ಕೊಡಗು: ವ್ಯಾಪಾರದಲ್ಲಿ ನಷ್ಟ; ಬಟ್ಟೆ ವ್ಯಾಪಾರಿ ಆತ್ಮಹತ್ಯೆ

By Ravi Janekal  |  First Published Feb 24, 2023, 1:53 PM IST

ವ್ಯಾಪಾರದಲ್ಲಿ ನಷ್ಟ ಆಗಿದ್ದಕ್ಕೆ  ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಪಟ್ಟಣದಲ್ಲಿ ನಡೆದಿದೆ.


ಕೊಡಗು (ಫೆ.24) : ವ್ಯಾಪಾರದಲ್ಲಿ ನಷ್ಟ ಆಗಿದ್ದಕ್ಕೆ  ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಪಟ್ಟಣದಲ್ಲಿ ನಡೆದಿದೆ.

ಎಚ್.ಕೆ ಸಂದೀಪ್(HK Sandeep) (40) ಆತ್ಮಹತ್ಯೆ(Suicide) ಮಾಡಿಕೊಂಡ ದುರ್ದೈವಿ. ಸಕಲೇಶಪುರ ತಾಲೂಕಿನ ಹಡ್ಲಹಳ್ಳಿ ಗ್ರಾಮದ ನಿವಾಸಿಯಾದ ಸಂದೀಪ್ ಪಟ್ಟಣಕ್ಕೆ ಬಂದು ಕಳೆದ 20 ವರ್ಷಗಳಿಂದಲೂ ಬಟ್ಟೆ ವ್ಯಾಪಾರ(Clothing business) ಮಾಡಿಕೊಂಡಿದ್ದ. ನಾಪೋಕ್ಲು ಪಟ್ಟಣ(Napoklu town)ದಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Tap to resize

Latest Videos

undefined

 

Suicide case: ವರದಕ್ಷಿಣೆಗಾಗಿ ಪತ್ನಿಗೆ ಹಲ್ಲೆ ಮಾಡಿ ತವರಿಗೆ ಕಳಿಸಿದ್ದವನು ಮನೆಯಲ್ಲಿ ನೇಣಿಗೆ ಶರಣು!

ಆರ್.ಎಚ್. ಬಟ್ಟೆಮಳಿಗೆ ನಡೆಸುತ್ತಿದ್ದ ಸಂದೀಪ್ ವ್ಯಾಪಾರ ಮೊದಲು ಚೆನ್ನಾಗಿಯೇ ನಡೆದಿತ್ತು. ಇದೀಗ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ವ್ಯಾಪಾರದಲ್ಲಿ ನಷ್ಟದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನಷ್ಟದಿಂದಾಗಿ ವ್ಯಾಪಾರ ಸ್ಥಗಿತಗೊಳಿಸಿದ್ದ ಸಂದೀಪ್ ದಿನನಿತ್ಯ ಬದುಕು ಸಾಗಿಸಲು ಕಷ್ಟಪಡುತ್ತಿದ್ದನೆಂದು ಹೇಳಲಾಗಿದೆ. ಸೋಮವಾದಂದು  ಬೆಳಗ್ಗೆ 7.30ಕ್ಕೆ ಸ್ನೇಹಿತ ಸಂದೇಶ ಎಂಬುವವರಿಗೆ ಕರೆ ಮಾಡಿದ್ದ ಸಂದೀಪ. 9ಗಂಟೆಗೆ ಮನೆಗೆ ಬರುವಂತೆ ತಿಳಿಸಿದ್ದ. ಬೆಳಗ್ಗೆ 9 ಗಂಟೆಗೆ ಸಂದೇಶ್ ಮನೆಗೆ ತೆರಳಿದಾಗ ಸಂದೀಪ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ಸಂದೇಶ್ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

Mysuru: ಮಕ್ಕಳಿಲ್ಲವೆಂಬ ಕೊರಗು, ಪತ್ನಿ ತವರು ಸೇರಿಕೊಂಡ್ರೆ, ಪತಿ ಆತ್ಮಹತ್ಯೆ!

click me!