ಕೊಪ್ಪಳದಲ್ಲಿ ಬಾಣಂತಿ ಹತ್ಯೆ, ಅಮವಾಸ್ಯೆ ಹಿನ್ನೆಲೆ ನಿಧಿಗಾಗಿ ನಡೆಯಿತಾ ಭೀಕರ ಕೊಲೆ!?

By Gowthami K  |  First Published Mar 21, 2023, 3:58 PM IST

ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಒಂದೂವರೆ ತಿಂಗಳ ಬಾಣಂತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.  ನಿಧಿ ಆಸೆಗಾಗಿ ತಡರಾತ್ರಿ ಬಾಣಂತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.


ಕೊಪ್ಪಳ (ಮಾ.21): ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಒಂದೂವರೆ ತಿಂಗಳ ಬಾಣಂತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.  ನಿಧಿ ಆಸೆಗಾಗಿ ತಡರಾತ್ರಿ ಬಾಣಂತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನೇತ್ರಾವತಿ ಕುರಿ (26) ಕೊಲೆಯಾದ ಬಾಣಂತಿಯಾಗಿದ್ದಾಳೆ. ತಡರಾತ್ರಿ ಈ ಘಟನೆ ನಡೆದಿದ್ದು, ನೇತ್ರಾವತಿಯನ್ನು ಸುಟ್ಟು ಕೊಲೆ ಮಾಡಲಾಗಿದೆ. ಅಮವಾಸ್ಯೆ ಹಿನ್ನೆಲೆಯಲ್ಲಿ ನಿಧಿಗಾಗಿ ಕೊಲೆ‌ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಿಂದ ಅಣತಿ ದೂರದಲ್ಲಿ  ಸುಟ್ಟು ಕರಕಲಾಗಿರುವ ನೇತ್ರಾವತಿ ಶವ ಸಿಕ್ಕಿದೆ. ಘಟನಾ ಸ್ಥಳಕ್ಕೆ ಕೊಪ್ಪಳ‌ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಶೀಲ ಶಂಕಿಸಿ ಪತ್ನಿಯ ಕೊಲೆ
ರಾಯಚೂರು: ತಾಲೂಕಿನ ಉಪ್ಪಳ ಗ್ರಾಮದ ಚಿಂಚೇರಿ ಡಿ.ಸೀಮಾದ ಬೀಳು ಹೊಲದಲ್ಲಿ ನಿಂಗಣ್ಣ ಎನ್ನುವ ವ್ಯಕ್ತಿ ಪತ್ನಿ ದೇವೀರಮ್ಮನ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ನಡೆದಿದೆ.

Tap to resize

Latest Videos

undefined

ಕಟ್ಟಿಗೆ ತರಲೆಂದು ಕರೆದುಕೊಂಡು ಹೋಗಿದ್ದ ನಿಂಗಣ್ಣ ಪತ್ನಿ ದೇವೀರಮ್ಮ ಕಟ್ಟಿಗೆ ಕಡಿಯುತ್ತಿದ್ದ ವೇಳೆ ಮಚ್ಚಿನಿಂದ ಆಕೆಯ ಕುತ್ತಿಗೆ ಕತ್ತರಿಸಿದ್ದಾನೆ. ಪತ್ನಿಯನ್ನು ಹತ್ಯೆ ಮಾಡಿದ ನಂತರ ಅದೇ ಜಾಗದಲ್ಲಿಯೇ ಸಂಜೆಯವರೆಗೆ ಕುಳಿತಿದ್ದ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳಲು ಕ್ರಿಮಿನಾಶಕ ಕುಡಿದಿದ್ದಾನೆ. ಕ್ರಿಮಿನಾಶಕ ಕುಡಿದು ಬಳಲಿದ್ದ ಆರೋಪಿಯನ್ನು ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಮೃತ ದೇವೀರಮ್ಮಳಿಗೆ ನಾಲ್ವರು ಮಕ್ಕಳಿದ್ದಾರೆ.

ಬೆಂಗ್ಳೂರಲ್ಲಿ ಐಫೋನ್ ಕದೀತಿದ್ದ ಹೈಕ್ಲಾಸ್ ಕಳ್ಳರು; ಎಲ್ಲರೂ ಗೋರಿಪಾಳ್ಯದವ್ರು!

ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಲ್‌ ಇನ್ಸಪೆಕ್ಟರ್‌ ರವಿಕುಮಾರ್‌ ಕಪ್ಪತ್‌ನವರ್‌ ತನಿಖೆ ಕೈಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತಳ ತಂದೆ ನೀಡಿದ ದೂರಿನ ಮೇರೆಗೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್‌ಪಿ ವೆಂಕಟಪ್ಪ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆಟೋದಲ್ಲಿ ಪ್ರೇಮಿಗಳ ಅಸಭ್ಯ ವರ್ತನೆ: ಆಕ್ಷೇಪಿಸಿದ ಆಟೋ ಚಾಲಕನ ಹತ್ಯೆ

ವರದಕ್ಷಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ
ವಿಜಯಪುರ: ಗಂಡ, ಅತ್ತೆ, ಮಾವನ ವರದಕ್ಷಣೆ ಕಿರುಕುಳಕ್ಕೆ ನೊಂದು ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರು ದಾಖಲಾಗಿದೆ. ಪಟ್ಟಣದ ಪ್ರಭುನಗರದಲ್ಲಿ ತನ್ನ ತಾಯಿಯ ಜೊತೆ ವಾಸವಾಗಿದ್ದ ವಿಜಯಪುರ ನಗರದ ಪವಿತ್ರಾ ಶಿವಕುಮಾರ ಹಿರೇಮಠ (26) ಮನೆಯಲ್ಲಿ ಭಾನುವಾರ ಸಂಜೆ ನೇಣಿಗೆ ಶರಣಾಗಿದ್ದಾರೆ. ಗಂಡ ಶಿವಕುಮಾರ ಹಿರೇಮಠ, ಅತ್ತೆ ಕಸ್ತೂರಿ ಹಿರೇಮಠ, ಮಾವ ಸಂಗಯ್ಯ ಹಿರೇಮಠ (ಎಲ್ಲರೂ ವಿಜಯಪುರ) ಮದುವೆಯ ನಂತರ 2 ವರ್ಷ ಸರಿಯಾಗಿ ನೊಡಿಕೊಂಡು ನಂತರ ತವರು ಮನೆಯಿಂದ ಸಾಮಗ್ರಿ, ಬಂಗಾರ ತರಲು ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು. ಗಂಡನ ಮನೆಗೆ ಕಳಿಸಲು ಹೋದರೆ ಕರೆದುಕೊಳ್ಳಲಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರಿನಲ್ಲಿ ದಾಖಲಿಸಲಾಗಿದೆ. ಪವಿತ್ರಾ ಪಟ್ಟಣದಲ್ಲಿ ಸರ್ಕಾರಿ ಸೇವೆಯಲ್ಲಿರುವ ತನ್ನ ತಾಯಿ ಬಳಿ ವಾಸವಾಗಿದ್ದಳು. ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!