ಲವ್ ಜಿಹಾದ್ ಪ್ರಕರಣ/ ಉತ್ತರ ಪ್ರದೇಶದ ಹೊಸ ಕಾನೂನಿನ ಅನ್ವಯ ಬಂಧನ/ ಗುರುತು ಮರೆಮಾಚಿ ಮದುವೆಯಾಗಿದ್ದ/ ಯುವತಿ ತಂದೆ ನೀಡಿದ ದೂರಿನ ಆಧಾರಲ್ಲಿ ಬಂಧನ
ಕಾನ್ಪುರ(ಡಿ. 20) ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ಮೇಲೆ ಕಾನೂನು ತಂದಿದೆ. ಈ ನಡುವೆ ಒಂದು ಪ್ರಕರಣ ದಾಖಲಾಗಿದೆ.
ತಾನು ಹಿಂದೂ ಎಂದು ಮರೆಮಾಚಿ ಮದುವೆ ಮಾಡಿಕೊಂಡು ವಂಚನೆ ಎಸಗಿದ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದ ಕನೌಜ್ ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಜಾರಿ ಮಾಡಿರುವ ಬಲವಂತದ ಮತಾಂತರರ, ಮದುವೆ ಕಾನೂನು ಅಡಿಯಲ್ಲಿ ಬಂಧನವಾಗಿದೆ.
undefined
FIR ಇಲ್ಲ, ದೂರು ಇಲ್ಲ , ಆದರೂ ಲವ್ ಜಿಹಾದ್ ಕೇಸಿನಲ್ಲಿ ಬಂಧನ
ಶುಕ್ರವಾರ ಯುವತಿಯ ತಂದೆ ದೂರು ದಾಖಲಿಸಿದ್ದಾರೆ. ತೌಫೀಕ್ ಎಂಬಾತ ತನ್ನ ಗುರುತು ಮರೆಮಾಚಿ ಮದುವೆಯಾಗಿದ್ದ ಆರೋಪ ಹೊತ್ತಿದ್ದಾನೆ . ಸೋಶಿಯಲ್ ಮೀಡಿಯಾದಲ್ಲಿ ತನ್ನನ್ನು ತಾನ ರಾಹುಲ್ ವರ್ಮಾ ಎಂದು ಹೇಳಿಕೊಂಡಿದ್ದ. ಯುವತಿ ಬಳಿ ತನ್ನ ಮೂಲ ಲಕ್ನೋ ಎಂದು ಹೇಳಿದ್ದ.
ಲಗ್ನ ಪತ್ರಿಕೆಯಲ್ಲಿಯೂ ರಾಹುಲ್ ವರ್ಮಾ ಎಂದೇ ಪ್ರಿಂಟ್ ಮಾಡಿಸಲಾಗಿದ್ದು. ಲಕ್ನೋದಲ್ಲಿಯೇ ಮದುವೆ ಮಾಡಿಕೊಡಲಾಗಿದೆ. ಕೆಲವರು ಮಾತ್ರ ಮದುವೆಗೆ ಹಾಜರಾಗಿದ್ದರು.
ಮದುವೆಯಾದ ಮೇಲೆ ಆರೋಪಿ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಪೋಟೋ ಹಂಚಿಕೊಂಡಿದ್ದಾನೆ. ಈ ವೇಳೆ ಕಮೆಂಟ್ ಮಾಡುವವರು ನಿಖಾ ಎಲ್ಲಿ ಆಗಿದೆ? ಯಾವಾಗ ಆಗಿದೆ? ಎಂದು ಪ್ರಶ್ನೆ ಕೇಳಿದಾಗ ಆರೋಪಿಯ ನಿಜಬಣ್ಣ ಬಯಲಾಗಿದೆ. ಯುವತಿ ತಂದೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.