Chikkamagaluru; ಕಳೆದ 4 ವರ್ಷದಲ್ಲಿ ಅಪಘಾತದಲ್ಲಿ 672 ಮಂದಿ ಸಾವು!

By Suvarna News  |  First Published Jun 10, 2022, 6:11 PM IST
  • ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಅಪಘಾತದಲ್ಲಿ 672 ಮಂದಿ ಸಾವು 
  • ಅತೀಯಾದ ವೇಗ ,ಆಜಾಗರೂತೆಯೇ ಅಪಘಾತ ಕಾರಣ 
  • ಮಲೆನಾಡಿನಲ್ಲಿ ಮೋಡ ಮಂಜುಮುಸುಕಿದ ವಾತಾವರಣ
  • ಬಯಲು ಸೀಮೆಯಲ್ಲಿ ಅತೀಯಾದ ವೇಗ ಅಪಘಾತಕ್ಕೆ ಕಾರಣ 
     

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.10): ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಕ್ರಮಗಳನ್ನು ಕೈಗೊಂಡಿದೆ. ರಸ್ತೆ ಉದ್ದಕ್ಕೂ ಕೂಡ ಎಚ್ಚರಿಕೆಯ ನಾಮಫಲಕಗಳನ್ನು ಅಲ್ಲಲ್ಲಿ ಅಳವಡಿಸಿದೆ, ರಸ್ತೆ ಅಪಘಾತಗಳನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಚಿಕ್ಕಮಗಳೂರು ಜಿಲ್ಲೆ ಒಂದರಲ್ಲೆ ಕಳೆದ 4 ವರ್ಷಗಳಿಂದ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಒಟ್ಟು672 ಮಂದಿ ಮೃತಪಟ್ಟಿದ್ದು ಮಲೆನಾಡಿನಲ್ಲಿ ಮೋಡ ಮಂಜುಮುಸುಕಿದ ವಾತಾವರಣ, ಬಯಲು ಸೀಮೆಯಲ್ಲಿ ಅತೀಯಾದ ವೇಗ ಅಪಘಾತಕ್ಕೆ ಕಾರಣವಾಗಿದೆ

Latest Videos

undefined

ಜಿಲ್ಲೆಯ ಮಲೆನಾಡು ಮತ್ತು ಬಯಲು ಭಾಗದಲ್ಲಿ ವ್ಯಾಪಿಸಿದ್ದು ಮಲೆನಾಡು ಭಾಗಗಳಲ್ಲಿ ದುರ್ಗಮ ಮತ್ತು ಕಡಿದಾದ ರಸ್ತೆಗಳು, ಮಳೆಗಾಲದಲ್ಲಿ ಮಳೆಯ ಆವಾಂತರ ಮತ್ತು ಮೋಡ ಮುಸುಕಿದ ವಾತಾವರಣಗಳು ಅಪಘಾತಗಳಿಗೆ ಕಾರಣವಾಗುತ್ತಿದ್ದರೆ, ಬಯಲು ಪ್ರದೇಶಗಳಲ್ಲಿ ಆಜಾಗರೂತೆ, ಅತಿವೇಗದ ಚಾಲನೆ ಅಪಘಾತಗಳಿಗೆ ಕಾರಣ ಎನ್ನಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಪೋಲೀಸ್ ಇಲಾಖೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ವ್ಯಾಪಕ ಪ್ರಚಾರಕೈಗೊಂಡಿದ್ದರೂ ಚಾಲಕರು ಆಜಾಗರೂಕತೆಯ ಚಾಲನೆ, ನಿರ್ಲಕ್ಷ್ಯ ಮೊಬೈಲ್ ಬಳಕೆ, ಮದ್ಯಪಾನ ಚಾಲನೆಯಿಂದ ರಸ್ತೆ ಅಪಘಾತಗಳು ಹೆಚ್ಚಾಗಲೂ ಕಾರಣ ಎನ್ನಲಾಗುತ್ತಿದೆ. ಬಹುತೇಕ ರಸ್ತೆ ಅಪಘಾತಗಳು ತಡರಾತ್ರಿ ಸಂಭವಿಸುತ್ತವೆ.

UDUPI; ಮಹಿಳೆಯರನ್ನು ಬಳಸಿಕೊಂಡು ಗೋಮಾಂಸ ಸಾಗಾಟಕ್ಕೆ ಯತ್ನಿಸಿದ ನಾಲ್ವರು ವಶಕ್ಕೆ

ಇದಕ್ಕೆ ಮೂಲ ಕಾರಣ ಚಾಲಕನ ಮದ್ಯಸೇವನೆ ಮತ್ತು ಸರಿಯಾಗಿ ನಿದ್ದೆ ಮಾಡದಿರುವುದೇ ಕಾರಣವಾಗಿದೆ. 2019ರಿಂದ ಈವರೆಗೆ ಜಿಲ್ಲೆಯಲ್ಲಿ 3435 ಅಪಘಾತಗಳು ಸಂಭವಿಸಿವೆ. 2019ರಲ್ಲಿ 189 ಅಪಘಾತದಲ್ಲಿ 210 ಮಂದಿ, 2020ರಲ್ಲಿ ನಡೆದ 175 ಅಪಘಾತದಲ್ಲಿ 185 ಮಂದಿ, 2021ರಲ್ಲಿ ಜರುಗಿದ 181 ಅಪಘಾತ ಪ್ರಕರಣಗಳಲ್ಲಿ 189 ಮಂದಿ, 2022ನೇ ಸಾಲಿನ ಈವರೆಗೂ ನಡೆದ 88 ಅಪಘಾತಗಳಲ್ಲಿ 91ಮಂದಿ ಮೃತಪಟ್ಟಿದ್ದು ಕಳೆದ  4ವಷಗಳಿಂದ ರಸ್ತೆ ಅಪಘಾತದಲ್ಲಿ ಒಟ್ಟು672 ಮಂದಿ ಮೃತಪಟ್ಟಿದ್ದಾರೆ.ಕಳೆದ 2021 ನೇ ಸಾಲಿನಿಂದ ಈವರೆಗೂ ಒಟ್ಟು 2239 ಪ್ರಕರಣಗಳಲ್ಲಿ 2670 ಮಂದಿ ಗಾಯಾಳುಗಳಾಗಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಿಂದ ಕಣಕ್ಕೆ; BT Lalitha Naik

ಅಪಘಾತಗಳನ್ನು ತಡೆಗಟ್ಟಲು ಬ್ಲಾಕ್ ಸ್ಪಾಟ್ :  ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು, ಪೋಲೀಸ್ ವರಿಷ್ಠಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಹಿರಿಯ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನೊಳಗೊಂಡ ರಸ್ತೆ ಸುರಕ್ಷತಾ ಸಮಿತಿ ಒಟ್ಟು 49 ಬ್ಲಾಕ್ ಸ್ಪಾಟ್ಗಳನ್ನು ಗುರ್ತಿಸಲಾಗಿದ್ದು, ಆ ಸ್ಥಳಗಳಲ್ಲಿ ಅಪಘಾತಗಳನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳ್ಕರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ.

Koppalaದಲ್ಲಿ ಬಿಇಓ ವಿರುದ್ಧ ಶಿಕ್ಷಕನ ಮೌನ ಪ್ರತಿಭಟನೆ

ಈವರೆಗೂ ಸಂಭವಿಸಿರುವ ಅಪಘಾತಗಳಲ್ಲಿ ಶೇ.50 ರಷ್ಟು ಪ್ರಕರಣಗಳು ಚಾಲಕನ ಆಜಾಗರೂಕತೆಗೆ ಕಾರಣವಾಗಿದ್ದು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಪೋಲೀಸ್ ಇಲಾಖೆಯೂ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಂಚಾರಿ ಜಾಗೃತಿ ಸಪ್ತಾಹಗಳನ್ನು ಹಮ್ಮಿಕೊಂಡು ಚಾಲಕರುಗಳಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.

click me!