ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಕಡಿದ ಆರೋಪಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ (ಮೇ.25) : ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಕಡಿದ ಆರೋಪಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ನಡೆದಿದೆ.
ಮೇ.23 ರಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಸಾಗುವಾನಿ ಮರಗಳನ್ನು ಕಡಿದ ಆರೋಪಕ್ಕೆ ಸಂಬಂಧಿಸಿದಂತೆ ನೆಡದಿರುವ ಜಗಳ. ಪರಸ್ಪರ ಬಡಿಗೆಗಳಿಂದ ಹೊಡೆದಾಡಿಕೊಂಡಿರುವ ಎರಡು ಕುಟುಂಬಸ್ಥರು. ಹೊಡೆದಾಡಿರುವ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.
Viral video: ಮನೆಯೆದುರು ಬೈಕ್ ನಿಲ್ಲಿಸಬೇಡ ಎಂದಿದ್ದಕ್ಕೆ ಮಚ್ಚಿನಿಂದ ಕುತ್ತಿಗೆಗೆ ಬೀಸಿದ ಆಸಾಮಿ!
ಮಹಾರುದ್ರಪ್ಪ ಕುಂಬಾರ, ಶಂಕರಪ್ಪ ಕುಂಬಾರ ಕುಟುಂಬಗಳ ಮಧ್ಯೆ ನಡೆದಿರುವ ಜಗಳ. ಎರಡು ಕುಟುಂಬಗಳ ಮಧ್ಯೆ ಜಮೀನು ವಿವಾದವಿತ್ತು. ಕೋರ್ಟ್ ಮೆಟ್ಟಿಲೇರಿದ್ದ ಆರೋಪಿ ಶಂಕರಪ್ಪ ಕುಂಬಾರ(Shankarppa kumbar). ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಕಡಿದಿದ್ದ ಆರೋಪ. ಕಡಿದ ಸಾಗುವಾನಿ ಮರಗಳನ್ನು ಒಯ್ಯಲು ಬಂದಾಗ ಗಲಾಟೆ. ಎರಡು ಕುಟುಂಬಗಳ ಮಧ್ಯೆ ತೀವ್ರ ವಾಗ್ವಾದ ವಿಕೋಪಕ್ಕೆ ತಿರುಗಿ ಪರಸ್ಪರ ಬಡಿಗೆಗಳಿಂದ ಹೊಡೆದಾಡಿಕೊಂಡಿರುವ ಕುಟುಂಬಗಳು.
ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಘಟನೆ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾ.ಹೆ.ಯಲ್ಲಿ ಕಾರ್ ರೇಸ್: ನಾಲ್ವರು ಯುವಕರ ಮೇಲೆ ಕೇಸ್
ಕಾಪು: ಇಲ್ಲಿನ ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯವಾಗುವಂತೆ ಕಾರ್ ರೇಸ್ ಮಾಡುತ್ತಿದ್ದ ನಾಲ್ವರು ಯವಕರ ಮೇಲೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೋಟೋ ತೆಗೆಯುವ ವಿಚಾರಕ್ಕೆ ಮಹಾಕಾಳಗ: ಮದ್ವೆ ಮನೆ ಆಯ್ತು ರಣಾಂಗಣ: ವಿಡಿಯೋ ವೈರಲ್
ಆರೋಪಿಗಳು ಉಡುಪಿಯ ಶಾನೂನ್ ಡಿಸೋಜ (25), ಕೊಡಂಕೂರಿನ ವಿವೇಕ್ (23), ಉದ್ಯಾವರ ಗುಡ್ಡೆಅಂಗಡಿಯ ಅಯಾನ್ ( 24) ಹಾಗೂ ಕುಂಜಿಬೆಟ್ಟುವಿನ ಮಿಶಾಲುದ್ದೀನ್ (23) ಎಂದು ಗುರುತಿಸಲಾಗಿದೆ. ಅವರ ರೇಸ್‌ಗೆ ಬಳಸಿದ್ದ ಮಹೀಂದ್ರಾ ಜೀಪು, ಕ್ರೆಟಾ ಕಾರು, ಫಾರ್ಚುನರ್ ಕಾರು, ಸ್ವಿ¶್ಟ… ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ನಾಲ್ವರು ಮೋಜಿಗಾಗಿ ತೀವ್ರ ಜನವಾಹನ ಸಂಚಾರವಿರುವ ರಾಹೆ 66ರಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ, ಡಿವೈಡರ್ ಮೇಲೆ ಜೀಪು ಹತ್ತಿಸಿ, ಪರಸ್ಪರ ಓವರ್ ಟೇಕ್ ಮಾಡುತ್ತಾ ಇತರ ವಾಹನ ಸವಾರರಿಗೆ ತೊಂದರೆ ಕೊಟ್ಟಿದ್ದರು. ಮಾತ್ರವಲ್ಲ ಇದನ್ನು ವಿಡಿಯೋ ರೆಕಾರ್ಡ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ, ಆಕ್ಷೇಪಗಳೂ ವ್ಯಕ್ತವಾಗಿತ್ತು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು. ಇದನ್ನು ಗಮನಿಸಿದ ಕಾಪು ಠಾಣಾಧಿಕಾರಿ ಸುಮಾ ಅವರು, ನಾಲ್ವರು ಚಾಲಕರ ಸಹಿತ ನಾಲ್ಕು ವಾಹನಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ