ಭಾಗ್ಯವಂತಿ ದೇವಸ್ಥಾನ ಕಳ್ಳತನ; ಇಬ್ಬರು ಖದೀಮರು ಅರೆಸ್ಟ್

By Kannadaprabha NewsFirst Published Jun 4, 2023, 5:35 AM IST
Highlights

ರಾಜ್ಯದ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಒಂದಾಗಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಘತ್ತರಗಿಯ ಭಾಗ್ಯವಂತಿ ದೇವಸ್ಥಾನದಲ್ಲಿ ಕಳೆದ ಮೇ 29ರಂದು ಮೂರು ಜನ ಮುಸುಕುಧಾರಿ ಕಳ್ಳರು ದೇವಸ್ಥಾನದ ಒಳ ಹೊಕ್ಕು ದೇವಿಯ ಮೈಮೇಲಿನ ಬಂಗಾರದ ಒಡವೆ, ಕಾಣಿಕೆ ಹುಂಡಿಯಲ್ಲಿನ ಹಣ ದೋಚಿ ಪರಾರಿಯಾಗಿದ್ದರು. ನಾಲ್ಕು ದಿನದ ನಂತರ ಸೂಕ್ತ ಮಾಹಿತಿ ಮೇರೆಗೆ ಕಳ್ಳರನ್ನು ಬಂಧಿಸುವಲ್ಲಿ ಅಫಜಲ್ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಚವಡಾಪುರ (ಜೂ.4) : ರಾಜ್ಯದ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಒಂದಾಗಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಘತ್ತರಗಿಯ ಭಾಗ್ಯವಂತಿ ದೇವಸ್ಥಾನದಲ್ಲಿ ಕಳೆದ ಮೇ 29ರಂದು ಮೂರು ಜನ ಮುಸುಕುಧಾರಿ ಕಳ್ಳರು ದೇವಸ್ಥಾನದ ಒಳ ಹೊಕ್ಕು ದೇವಿಯ ಮೈಮೇಲಿನ ಬಂಗಾರದ ಒಡವೆ, ಕಾಣಿಕೆ ಹುಂಡಿಯಲ್ಲಿನ ಹಣ ದೋಚಿ ಪರಾರಿಯಾಗಿದ್ದರು. ನಾಲ್ಕು ದಿನದ ನಂತರ ಸೂಕ್ತ ಮಾಹಿತಿ ಮೇರೆಗೆ ಕಳ್ಳರನ್ನು ಬಂಧಿಸುವಲ್ಲಿ ಅಫಜಲ್ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೇ 19ರಂದು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಿಯ ಮೈಮೇಲಿನ 6 ಲಕ್ಷ 40 ಸಾವಿರ ಮೌಲ್ಯದ ಒಡವೆಗಳು, ಹುಂಡಿಯಲ್ಲಿನ ಸುಮಾರು 1.5 ಲಕ್ಷ ನಗದು ದೋಚಲಾಗಿತ್ತು. ಇದು ದೇವಸ್ಥಾನದ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ವಿಷಯ ಮಿಂಚಿನಂತೆ ಎಲ್ಲೆಡೆ ಸಂಚರಿಸಿ ಪೊಲೀಸ್‌ ಇಲಾಖೆಗೆ ತಲೆಬಿಸಿಯಾಗುವಂತಾಗಿತ್ತು.

ದಾವಣಗೆರೆ: ಘನತ್ಯಾಜ್ಯ ವಿಲೇವಾರಿ ಘಟಕದ ಶೀಟು ಕಳವು, ಕುಣಿಗಲ್‌ನಲ್ಲಿ ಕೊಳವೆ ಬಾವಿ ಕೇಬಲ್ ಕಳವು

ಈ ಕುರಿತು ಅಫಜಲ್ಪುರ ಸಿಪಿಐ ರಾಜಶೇಖರ ಬಡದೇಸಾರ್‌ ಮಾಹಿತಿ ನೀಡಿದ್ದು ಕಳ್ಳತನವಾದಾಗಿನಿಂದ ನಮಗೆಲ್ಲ ಈ ಕೇಸು ಪ್ರತಿಷ್ಠೆಯಾಗಿತ್ತು. ಶಕ್ತಿ ದೇವತೆಯ ಒಡವೆ, ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿದವರ ಹೆಡೆಮುರಿ ಕಟ್ಟಬೇಕೆಂದು ನಿರ್ಧರಿಸಿ ಆಳಂದ ಡಿವೈಎಸ್‌ಪಿ ಗೋಪಿ.ಆರ್‌ ನೇತೃತ್ವದಲ್ಲಿ ಅಫಜಲ್ಪುರ ಸಿಪಿಐ ರಾಜಶೇಖರ ಬಡದೇಸಾರ್‌, ಅಫಜಲ್ಪುರ ಪಿಎಸ್‌ಐ ಭೀಮರಾಯ ಬಂಕ್ಲಿ, ಸಿಬ್ಬಂದಿಯರಾದ ಸಂತೋಷ.ಎಚ್‌, ಶಿವಲಿಂಗ, ರೇವಣಸಿದ್ದ, ಆನಂದ, ರೇವೂರ(ಬಿ) ಠಾಣೆಯ ಯಲ್ಲಾಲಿಂಗ, ದೇವಲ ಗಾಣಗಾಪೂರ ಠಾಣೆಯ ಮಲ್ಲಿಕಾರ್ಜುನ ಇವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಪತ್ತೆ ಕಾರ್ಯ ನಡೆಸಿದ್ದೆವು.

ಕಳ್ಳತನವಾಗಿದ್ದ ಆಭರಣಗಳನ್ನು ಇಟ್ಟುಕೊಂಡಿದ್ದ ಬಿದರ ಜಿಲ್ಲೆಯ ಅವರಾದ ತಾಲೂಕಿನ ಹುಲಿಯಾಳ ತಾಂಡಾದ ನಿವಾಸಿಗಳಾದ ಆರೋಪಿ ತಾನಾಜಿ ಹಾಗೂ ಕವಿತಾ ರಾಠೋಡ ಇವರನ್ನು ಶನಿವಾರ ಸೂಕ್ತ ಮಾಹಿತಿಯ ಮೇರೆಗೆ ದಸ್ತಗಿರಿ ಮಾಡಲಾಗಿದ್ದು ಬಂಧಿತರ ಬಳಿಯಿಂದ 65 ಗ್ರಾಂ ಬಂಗಾರದ ಒಡವೆಗಳು ಹಾಗೂ 80 ಸಾವಿರ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅಂಗಡಿ ಮೇಲ್ಚಾವಣಿ ಕೊರೆದು ಲಕ್ಷಾಂತರ ರೂ. ಮೊಬೈಲ್ ಕದ್ದೊಯ್ದ ಖದೀಮರು!

click me!