ಲವ್‌ ಜಿಹಾದ್‌ ಕ್ರೌರ್ಯ,  ಮಾವನೊಂದಿಗೆ ಸೆಕ್ಸ್‌ ಮಾಡಲು ಅತ್ತೆಯ ಒತ್ತಾಯ, ಗಂಡನ ಬೆಂಬಲ!

Published : Jul 02, 2021, 09:49 PM IST
ಲವ್‌ ಜಿಹಾದ್‌ ಕ್ರೌರ್ಯ,  ಮಾವನೊಂದಿಗೆ ಸೆಕ್ಸ್‌ ಮಾಡಲು ಅತ್ತೆಯ ಒತ್ತಾಯ, ಗಂಡನ ಬೆಂಬಲ!

ಸಾರಾಂಶ

* ಲವ್ ಜಿಹಾದ್‌ಗೆ ಬಲಿಯಾದ ಯುವತಿಯ ದಾರುಣ ಕತೆ * ಮಾವನೊಂದಿಗೆ ಸೆಕ್ಸ್ ಮಾಡಲು ಅತ್ತೆಯ ಒತ್ತಾಯ * ಮದುವೆಗೆ ಮುನ್ನ ಮತಾಂತರದ ಬಗ್ಗೆ ಹೇಳಿರಲಿಲ್ಲ * ನ್ಯಾಯಕ್ಕಾಗಿ ಯುವತಿಯ ಪತ್ರ

ಶ್ರೀನಗರ(ಜು. 02) ಇದೊಂದು ಘೋರ ಘಟನೆ. ಲವ್  ಜಿಹಾದ್ ಗೆ ಬಲಿಯಾಗಿದ್ದ ಯುವತಿಯ ಆರ್ತನಾದ.  ಲವ್ ಜಿಹಾದ್ ನಿಂದ ಮೋಸ ಹೋಗಿರುವ ಯುವತಿ ನ್ಯಾಯ ದೊರಕಿಸಿಕೊಡಿ ಎಂದು ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಮೊರೆ ಹೋಗಿದ್ದಾರೆ.

ಜಲಂಧರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಯುವಕನೊಬ್ಬನನ್ನು ಪ್ರೀತಿ ಮಾಡಿದ್ದಳು. ಶಾಲಾ ದಿನಗಳಿಂದಲೂ ಯುವತಿಯ ಪರಿಚಯವಿದ್ದವ ಮದುವೆಯಾಗುವಾಗಲೂ ಮತಾಂತರದ ಷರತ್ತು ಹಾಕಿರಲಿಲ್ಲ. ಆತನ ಕುಟುಂಬ ಸಹ ಮದುವೆ ಸಂದರ್ಭದಲ್ಲಿ ಏನನ್ನೂ ಹೇಳಿರಲಿಲ್ಲ. ಮದುವೆಯಾದ ಮೇಲೆ ಕುಟುಂಬದ ಒಂದೊಂದೆ ಕ್ರೌರ್ಯ ಬಯಲಾಗತೊಡಗಿದೆ.

ಆಧಾರ್ ಕಾರ್ಡ್ ನಲ್ಲಿ ಮೋರ್ತಜಾ, ಹೊರ ಲೋಕಕ್ಕೆ ಮೃತ್ಯುಂಜಯ

ಉತ್ತರ ಪ್ರದೇಶದ ಮಸೀದಿ ಒಂದರಲ್ಲಿ ಮುಸ್ಲಿಂ ಸಂಪ್ರದಾಯದಂಯತೆ ಮದುವೆ ನಡೆದಿತ್ತು. ನಂತರ ಹರಿದ್ವಾರದಲ್ಲಿ ಹಿಂದೂ ಸಂಪ್ರದಾಯದಂತೆಯೂ ಮದುವೆ ನಡೆದಿತ್ತು.  ಮದುವೆಯಾದ ಮೇಲೆ ಯುವತಿಗೆ ಒಂದಾದ ಮೇಲೆ ಒಂದು ಆಘಾತ ಕಾದಿತ್ತು. ಯುವಕನಿಗೆ ಮೊದಲೆ ಮದುವೆಯಾಗಿರುವುದು ಗೊತ್ತಾಗಿ ಆಘಾತಕ್ಕೆ ಒಳಗಾಗಿದ್ದಳು.

ಆದರೆ ಕ್ರೌರ್ಯ ಒಲ್ಲಿಗೆ ನಿಲ್ಲುವುದಿಲ್ಲ. ಯುವತಿಯ ಅತ್ತೆ ಅಂದರೆ ಮದುವೆಯಾಗಿದ್ದವನ  ತಾಯಿಗೆ ಕ್ಯಾನ್ಸರ್  ಇತ್ತು. ಈ ಕಾರಣಕ್ಕೆ ಅತ್ತೆ ಸೊಸೆಯನ್ನು ತನ್ನ ಗಂಡನೊಂದಿಗೆ ಮಲಗಲು ಒತ್ತಾಯಿಸಿದ್ದಾಳೆ. ನನಗೆ ಕ್ಯಾನ್ಸರ್ ಇರುವ ಕಾರಣ ಗಂಡನಿಗೆ ಲೈಂಗಿಕ ಸುಖ ನೀಡಲು ಆಗುತ್ತಿಲ್ಲ. ಸೊಸೆಯಾಗಿ ನೀನೇ ಆ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾಳೆ. ಗಂಡ ಸಹ ಒತ್ತಡ ಹಾಕಿದ್ದಾನೆ.

ಯುವತಿ ಇದಕ್ಕೆ ಒಪ್ಪದಿದ್ದಾಗ ಆಸ್ತಿ ಹಣದ ಆಮಿಷ ತೋರಿಸಲಾಗಿದೆ. ಯಾವುದಕ್ಕೂ ಜಗ್ಗದೆ ಇದ್ದಾಗ ಹಲ್ಲೆಗೆ ಮುಂದಾಗಿದ್ದಾರೆ. ಈ ಎಲ್ಲ ವಿವರಗಳನ್ನು ಯುವತಿ ಪತ್ರದಲ್ಲಿ ನಮೂದಿಸಿದ್ದು ನ್ಯಾಯ ಕೊಡಿಸಲು ಅಂಗಲಾಚಿದ್ದಾರೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!