ಗುಲ್ಬರ್ಗ ವಿವಿ​: ವಿದ್ಯಾ​ರ್ಥಿ​ನಿಗೆ ಉಪ​ನ್ಯಾ​ಸಕ ಲೈಂಗಿಕ ಕಿರು​ಕು​ಳ

By Kannadaprabha News  |  First Published Jun 11, 2023, 10:30 PM IST

ಜ್ಞಾನ ಗಂಗೆಯಲ್ಲಿರುವ ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕ ವಿದ್ಯಾರ್ಥಿನಿಗೆ ಮೊಬೈಲ್‌ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಆಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ಉಗ್ರವಾಗಿ ಖಂಡಿಸಿರಿವ ವಿದ್ಯಾರ್ಥಿ ಸಂಘಟನೆಗಳು ತಕ್ಷಣ ತನಿಖೆ ಮಾಡಿ ಕಿರುಕುಳ ನೀಡಿರುವ ಉಪನ್ಯಾಸಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ.


ಕಲ​ಬು​ರ​ಗಿ(ಜೂ.11):  ಅನೇಕ ಕಾರಣಗಳಿಂದಗಿ ಸದಾ ಸುದ್ದಿಯಲ್ಲಿರುವ ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯ ಇದೀಗ ಅಲ್ಲಿನ ಎಂಬಿಎ ವಿಭಾಗದಲ್ಲಿನ ಅತಿಥಿ ಉಪನ್ಯಾಸಕ ವಿದ್ಯಾರ್ಥಿನಿಗೆ ನೀಡಿರುವ ಲೈಂಗಿಕ ಕಿರುಕುಳದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದೆ.

ಜ್ಞಾನ ಗಂಗೆಯಲ್ಲಿರುವ ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕ ವಿದ್ಯಾರ್ಥಿನಿಗೆ ಮೊಬೈಲ್‌ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಆಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ಉಗ್ರವಾಗಿ ಖಂಡಿಸಿರಿವ ವಿದ್ಯಾರ್ಥಿ ಸಂಘಟನೆಗಳು ತಕ್ಷಣ ತನಿಖೆ ಮಾಡಿ ಕಿರುಕುಳ ನೀಡಿರುವ ಉಪನ್ಯಾಸಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ.

Latest Videos

undefined

Crime News: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಬಂಧನ

23 ನಿಮಿಷ 49 ಸೆಕೆಂಡ್‌ ಸಂಭಾಷಣೆ ನಡೆಯುವ ಆಡಿಯೊದಲ್ಲಿ ಉಪನ್ಯಾಸಕನ ಅಶ್ಲೀಲ ಸಂಭಾಷಣೆಗಳು ಪುಂಖಾನುಪುಂಖವಾಗಿ ಕೇಳಿಬಂದಿವೆ. ಆಡಿಯೊದಲ್ಲಿ ವಿದ್ಯಾರ್ಥಿನಿ ಎಷ್ಟೇ ಬಾರಿ ‘ನೋ ಸರ್‌’ ಎಂದು ಹೇಳಿದರೂ ಉಪನ್ಯಾಸಕ ಅಶ್ಲೀಲ ಪದಗಳನ್ನು ಬಳಸಿ ಪೀಡಿಸಿದ್ದಾನೆ. ಪತಿ-ಪತ್ನಿಯರ ಉದಾಹರಣೆ ನೀಡುತ್ತಾ ತಾನು ಮಾಡಿರುವ ಮನವಿ ಒಪ್ಪಿಕೊಳ್ಳುವಂತೆ ಒಂದೇ ಸವನೆ ವಿದ್ಯಾರ್ಥಿನಿಗೆ ಗಂಟು ಬಿದ್ದಿದ್ದಾನೆ.

ಮನ​ವಿ ನಯವಾಗಿ ತಿರಸ್ಕರಿಸಿದ ವಿದ್ಯಾ​ರ್ಥಿ​ನಿ ‘ನೀವು ನಮಗೆ ಸರಿಯಾಗಿ ಗೈಡ್‌ ಮಾಡಬೇಕು. ಒಳ್ಳೆಯ ಮಾರ್ಗದರ್ಶನ ನೀಡಬೇಕು. ನೀವು ಏನಾದರೂ ಮಾಡಿದರೆ ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಳ್ಳುತ್ತೀರಿ’ ಎಂದು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಮನವರಿಕೆ ಮಾಡಲು ಪ್ರಯತ್ನಿಸಿದ್ದಾಳೆ.

ಕಲಬುರಗಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಿನ್ಸಿಪಾಲ್‌..?

ಆಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಗುಲಬರ್ಗಾ ವಿವಿ ಹಂಗಾಮಿ ಕುಲಪತಿ ಪ್ರೊ. ವಿ.ಟಿ. ಕಾಂಬಳೆ, ‘ಆಡಿಯೊ ಕುರಿತು ತಮ್ಮ ಗಮನಕ್ಕೆ ಬರುತ್ತಿದ್ದಂತೆ ಎಂಬಿಎ ವಿಭಾಗದ ಮುಖ್ಯಸ್ಥರಿಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವಿಭಾಗದ ಮುಖ್ಯಸ್ಥರು ಹೊಸದಾಗಿ ಬಂದಿದ್ದು, ಅವರಿಗೂ ಯಾವುದೇ ಮಾಹಿತಿ ಇಲ್ಲ. ಆಡಿಯೊ ಎಲ್ಲಿ, ಯಾವಾಗ ನಡೆದಿದೆ ಎಂಬ ಬಗ್ಗೆ ಪರಿಶೀಲಿಸಲು ತಿಳಿಸಲಾಗಿದೆ. ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಗುವಿವಿ ಕುಲಪತಿ ಡಾ. ದಯಾನಂದ ಅಗಸಗರ್‌ ಬ್ರಿಟನ್‌ ಪ್ರವಾಸದಲ್ಲಿದ್ದಾರೆ, ಅವರು ನಾಳೆ ಅಥವಾ ನಾಡಿದ್ದು ಕಲಬುರಗಿಗೆ ಮರಳಲಿದ್ದು, ಅವರು ಬಂದ ನಂತರವೇ ಪ್ರಕರಣದ ಬಗ್ಗೆ ವಿವಿ ಅಧಿಕೃತ ಹೇಳಿಕೆ ನೀಡುವ ನಿರೀಕ್ಷೆ ಹೊಂದಲಾಗಿದೆ.

click me!