ಹಾವೇರಿ ರೈತನ ಹೆಸರಲ್ಲಿ ಪುಣೆಯಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಯಿಂದ ಸಾಲ..!

By Kannadaprabha NewsFirst Published Jun 4, 2023, 5:56 AM IST
Highlights

ಬೆಳೆ ಸಾಲ ಪಡೆಯಲೆಂದು ಇತ್ತೀಚೆಗೆ ರೈತ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸ್ಥಳೀಯ ಶಾಖೆಗೆ ಹೋದಾಗ ಸಿಬಿಲ್‌ ಸ್ಕೋರ್‌ ಪರಿಶೀಲನೆ ವೇಳೆ ಪುಣೆಯ ಶಾಖೆಯೊಂದರಲ್ಲಿ ತಮ್ಮ ಹೆಸರಿನಲ್ಲಿ ಸಾಲ ಇರುವುದು ಅವರಿಗೆ ಗೊತ್ತಾಯಿತು. ಪುಣೆಯನ್ನೇ ನೋಡದ ತಮ್ಮ ಹೆಸರಲ್ಲಿ ಅಲ್ಲಿಯ ಬ್ಯಾಂಕ್‌ನಲ್ಲಿ ಸಾಲ ಇದೆ ಎಂಬ ವಿಷಯ ಕೇಳಿ ಅವರು ಕಂಗಾಲಾದ ರೈತ. 

ಹಾವೇರಿ(ಜೂ.04):  ಹೆಚ್ಚಿನ ಬಡ್ಡಿ ದರದಲ್ಲಿ ರೈತರೊಬ್ಬರಿಗೆ ಟ್ರ್ಯಾಕ್ಟರ್‌ ಸಾಲ ನೀಡಿದ್ದ ಖಾಸಗಿ ಫೈನಾನ್ಸ್‌ ಸಂಸ್ಥೆಯೊಂದು ಆ ರೈತನ ಅರಿವಿಗೆ ಬಾರದ ರೀತಿಯಲ್ಲಿ ಆತನ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನ ಪುಣೆ ಶಾಖೆಯಲ್ಲಿ ಕಡಿಮೆ ಬಡ್ಡಿ ದರಕ್ಕೆ ಸಾಲ ಎತ್ತಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಗುಂಡೇನಹಳ್ಳಿ ಗ್ರಾಮದ ಹನುಮಂತಪ್ಪ ಲಮಾಣಿ ಎಂಬುವರೇ ಈ ವಂಚನೆಗೆ ಒಳಗಾದವರು.

ಬೆಳೆ ಸಾಲ ಪಡೆಯಲೆಂದು ಇತ್ತೀಚೆಗೆ ಅವರು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸ್ಥಳೀಯ ಶಾಖೆಗೆ ಹೋದಾಗ ಸಿಬಿಲ್‌ ಸ್ಕೋರ್‌ ಪರಿಶೀಲನೆ ವೇಳೆ ಪುಣೆಯ ಶಾಖೆಯೊಂದರಲ್ಲಿ ತಮ್ಮ ಹೆಸರಿನಲ್ಲಿ ಸಾಲ ಇರುವುದು ಅವರಿಗೆ ಗೊತ್ತಾಯಿತು. ಪುಣೆಯನ್ನೇ ನೋಡದ ತಮ್ಮ ಹೆಸರಲ್ಲಿ ಅಲ್ಲಿಯ ಬ್ಯಾಂಕ್‌ನಲ್ಲಿ ಸಾಲ ಇದೆ ಎಂಬ ವಿಷಯ ಕೇಳಿ ಅವರು ಕಂಗಾಲಾದರು. ಆಗ ವಿಚಾರಿಸಿದಾಗ ಇದು ತಮಗೆ ಹೆಚ್ಚಿನ ಬಡ್ಡಿ ದರಕ್ಕೆ ಟ್ರ್ಯಾಕ್ಟರ್‌ ಸಾಲ ನೀಡಿದ್ದ ಹಣಕಾಸು ಸಂಸ್ಥೆಯದೇ ಕರಾಮತ್ತು ಎಂಬುದು ಅರಿವಾಗಿ, ದಿಕ್ಕು ತೋಚದೆ ಕುಳಿತಿದ್ದಾರೆ.

Bengaluru- ಬಿಬಿಎಂಪಿ ರಾಜಕಾಲುವೆಗೆ ಬಿದ್ದ ಪೌರಕಾರ್ಮಿಕ ಮಹಿಳೆ: ಬೆನ್ನು ಮೂಳೆ ಪುಡಿ, ಪುಡಿ

ಟ್ರ್ಯಾಕ್ಟರ್‌ಗೆ ಸಾಲ ನೀಡಿದ್ದ ಫೈನಾನ್ಸ್‌:

ಹುನುಮಂತಪ್ಪ ಅವರು ಒಂದು ವರ್ಷದ ಹಿಂದೆ ಟ್ರ್ಯಾಕ್ಟರ್‌ ಖರೀದಿಸಲೆಂದು ಹಣಕಾಸು ಸಂಸ್ಥೆಯೊಂದರಲ್ಲಿ .3 ಲಕ್ಷ ಸಾಲ ಮಾಡಿದ್ದರು. ಆ ವೇಳೆ ತಮ್ಮ ಆಧಾರ್‌ ಕಾರ್ಡ್‌, ಜಮೀನಿನ ಉತಾರ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿದ್ದರು. ಅವರು ಹೇಳಿದ ಕಡೆ ಸಹಿ ಮಾಡಿ ಶೇ.17ರ ಬಡ್ಡಿ ದರದಲ್ಲಿ ಸಾಲ ಪಡೆದಿದ್ದರು. ಬಳಿಕ, ತಲಾ . 75 ಸಾವಿರದಂತೆ ಎರಡು ಸಲ ಸಾಲದ ಕಂತನ್ನು ತುಂಬಿದ್ದಾರೆ.

ಈ ಮಧ್ಯೆ, ತಂದೆಗೆ ವಯಸ್ಸಾದ ಕಾರಣ ಅವರ ಹೆಸರಿನಲ್ಲಿದ್ದ ಬೆಳೆ ಸಾಲ ತುಂಬಿ ಜಮೀನನ್ನು ಹನುಮಂತಪ್ಪ ಅವರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಈಗ ಹೊಸದಾಗಿ ತಮ್ಮ ಹೆಸರಿನಲ್ಲಿ ಬೆಳೆ ಸಾಲ ತೆಗೆಯಲೆಂದು ಸ್ಥಳೀಯ ಎಸ್‌ಬಿಐ ಶಾಖೆಗೆ ಹೋಗಿ ವಿಚಾರಿಸಿದ್ದಾರೆ. ಆಗ ಸಿಬಿಲ್‌ ಸ್ಕೋರ್‌ ಚೆಕ್‌ ಮಾಡುವುದಾಗಿ ಹೇಳಿದ ಸಿಬ್ಬಂದಿ, ನಿಮ್ಮ ಹೆಸರಿನಲ್ಲಿ ಪುಣೆಯ ಶಾಖೆಯಲ್ಲಿ . 2.64 ಲಕ್ಷ ಸಾಲವಿದೆ ಎಂಬ ಮಾಹಿತಿ ತಿಳಿಸಿ, ಮತ್ತೆ ಸಾಲ ನೀಡಲು ಸಾಧ್ಯವಿಲ್ಲ ಎಂದರು. ಇದನ್ನು ಕೇಳಿ ಹನುಮಂತಪ್ಪ ಕಂಗಾಲಾಗಿದ್ದಾರೆ. ತಮ್ಮ ಹೆಸರಿನಲ್ಲಿರುವ ಸಾಲದ ಸ್ಟೇಟ್‌ಮೆಂಟ್‌ ಪಡೆದು ದಿಕ್ಕು ತೋಚದೇ ಹಿಂದಿರುಗಿದ್ದಾರೆ.

ಬಹುಶಃ ತಮ್ಮ ದಾಖಲೆಗಳನ್ನು ಬಳಸಿಕೊಂಡು, ತಮ್ಮ ಹೆಸರಿನಲ್ಲಿ ಶೇ.4ರ ಬಡ್ಡಿ ದರದಲ್ಲಿ ಎಸ್‌ಬಿಐನಿಂದ ಸಾಲ ಪಡೆದ ಫೈನಾನ್ಸ್‌, ತಮಗೆ ಶೇ.17ರ ಬಡ್ಡಿ ದರದಲ್ಲಿ ಟ್ರ್ಯಾಕ್ಟರ್‌ ಸಾಲ ನೀಡಿರುವ ಸಾಧ್ಯತೆಯಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ನಾನು ಪುಣೆಯನ್ನೇ ನೋಡಿಲ್ಲ

ಪುಣೆಯನ್ನೇ ನೋಡದ ನನ್ನ ಹೆಸರಲ್ಲಿ ಸಾಲ ತೆಗೆಯಲಾಗಿದೆ. ಎರಡು ದಿನಗಳ ಹಿಂದಷ್ಟೇ ಇದು ಗೊತ್ತಾಗಿದೆ. ರೈತ ಮುಖಂಡರೊಂದಿಗೆ ಚರ್ಚಿಸಿ ಫೈನಾನ್ಸ್‌ ಕಂಪನಿ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ. ಕಂಪನಿಯವರು ಟ್ರ್ಯಾಕ್ಟರ್‌ ಸಾಲ ನೀಡುವಾಗ ಏನೇನೋ ದಾಖಲೆ, ಎಲ್ಲೆಲ್ಲೋ ಸಹಿ ಪಡೆದು ಈ ರೀತಿ ದುರ್ಬಳಕೆ ಮಾಡುತ್ತಿರುವುದು ಸರಿಯಲ್ಲ ಅಂತ ರೈತ ಹನುಮಂತಪ್ಪ ಲಮಾಣಿ ತಿಳಿಸಿದ್ದಾರೆ. 

Bengaluru Crime: ಪತ್ನಿಗೆ ಎಸ್‌ಐನಿಂದ ಜಾತಿ ನಿಂದನೆ, ಕಿರುಕುಳ ಆರೋಪ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಸಾಲದ ಸ್ಟೇಟ್‌ಮೆಂಟ್‌:

ಹನುಮಂತಪ್ಪನವರ ಹೆಸರಿನಲ್ಲಿ ಪುಣೆ ಶಾಖೆಯಲ್ಲಿ ಮಾಡಿದ ಸಾಲದ ಸ್ಟೇಟ್‌ಮೆಂಟ್‌ ಪ್ರಕಾರ 31-03-2022ರಂದು . 2.64 ಲಕ್ಷ ಸಾಲದ ಹಣ ಬಿಡುಗಡೆಯಾಗಿದೆ. ಅಷ್ಟೂಹಣವನ್ನು ತೆಗೆಯಲಾಗಿದೆ. ಬಳಿಕ ಕಳೆದ ಅಕ್ಟೋಬರ್‌ 15ರಂದು 50,231 ಹಾಗೂ ಕಳೆದ ಏಪ್ರಿಲ್‌ 15ರಂದು . 51,873 ಹೀಗೆ ಎರಡು ಸಲ ಸಾಲದ ಖಾತೆಗೆ ಮರುಪಾವತಿ ಮಾಡಲಾಗಿದೆ. ಇನ್ನು . 1.76 ಲಕ್ಷ ಸಾಲದ ಮೊತ್ತ ಮರುಪಾವತಿಸುವುದು ಬಾಕಿಯಿದೆ. ಕೃಷಿ ಯಂತ್ರೋಪಕರಣಕ್ಕಾಗಿ ಈ ಸಾಲ ನೀಡಲಾಗಿದೆ ಎಂದು ಬ್ಯಾಂಕ್‌ ಸ್ಟೇಟ್‌ಮೆಂಟ್‌ನಲ್ಲಿ ನಮೂದಿಸಲಾಗಿದೆ.

ಖಾಸಗಿ ಫೈನಾನ್ಸ್‌ಗಳು ಮುಗ್ಧ ರೈತರನ್ನು ಯಾಮಾರಿಸುತ್ತಿವೆ. ಇದರಲ್ಲಿ ಫೈನಾನ್ಸ್‌ ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳೂ ಶಾಮೀಲಾಗಿರುವುದು ನಿಶ್ಚಿತ. ಇಂಥ ಅಕ್ರಮಗಳಿಗೆ ಕಡಿವಾಣ ಹಾಕುವ ಬಗ್ಗೆ ಮತ್ತು ಖಾಸಗಿ ಫೈನಾನ್ಸ್‌ಗಳಿಗೆ ಸರ್ಕಾರ ಮೂಗುದಾರ ಹಾಕಲು ಕಠಿಣ ಕಾನೂನು ಜಾರಿಗೆ ತರಬೇಕು ಅಂತ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದ್ದಾರೆ.  

click me!