28 ಲಕ್ಷ ರು. ಸಾಲ ಪಡೆದು ವಂಚಿಸಿದ್ದ ಆನ್‌ಲೈನ್‌ ಗೆಳತಿ: ಶಿಕ್ಷಕ ಆತ್ಮಹತ್ಯೆ

By Kannadaprabha NewsFirst Published Feb 24, 2023, 7:48 AM IST
Highlights

ತನ್ನಿಂದ ಆನ್‌ಲೈನ್‌ ಗೆಳತಿ ಪಡೆದ 28 ಲಕ್ಷ ರು. ಸಾಲವನ್ನು ಸಕಾಲಕ್ಕೆ ನೀಡದ ಕಾರಣ ಉಂಟಾದ ಆರ್ಥಿಕ ಸಂಕಷ್ಟದಿಂದ ಬೇಸರಗೊಂಡು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಪ್ರೌಢಶಾಲಾ ಶಿಕ್ಷಕರೊಬ್ಬರು ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಬೆಂಗಳೂರು: ತನ್ನಿಂದ ಆನ್‌ಲೈನ್‌ ಗೆಳತಿ ಪಡೆದ 28 ಲಕ್ಷ ರು. ಸಾಲವನ್ನು ಸಕಾಲಕ್ಕೆ ನೀಡದ ಕಾರಣ ಉಂಟಾದ ಆರ್ಥಿಕ ಸಂಕಷ್ಟದಿಂದ ಬೇಸರಗೊಂಡು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಪ್ರೌಢಶಾಲಾ ಶಿಕ್ಷಕರೊಬ್ಬರು ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಶಂಕರಪ್ಪ ಬೋರೆಡ್ಡಿ (46) ಮೃತ ದುರ್ದೈವಿ.

ಮಲ್ಲೇಶ್ವರ (Malleshwaram) ಸಮೀಪದ ರೈಲಿಗೆ ತಲೆಕೊಟ್ಟು ಬುಧವಾರ ರಾತ್ರಿ ಶಂಕರಪ್ಪ (Shankarappa) ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಹಳಿಗಳ ಬಳಿ ಅಪರಿಚಿತ ಮೃತದೇಹ ಕಂಡು ಪೊಲೀಸರಿಗೆ ಬುಧವಾರ ಬೆಳಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ತೆರಳಿದ ಸಿಟಿ ರೈಲ್ವೆ ಠಾಣೆ ಪೊಲೀಸರು, ಮೃತದೇಹದ ಜೇಬಿನಲ್ಲಿದ್ದ ಮರಣಪತ್ರ ಹಾಗೂ ಗುರುತಿನ ಪತ್ರಗಳ ಮೂಲಕ ಮೃತರ ಗುರುತು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos

ಪ್ರೇಯಸಿ ಜತೆಗೆ ಓಡಿಹೋಗಿದ್ದ ವ್ಯಕ್ತಿ ನೇಣಿಗೆ ಶರಣು: ಪತ್ನಿ ತೊರೆದು ಪ್ರೇಯಸಿ ಹಿಂದೆ ಹೋಗಿದ್ದ ಭೂಪ..!

ಪ್ರತಿಭಟನಾ ಧರಣಿಗೆ ಬಂದಿದ್ದ ಶಿಕ್ಷಕ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ (Freedom Park) ತಮ್ಮನ್ನು ಪಿಂಚಣಿ ಯೋಜನೆಗೆ ಸೇರಿಸುವಂತೆ ಒತ್ತಾಯಿಸಿ ಅನುದಾನಿತ ಶಾಲೆಗಳ ಶಿಕ್ಷಕರ ಒಕ್ಕೂಟ ನಡೆಸುತ್ತಿದ್ದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಶಂಕರಪ್ಪ (Shankarappa) ಬಂದಿದ್ದರು.

ಮರಣಪತ್ರದಲ್ಲಿ ನಂದಿನಿ ಹೆಸರು ಉಲ್ಲೇಖ

ಮೃತರ ಶರ್ಟ್‌ ಜೇಬಿನಲ್ಲಿ ಅವರೇ ಬರೆದಿದ್ದು ಎನ್ನಲಾದ ಎರಡು ಪುಟಗಳ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ಹಣಕಾಸು ಸಮಸ್ಯೆ ಹಾಗೂ ಸಂತಾನ ಭಾಗ್ಯವಿಲ್ಲದ ನೋವು ಸೇರಿದಂತೆ ವೈಯಕ್ತಿಕ ಕಾರಣಗಳಿಂದ ಬೇಸರಗೊಂಡು ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶಂಕರಪ್ಪ ಉಲ್ಲೇಖಿಸಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಆನ್‌ಲೈನ್‌ ಮೂಲಕ ಶಂಕರಪ್ಪರ ಅವರಿಗೆ ಬೆಂಗಳೂರಿನ ನಂದಿನಿ (Nandini) ಎಂಬಾಕೆ ಪರಿಚಯವಾಗಿದೆ. ಎರಡು ಖಾಸಗಿ ಬ್ಯಾಂಕ್‌ಗಳಲ್ಲಿ ಬಡ್ಡಿಗೆ 35 ಲಕ್ಷ ರು ಸಾಲ ಪಡೆದಿದ್ದ ಶಂಕರಪ್ಪ ಅವರು, ಆ ಹಣದಲ್ಲಿ 28 ಲಕ್ಷ ರು ಹಣವನ್ನು ನಂದಿನಿಗೆ ಸಾಲ ಕೊಟ್ಟಿದ್ದರು. ಆದರೆ ಸಕಾಲಕ್ಕೆ ಆಕೆ ಹಣ ಮರಳಿಸದ ಪರಿಣಾಮ ಬ್ಯಾಂಕ್‌ಗೆ ಬಡ್ಡಿ ಪಾವತಿಸಬೇಕಿತ್ತು. ಇದರಿಂದ ಹಣಕಾಸು ಸಮಸ್ಯೆಗೆ ಶಂಕರಪ್ಪ ಸಿಲುಕಿದ್ದರು. ಈ ನೋವಿನಲ್ಲಿ ಅವರು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Suicide case: ವರದಕ್ಷಿಣೆಗಾಗಿ ಪತ್ನಿಗೆ ಹಲ್ಲೆ ಮಾಡಿ ತವರಿಗೆ ಕಳಿಸಿದ್ದವನು ಮನೆಯಲ್ಲಿ ನೇಣಿಗೆ ಶರಣು!

ಮರಣ ಪತ್ರದಲ್ಲಿ ನಂದಿನಿ ಹೆಸರು ಉಲ್ಲೇಖವಾಗಿದೆ. ಆಕೆಯ ಪೂರ್ವಾಪರ ಬಗ್ಗೆ ವಿವರ ಪಡೆಯಲಾಗುತ್ತಿದೆ. ಕೆಲ ದಿನಗಳ ಹಿಂದೆ ಎರಡ್ಮೂರು ಬಾರಿ ಆಕೆಯನ್ನು ಶಂಕರಪ್ಪ ಭೇಟಿ ಸಹ ಆಗಿದ್ದರು ಎಂಬ ಮಾಹಿತಿ ಇದೆ. ನಂದಿನಿ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ (ಐಪಿಸಿ 306) ಆರೋಪದಡಿ ಸಿಟಿ ರೈಲ್ವೆ ನಿಲ್ದಾಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!