* ಪ್ರೀತಿಸುವಂತೆ ಅನ್ಯಕೋಮಿನ ಯುವಕ ಕಿರುಕುಳ ನೀಡಿದ್ದಕ್ಕೆ ಬಾಲಕಿ ಆತ್ಮಹತ್ಯೆ
* ರಿಜಿಸ್ಟ್ರಾರ್ ಮದುವೆ ಮಾಡಿಕೊಳ್ಳಲು ಬರುತ್ತಿರುವಾಗ ದಾರಿ ಮಧ್ಯೆಯೇ ಯುವಕ ಎಸ್ಕೇಪ್
( ಚಾಮರಾಜನಗರ ಹಾಗೂ ಮಂಗಳೂರಿನಲ್ಲಿ ನಡೆದ ಘಟನೆಗಳು
ಮಂಗಳೂರು/ಚಾಮರಾನಗರ, (ಮೇ.05) :ಅನ್ಯಕೋಮಿನ ಯುವಕ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎಂದು ಮನನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ನಡೆದಿದೆ. ಮತ್ತೊಂದೆಡೆ 2 ವರ್ಷ ಪ್ರೀತಿಸಿ, ರಿಜಿಸ್ಟ್ರಾರ್ ಮದುವೆ ಮಾಡಿಕೊಳ್ಳಲು ಬರುತ್ತಿರುವಾಗ ದಾರಿ ಮಧ್ಯೆಯೇ ಯುವಕ ಎಸ್ಕೇಪ್ ಆಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಪ್ರತ್ಯೇಕವಾಗಿ ನಡೆದ ಘಟನೆ ವಿವರ ಈ ಕೆಳಗಿನಂತಿದೆ ನೋಡಿ..
ಅನ್ಯಕೋಮಿನ ಯುವಕ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎಂದು ಮನನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ನಡೆದಿದ್ದು, ಕಣಿಯೂರು ನಿವಾಸಿ ಸಾಹುಲ್ ಹಮೀದ್ ವಿರುದ್ಧ ದೂರು ದಾಖಲಾಗಿದೆ.
undefined
ಬಾಮೈದುನನ ಲವ್ ಸ್ಟೋರಿಗೆ ಎಂಟ್ರಿ ಆಗಿದ್ದಕ್ಕೇ ಮರ್ಡರ್? ತನಿಖೆಯಲ್ಲಿ ಬಯಲಾಗಿತ್ತು ಅಸಲಿ ಸತ್ಯ!
ಕಣಿಯೂರು ಮಸೀದಿ ಹಿಂಭಾಗದ ಬಾಡಿಗೆ ಮನೆಯಲ್ಲಿ ಬಾಲಕಿ ಕುಟುಂಬ ವಾಸಿಸುತ್ತಿತ್ತು, ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಬಾಲಕಿ ಮನೆಗೆ ವಿ.ಎಚ್.ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಪ್ರಾಪ್ತ ಬಾಲಕಿ ಲವ್ ಜಿಹಾದ್ ಗೆ ಬಲಿಯಾಗಿದ್ದಾಳೆ ಎಂದು ಆರೋಪಿಸಿದ್ದು, ಸಾಹುಲ್ ಹಮೀದ್ ನನ್ನು ಬಂಧಿಸಿ, ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಜಿಸ್ಟ್ರಾರ್ ಮದುವೆ ಮಾಡಿಕೊಳ್ಳಲು ಬರುತ್ತಿರುವಾಗ ಯುವಕ ಎಸ್ಕೇಪ್
ಚಾಮರಾಜನಗರ: ಎರಡು ವರ್ಷ ಪ್ರೀತಿಸಿ ನಾಟಕವಾಡಿ, ಕೊನೆಗೂ ಮದುವೆಯಾಗುವುದಾಗಿ ಹೇಳಿ ಇನ್ನೇನು ನೋಂದಣಾಧಿಕಾರಿ ಕಚೇರಿಗೆ ಬರುವ ಮಾರ್ಗ ಮಧ್ಯದಲ್ಲೇ ಯುವಕ ನಾಪತ್ತೆಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೋಣನಕೆರೆಯ ವಸಂತ (20) ಮೋಸ ಹೋದ ಯುವತಿ. ಬುಡಕಟ್ಟು ಸೋಲಿಗ ಸಮುದಾಯದವಳಾದ ಈಕೆ ಪೊನ್ನಾಚಿ ಗ್ರಾಮದ ಪರಂಜ್ಯೋತಿ(25) ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಪ್ರೇಮಿಗಳಾಗಿ ಎರಡು ವರ್ಷ ಕಾಲ ಕಳೆದಿದ್ದಾರೆ. ಮದುವೆಯಾಗು ಎಂದು ಹೇಳಿದ್ದಕ್ಕೆ ನಿರಾಕರಿಸಿದ್ದಾನೆ. ಬಳಿಕ ಪಂಚಾಯಿತಿಯಲ್ಲಿ ಮದುವೆಯಾಗುವುದಾಗಿಯೂ ಒಪ್ಪಿಕೊಂಡಿದ್ದ.
ಇನ್ನೇನು ಮದುವೆ ನೋಂದಣಿಗಾಗಿ ರಾಮಾಪುರಕ್ಕೆ ತೆರಳುವ ಮಾರ್ಗ ಮಧ್ಯೆಯೇ ಎಸ್ಕೇಪ್ ಆಗಿಬಿಟ್ಟಿದ್ದಾನೆ. ಸದ್ಯ ಮೋಸ ಹೋದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.