮ ಆಸೆಯಂತೆ ಮದುವೆಯಾಗಿ ನಂತರ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಬಸವನಬಾಗೇವಾಡಿ ಪಿಎಸ್ ಐ ದಡ್ಡಿಮನಿ ತಿಳಿಸಿದ್ದಾರೆ. ಬಸವನಬಾಗೇವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?