ಕಲ​ಬು​ರ​ಗಿ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ

By Kannadaprabha News  |  First Published Jun 11, 2023, 10:00 PM IST

ಜೀವನದಲ್ಲಿ ಜಿಗುಪ್ಸೆಗೊಂಡು ಮಡೆಪ್ಪ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಬ್‌ ಅರ್ಬನ್‌ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ ಮೃತನ ಪತ್ನಿ ಚಂದ್ರಕಲಾ ಬಾಚಗುಂಡ 


ಕಲ​ಬು​ರ​ಗಿ(ಜೂ.11):  ಹುಮನಾಬಾದ ರಸ್ತೆಯ ಸ್ವಾಮಿ ಸಮರ್ಥ ಮಂದಿರದ ಕೆಳಗಿನ ಕೋಣೆಯಲ್ಲಿ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶಹಾಪುರಗಲ್ಲಿಯ ಮಡೆಪ್ಪ ಬಾಚಗುಂಡ ಆತ್ಮಹತ್ಯೆಗೆ ಶರಣಾದವರು. 

ಪುಣೆಯಲ್ಲಿ ಚಿಕ್ಕ ಖಾನಾವಳಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಮಡೆಪ್ಪ ಅವರು ಸ್ವಾಮಿ ಸಮರ್ಥ ದೇವಸ್ಥಾನದದ ಭಕ್ತರಾಗಿದ್ದರು. ವರ್ಷದಲ್ಲಿ ಎರಡು ಬಾರಿ ದೇವಸ್ಥಾನಕ್ಕೆ ಆಗಮಿಸಿ ಕೆಲಕಾಲ ಇರುತ್ತಿದ್ದರು. ಅದೇ ರೀತಿ ಹತ್ತು ದಿನಗಳ ಹಿಂದೆ ದೇವಸ್ಥಾನಕ್ಕೆ ಆಗಮಿಸಿ ಸೇವೆ ಸಲ್ಲಿಸಿದ್ದರು. 

Tap to resize

Latest Videos

undefined

ಕ್ಷುಲ್ಲಕ ಕಾರಣಕ್ಕೆ ತಾಯಿ ಸೀರೆಯಿಂದಲೇ ನೇಣು ಬಿಗಿದುಕೊಂಡ ಅಕ್ಕ- ತಂಗಿಯರು

ಆದರೆ ದೇವಸ್ಥಾನದ ಕೆಳಗಿನ ಕೋಣೆಯಲ್ಲಿನ ಛತ್ತಿಗೆ ಫ್ಯಾನ್‌ ಕೂಡಿಸುವ ಕೊಂಡಿಗೆ ಮಫ್ಲನಿರ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಮಡೆಪ್ಪ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತನ ಪತ್ನಿ ಚಂದ್ರಕಲಾ ಬಾಚಗುಂಡ ಅವರು ಸಬ್‌ ಅರ್ಬನ್‌ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

click me!