ಮೆಜೆಸ್ಟಿಕ್‌ನಲ್ಲಿ ಕಲಬುರಗಿಯ ಲ್ಯಾಪ್‌ಟಾಪ್‌ ಕಳ್ಳನ ಕರಾಮತ್ತು

By Kannadaprabha NewsFirst Published Oct 14, 2021, 7:54 AM IST
Highlights

*  ಮೆಜೆಸ್ಟಿಕ್‌ ಸುತ್ತ ಏಕಾಂಗಿ ಓಡಾಡುವ ಖಾಸಗಿ ಕಂಪನಿ ಉದ್ಯೋಗಿಗಳೇ ಟಾರ್ಗೆಟ್‌
*  ವೃತ್ತಿಪರ ಕಳ್ಳನಾದ ಬಂಧಿತ ಲಿಯಾಕಾತ್‌ 
*  ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿ ಪತ್ತೆ 
 

ಬೆಂಗಳೂರು(ಅ.14): ಮೆಜೆಸ್ಟಿಕ್‌ ಸಮೀಪ ಪ್ರಯಾಣಿಕರಿಗೆ ಬೆದರಿಸಿ ಲ್ಯಾಪ್‌ಟಾಪ್‌ಗಳನ್ನು(Laptop) ದೋಚಿದ್ದ ಕಿಡಿಗೇಡಿಯೊಬ್ಬ ಉಪ್ಪಾರಪೇಟೆ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾನೆ.

ಕಲಬುರಗಿ(Kalaburagi) ಜಿಲ್ಲೆ ಲಿಯಾಕಾತ್‌ ಬಂಧಿತನಾಗಿದ್ದು(Arrest), ಆರೋಪಿಯಿಂದ(Accused)8 ಲ್ಯಾಪ್‌ಟಾಪ್‌ಗಳು ಹಾಗೂ 1 ಟ್ಯಾಬ್‌(Tab) ಜಪ್ತಿಯಾಗಿದೆ. ಇತ್ತೀಚೆಗೆ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ(KSRTC) ಬಸ್‌ ನಿಲ್ದಾಣ ಸಮೀಪ ಪ್ರತ್ಯೇಕವಾಗಿ ಇಬ್ಬರು ಖಾಸಗಿ ಕಂಪನಿ ಉದ್ಯೋಗಿಗಳಿಗೆ ಚಾಕು ತೋರಿಸಿ ಬೆದರಿಸಿ ಆರೋಪಿ ಲ್ಯಾಪ್‌ಟಾಪ್‌ಗಳನ್ನು ದೋಚಿದ್ದ. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ಶಿವಸ್ವಾಮಿ ನೇತೃತ್ವದ ತಂಡವು, ಘಟನಾ ಸ್ಥಳ ವ್ಯಾಪ್ತಿಯ ಸಿಸಿಟಿವಿ(CCTV) ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Chikkaballapura : ಲಾರಿ ಅಪಹರಣ : ಮಾಲೀಕ, ಚಾಲಕನಿಂದಲೇ ಕೃತ್ಯ

ಲಿಯಾಕಾತ್‌ ವೃತ್ತಿಪರ ಕಳ್ಳನಾಗಿದ್ದು(Thief), ಆತನ ಮೇಲೆ ರಾಯಚೂರು(Raichur), ಕಲಬುರಗಿ ಹಾಗೂ ಬೆಂಗಳೂರು(Bengaluru) ಸೇರಿದಂತೆ ಇತರೆಡೆ ಪ್ರಕರಣಗಳು ದಾಖಲಾಗಿವೆ. ಕಲಬುರಗಿಯಿಂದ ಬಸ್ಸಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಆರೋಪಿ, ಮೆಜೆಸ್ಟಿಕ್‌ನಲ್ಲಿ ಸುಲಿಗೆ ಕೃತ್ಯ ಎಸಗಿ ರಾತ್ರಿಯೇ ಕಲಬುರಗಿಗೆ ಮರಳುತ್ತಿದ್ದ. ಆತ ಲ್ಯಾಪ್‌ಟಾಪ್‌ ಹೊರತುಪಡಿಸಿ ಬೇರೇನು ಕಳ್ಳತನ(Theft) ಮಾಡುತ್ತಿರಲಿಲ್ಲ. ಹೀಗೆ ದೋಚಿದ ಲ್ಯಾಪ್‌ಟಾಪ್‌ಗಳನ್ನು ಕಲಬುರಗಿ ಹಾಗೂ ಮುಂಬೈನಲ್ಲಿ(Mumbai) ಮಾರಾಟ ಮಾಡಿ ಹಣ ಪಡೆಯುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಹೇಗೆ ಕೃತ್ಯ?

ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ನಿಲ್ದಾಣ ಸುತ್ತಮುತ್ತ ಅಡ್ಡಾಡುತ್ತಿದ್ದ ಆರೋಪಿ, ಆ ವೇಳೆ ಏಕಾಂಗಿಯಾಗಿ ಸಂಚರಿಸುವ ಖಾಸಗಿ ಕಂಪನಿ ಉದ್ಯೋಗಿಗಳನ್ನು ಅಡ್ಡಗಟ್ಟಿ ಬೆದರಿಸಿ ಲ್ಯಾಪ್‌ಟಾಪ್‌ ದೋಚುತ್ತಿದ್ದ. ಈಗ ಆರೋಪಿ ಬಂಧನದಿಂದ 10 ಪ್ರಕರಣಗಳು ಪತ್ತೆಯಾಗಿವೆ. ಲ್ಯಾಪ್‌ಟಾಪ್‌ಗಳನ್ನು ದೋಚಿದರೆ ಪೊಲೀಸರಿಗೆ ಸಿಗುವುದಿಲ್ಲ ಎಂದು ಭಾವಿಸಿ ಆತ ಕೃತ್ಯ ಎಸಗುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!