ಮಾದಕವಸ್ತು ಪುನರ್ವಸತಿ ಕೇಂದ್ರಕ್ಕೆ ಹೋದ ಮಹಿಳೆಯನ್ನು ಕೊಂದು ಪೀಸ್‌ ಪೀಸ್‌ ಮಾಡಿದ ಮಾಲೀಕರು!

By BK Ashwin  |  First Published Jun 3, 2023, 6:32 PM IST

ಮೊನಾರ್ಕ್ ಪುನರ್ವಸತಿ ಕೇಂದ್ರದಲ್ಲಿ ಮೊದಲ ದಿನ ಇದ್ದ ಸಮಯದಲ್ಲಿ, ಆ ಕೇಂದ್ರದ ಮಾಲೀಕರಿಬ್ಬರ ಮೇಲೆ ದಾಳಿ ಮಾಡಿದಳು. ಪ್ರತೀಕಾರವಾಗಿ ಅವಳನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. 


ಮೆಕ್ಸಿಕೋ ( ಜೂನ್ 3, 2023): ಮಾದಕವಸ್ತು ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಮೆಕ್ಸಿಕೋಗೆ ತೆರಳಿದ್ದ ಅಮೆರಿಕದ ಮಹಿಳೆಯೊಬ್ಬರನ್ನು ಹತ್ಯೆಗೈದು ಛಿದ್ರ ಛಿದ್ರಗೊಳಿಸಲಾಗಿದೆ ಎಂದು ವರದಿಯಾಗಿದೆ. ಕಳೆದ 10 ವರ್ಷಗಳಿಂದ ವಾಸಿಸುತ್ತಿದ್ದ ಸೆಲಿಯಾ ಯಾನೆಲ್ ಕ್ಯಾಸ್ಟನೆಡಾ ಅವರು ಅಮೆರಿಕದಿಂದ ಹಿಂದಿರುಗಿದ ನಂತರ ಅವರ ಸಂಬಂಧಿಕರು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದರು ಎಂದೂ ತಿಳಿದುಬಂದಿದೆ.

ಮೊನಾರ್ಕ್ ಪುನರ್ವಸತಿ ಕೇಂದ್ರದಲ್ಲಿ ಮೊದಲ ದಿನ ಇದ್ದ ಸಮಯದಲ್ಲಿ, ರಾತ್ರಿಯ ವೇಳೆ ಆಕೆ ಹಿಂತೆಗೆದುಕೊಳ್ಳುವ ಲಕ್ಷಣಗಳಿಂದಾಗಿ "ಹಿಂಸಾತ್ಮಕ ಎಪಿಸೋಡ್" ಅನ್ನು ಹೊಂದಿದ್ದಳು ಮತ್ತು ಆ ಕೇಂದ್ರದ ಮಾಲೀಕರಿಬ್ಬರ ಮೇಲೆ ದಾಳಿ ಮಾಡಿದಳು ಎಂದೂ ತಿಳಿದುಬಂದಿದೆ. ಇದರ ಪ್ರತೀಕಾರವಾಗಿ ಮಾದಕವಸ್ತು  ಪುನರ್ವಸತಿ ಕೇಂದ್ರದ ಮಾಲೀಕರಾದ  ಡಯಾನಾ ಪಾವೊಲಾ ಮತ್ತು ಕ್ಲೌಡಿಯಾ ರೂಬಿ ಅವರು ಸೆಲಿಯಾ ಯಾನೆಲ್ ಕ್ಯಾಸ್ಟನೆಡಾ ಅವರನ್ನು ಸಾಯಿಸಿದರು ಎಂದು ಆರೋಪಿಸಲಾಗಿದೆ. ನಂತರ ಅವರು ಆಕೆಯ ಮೃತ ದೇಹವನ್ನು ತುಂಡುಗಳಾಗಿ ಕತ್ತರಿಸಿ ಮರೆಮಾಚಲು ಪ್ರಯತ್ನಿಸಿದರು ಎಂದೂ ವೈಸ್ ನ್ಯೂಸ್ ವರದಿ ಮಾಡಿದೆ.

Tap to resize

Latest Videos

ಇದನ್ನು ಓದಿ: Bengaluru Crime: ಪತ್ನಿಗೆ ಎಸ್‌ಐನಿಂದ ಜಾತಿ ನಿಂದನೆ, ಕಿರುಕುಳ ಆರೋಪ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಪೊಲೀಸರು ಪುನರ್ವಸತಿ ಕೇಂದ್ರದಲ್ಲಿ ಲೋಹದ ಕಸದ ತೊಟ್ಟಿಯನ್ನು ಕಂಡುಕೊಂಡಿದ್ದು, ಅದರಲ್ಲಿ ಕಪ್ಪು ಮತ್ತು ಬಿಳಿ ಪೈಜಾಮಾ ಹಾಗೂ ರಕ್ತದಿಂದ ಕೂಡಿದ್ದ ಚಪ್ಪಲಿಯನ್ನು ಪತ್ತೆಹಚ್ಚಿದ್ದರು ಎಂದು ಪೊಲೀಸ್‌ ವರದಿ ಹೇಳುತ್ತದೆ. ಅಲ್ಲದೆ, ತನಿಖೆಗಾಗಿ ಅವರು ಮಾದಕವಸ್ತು ರೀಹ್ಯಾಬ್‌ ಕೇಂದ್ರದಲ್ಲಿ ಮತ್ತಷ್ಟು ಹುಡುಕಾಟ ನಡೆಸಿದಾಗ ಅಲ್ಲಿದ್ದ ಮಾಲೀಕರು ಪಲಾಯನ ಮಾಡಲು ಪ್ರಯತ್ನಿಸಿದರು. ಆ ವೇಳೆ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಬಳಿಕ, ಬಾತ್‌ಟಬ್‌ನಲ್ಲಿ ಮಾನವ ಮೂಳೆಗಳು ಮತ್ತು ಮಾಂಸದಿಂದ ತುಂಬಿದ ಪ್ಲಾಸ್ಟಿಕ್ ಬಕೆಟ್‌ಗಳು, ಜೊತೆಗೆ ಆರು ದೊಡ್ಡ ಮೂಳೆಗಳು ಮತ್ತು ಎರಡು ಮೊಣಕಾಲು ಮೂಳೆಗಳನ್ನು ಹೊಂದಿರುವ ಪ್ಲಾಸ್ಟಿಕ್ ಚೀಲಗಳನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಅಲ್ಲದೆ, ಪೊಲೀಸರು ಅಡುಗೆಮನೆಯಲ್ಲಿ ಮಾನವ ಮಾಂಸವನ್ನು ಹೊಂದಿರುವ ಬ್ಲೆಂಡರ್ ಅನ್ನು ಸಹ ಕಂಡುಕೊಂಡಿದ್ದಾರೆ. 

ಇದನ್ನೂ ಓದಿ: ಅರೇಬಿಕ್‌ ಶಾಲೆಯಲ್ಲಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್‌: 6 ತಿಂಗಳ ಮೊದಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ವಿದ್ಯಾರ್ಥಿನಿ!

ಶಂಕಿತರು ಮೃತ ಮಹಿಳೆಯ ಮೃದುವಾದ ದೇಹದ ಅಂಗಾಂಶಗಳನ್ನು ದ್ರವೀಕರಿಸಲು ಪ್ರಯತ್ನಿಸಿದ್ದಾರೆ ಎಂದೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.  ಇತ್ತೀಚಿನ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಈ ಭಯಾನಕ ವಿವರಗಳು ಹೊರಹೊಮ್ಮಿದೆ. ನ್ಯಾಯಾಧೀಶರು ಪೊಲೀಸರ ವರದಿಯನ್ನು ಓದಿದ್ದಾರೆ. ಅಲ್ಲದೆ, ವರದಿಯನ್ನು ಓದಿದ ನ್ಯಾಯಾಧೀಶರು, ಮೃತ ಮಹಿಳೆಯ ಘನತೆಯನ್ನು ಕಾಪಾಡುವ ಸಲುವಾಗಿ ಇನ್ನಷ್ಟು ಬೀಕರ ವಿವರಗಳನ್ನು ಬಹಿರಂಗಪಡಿಸುವುದನ್ನು ತಡೆಹಿಡಿಯಲಾಗಿದೆ ಎಂದು ಹೇಳಿದರು. ಸಂತ್ರಸ್ತೆಯನ್ನು ಮತ್ತೆ ಬಲಿಪಶು ಮಾಡಬಾರದು ಎಂಬ ಕಾರಣಕ್ಕಾಗಿ, ಆಕೆಯ ಘನತೆಗಾಗಿ ನಾನು ಮುಂದುವರಿಯುವುದಿಲ್ಲ ಎಂದೂ ಅವರು ಹೇಳಿದರು.

ಸದ್ಯ,, ಪುನರ್ವಸತಿ ಕೇಂದ್ರದ ಮಾಲೀಕರ ವಿರುದ್ಧದ ವಿಚಾರಣೆ ಇನ್ನೂ ನಡೆಯುತ್ತಿದ್ದು, ತಪ್ಪಿತಸ್ಥರೆಂದು ಸಾಬೀತಾದರೆ ಅವರು ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ಸಹೋದರಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನ ಮೇಲೆ ಚಾಕು ಹಾಕಿದ ಯುವಕ

click me!