ಹಿಂದೂ ಹೆಸರಲ್ಲಿ ಲವ್, ಬಲವಂತವಾಗಿ ಮತಾಂತರಗೊಳಿಸಿ ಅಪ್ಪನ ಜೊತೆ ಸೆಕ್ಸ್‌ಗೆ ಒತ್ತಾಯಿಸಿದ ಅಬೀದ್!

By Suvarna News  |  First Published Jun 3, 2023, 8:11 PM IST

ಹಿಂದೂ ಹುಡುಗಿಯನ್ನು ಪ್ರೀತಿಯ ನಾಟಕವಾಡಿ ಬಲೆಗೆ ಬೀಳಿಸಿದ ಅಬೀದ್, ಬಳಿಕ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಡಿಯೋಗಳನ್ನು ಹರಿಬಿಡುವುದಾಗಿ ಬೆದರಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ ಅಬೀದ್, ತನ್ನ ತಂದೆ ಜೊತೆಗೆ ಸೆಕ್ಸ್ ಮಾಡುವಂತೆ ಚಿತ್ರಹಿಂಸೆ ನೀಡಿದ್ದಾನೆ. ಕ್ರೂರ ಲವ್ ಜಿಹಾದ್ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. 


ಬರೇಲಿ(ಜೂ.03): ದೇಶದಲ್ಲಿ ಬಲವಂತದ ಮತಾಂತರ, ಲವ್ ಜಿಹಾದ್, ಪ್ರೀತಿ ಹಾಗೂ ಸೆಕ್ಸ್ ವಂಚನೆಗಳು ಹೆಚ್ಚಾಗುತ್ತಿದೆ. ಇದೀಗ ಅಂಕಿತ್ ಹೆಸರು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿದ ಅಬೀದ್, ಬಳಿಕ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದೇ ವಿಡಿಯೋಗಳನ್ನಿಟ್ಟು ಬೆದರಿಸಿ ಹುಡುಗಿಯನ್ನು ಬಲವಂತವಾಗಿ ಮತಾಂತರ ಮಾಡಿದ್ದಾನೆ. ಮದುವೆಯಾಗುವುದಾಗಿ ಹೇಳಿ ತನ್ನ ತಂದೆಯ ಜೊತೆಗೆ ಸೆಕ್ಸ್ ಮಾಡುವಂತೆ ಹುಡುಗಿಗೆ ಚಿತ್ರಹಿಂಸೆ ನೀಡಿದ ಘಟನೆ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ನಡೆದಿದೆ. ಅಬೀದ್ ಮನೆಯಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ, ದೂರು ದಾಖಲಿಸಿದ್ದಾರೆ. ಇತ್ತ ಅಬೀದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ತಂದೆ ಹಾಗೂ ಇತರ ವಿರುದ್ಧ ಪ್ರಕರಣ ದಾಖಲಾಗಿದೆ.

24 ವರ್ಷದ ಮಹಿಳೆ ಪೊಲೀಸ್ ಠಾಣೆಯಲ್ಲಿ ತನಗಾಗಿರುವ ಅನ್ಯಾಯದ ವಿರುದ್ದ ಹೋರಾಟ ಆರಂಭಿಸಿದ್ದಾಳೆ. ಅಬೀದ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿರುವ ಮಹಿಳೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾಳೆ. ಇತ್ತ ಪೊಲೀಸರು ಅಬೀದ್ ಬಂಧಿಸಿದ್ದಾರೆ. ಅಬೀದ್ ತಂದೆ ವಿರುದ್ಧವೂ ಪ್ರಕರಣ ದಾಖಲಾಗಿದೆ.

Tap to resize

Latest Videos

ಅತ್ಯಾಚಾರ ನಡೆಸಿ ಬಲವಂತದ ಮತಾಂತರ, ಕೇರಳ ಸ್ಟೋರಿ ಚಿತ್ರ ನೋಡಿ ಎಚ್ಚೆತ್ತ ಖ್ಯಾತ ಮಾಡೆಲ್!

ಅಬೀದ್ ತನ್ನ ಹೆಸರು ಅಂಕಿತ್ ಎಂದು ಹೇಳಿ ಹಿಂದು ಹುಡುಗಿಯ ಸ್ನೇಹ ಸಂಂಪಾದಿಸಿದ್ದ. ಯುವತಿಯ ಭೇಟಿಯಾಗುವ ವೇಳೆ ಕೈಗೆ ದಾರ, ತಿಲಕ ಸೇರಿದಂತೆ ಇತರ ನಾಟಕಗಳನ್ನು ಆಡಿದ್ದ. ಹೀಗಾಗಿ ಯುವತಿಗೆ ಈತನ ಅಸಲಿ ಹೆಸರು ಅಬೀದ್ ಅನ್ನೋದು ಗೊತ್ತೆ ಆಗಿಲ್ಲ. ಸ್ನೇಹ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ. ಇದೇ ವೇಳೆ ಈ ವಿಡಿಯೋಗಳನ್ನು ಮಾಡಿದ್ದ.

ಬಳಿಕ ವಿಡಿಯೋ ಹರಿಬಿಡುವುದಾಗಿ ಬೆದರಿಸಿ ಬಲವಂತವಾಗಿ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾನೆ. ಮತಾಂತರ ಮಾಡಿದ ಅಬೀದ್ ಮನಗೆ ಕರೆದುಕೊಂಡು ಹೋಗಿ, ತನ್ನ ತಂದೆ ಜೊತೆಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಇಷ್ಟೇ ಅಲ್ಲ ಚಿತ್ರ ಹಿಂಸೆ ನೀಡಿದ್ದಾನೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ. ಅಬೀದ್ ಹಾಗೂ ಆತನ ಕುಟುಂಬಸ್ಥರಿಂದ ತಪ್ಪಿಸಿಕೊಂಡು ಬಂದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ದೆಹಲಿ ಬಾಲಕಿ ಬರ್ಬರ ಹತ್ಯೆ ಕೇಸ್‌: 15 ದಿನದ ಹಿಂದೆಯೇ ಸ್ಕೆಚ್‌; ಕೊಲೆಗೆ ಕಾರಣ ಹೀಗಿದೆ..

ಯುಪಿ ಪೊಲೀಸರು ಮತಾಂತರ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಯುವತಿ ಪ್ರಕರಣ ದಾಖಲಾಗಿದೆ. ಯುವತಿ ಹೇಳಿಕೆ ಕುರಿತು ತನಿಖೆ ನಡೆಯಲಿದೆ. ಈ ತನಿಖೆಯಲ್ಲಿ ದೊರೆಯುವ ಸಾಕ್ಷ್ಯಗಳು, ಆಧಾರಗಳ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. 

click me!