Fraud: ಹಣ ಡಬ್ಲಿಂಗ್‌ ಕಂಪನಿಗೆ ಲಕ್ಷಾಂತರ ಹೂಡಿಕೆ: ಮೋಸಕ್ಕೊಳಗಾದ ಶಿಕ್ಷಕ ಆತ್ಮಹತ್ಯೆ

By Sathish Kumar KHFirst Published Jun 23, 2023, 5:37 PM IST
Highlights

ಕೊಪ್ಪಳದಲ್ಲಿ ಹಣ ಡಬಲ್‌ ಮಾಡುವುದಾಗಿ ಪರಿಚಿತವಾಗಿ ಫ್ರಾಡ್‌ ಕಂಪನಿಗೆ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಖಾಸಗಿ ಶಾಲೆಯ ಶಿಕ್ಷಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೊಪ್ಪಳ (ಜೂ.23): ರಾಜ್ಯದಲ್ಲಿ ಹಲವು ಖಾಸಗಿ ಕಂಪನಿಗಳು ಹಣ ಡಬಲ್‌ ಮಾಡುವುದಾಗಿ ಹೇಳಿಕೊಂಡು ವಂಚನೆ ಮಾಡುತ್ತಿರುವ ಪ್ರಕರಣ ಬಯಲಾಗುತ್ತಲೇ ಇವೆ. ಆದರೂ, ಕೊಪ್ಪಳದಲ್ಲಿ ಖಾಸಗಿ ಶಾಲೆ ಶಿಕ್ಷಕ ಹಣ ಡಬ್ಲಿಂಗ್‌ ಮಾಡುವುದಾಗಿ ಪರಿಚಿತವಾದ ಎಂಬಿಬಿ ಕಂಪನಿಗೆ ತಾನು ದುಡಿದ ಹಣ ಹಾಗೂ ಗ್ರಾಮದ ಜನರಿಂದಲೂ ಹಣ ಹೂಡಿಕೆ ಮಾಡಿ ಮೋಸಕ್ಕೆ ಒಳಗಾಗಿದ್ದಾನೆ. ಇದರಿಂದ ಮನನೊಂದು ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಜು ಬ್ಯಾಡಗಿ (45) ಆತ್ಮಹತ್ಯೆ ಮಾಡಿಕೊಂಡ ಖಾಸಗಿ ಶಾಲೆಯ ಶಿಕ್ಷಕರಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಘಟನೆ ನಡೆದಿದೆ. ಕುಷ್ಟಗಿ ಪಟ್ಟಣದ ಬಸವೇಶ್ವರ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಖಾಸಗಿ ಶಾಲೆಯಲ್ಲಿ ಕಡಿಮೆ ವೇತನ ಇದ್ದುದರಿಂದ ಕುಟುಂಬ ನಿರ್ವಹಣೆ ಹಾಗೂ ಇತರೆ ಖರ್ಚುಗಳಿಗಾಗಿ ಅನೇಕ ಮಾರ್ಗಗಳನ್ನು ಹುಡುಕುತ್ತಿದ್ದರು. ಆಗ ಹಣ ಡಬ್ಲಿಂಗ್‌ ಮಾಡುವುದಾಗಿ ಪರಿಚಿತವಾದ ಎಂಬಿಬಿ ಕಂಪನಿಗೆ ಮೊದಲು ತಮ್ಮ ದುಡಿದ ಹಣವನ್ನು ಹೂಡಿಕೆ ಮಾಡಿದ್ದಾರೆ. ಈ ವೇಳೆ ಕೆಲವೊಂದಿಷ್ಟು ಕಮಿಷನ್‌ ಕೂಡ ಕೊಡಲಾಗಿದೆ.

Bengaluru: ಲಿಫ್ಟ್‌ನಲ್ಲಿ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಫುಡ್‌ ಡೆಲಿವರಿ ಬಾಯ್

ಹೆಚ್ಚಿನ ಕಮಿಷನ್‌ಗೆ ಹಣ ಹೂಡಿಕೆ ಮಾಡಿಸಲು ಯತ್ನ: ಇನ್ನು ಹಣ ಬರುವುದನ್ನೇ ಕಾಯ್ದುಕೊಂಡಿದ್ದ ಮೋಸದ ಕಂಪನಿಯು ನಿಮ್ಮ ಪರಿಚಯಸ್ಥರಿಂದ ಹೆಚ್ಚಿನ ಹಣ ಹೂಡಿಕೆ ಮಾಡಿಸಿದಲ್ಲಿ ನಿಮಗೆ ಕಮಿಷನ್‌ ನೀಡುವುದಾಗಿ ಹೇಳಿದೆ. ಇದನ್ನು ನಂಬಿಕೊಂಡು ತಾವು ದುಡಿದ ಹಣವನ್ನು ಹಲವರ ಹೆಸರಿನಲ್ಲಿ ಹೂಡಿಕೆ ಮಾಡಿದ್ದಾರೆ. ಜೊತೆಗೆ, ಗ್ರಾಮದ ನೂರಾರು ಜನರಿಂದ ಎಂಬಿಬಿ ಕಂಪನಿಗೆ ಲಕ್ಷಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿದ್ದಾರೆ. ಮೊದಲು ಕಮೀಷನ್‌ ಕೊಟ್ಟ ಕಂಪನಿ ಇದ್ದಕ್ಕಿಂದತೆ ನಾಪತ್ತೆಯಾಗಿದೆ. ಇದರಿಂದ ಮೋಸಕ್ಕೆ ಹೋಗಿರುವುದು ತಿಳಿದು ಶಿಕ್ಷಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೂ ಮುನ್ನ ವೀಡಿಯೋ:  ಮತ್ತೊಂದೆಡೆ ತನ್ನ ಸಾವಿಗೂ ಮುನ್ನ ಖಾಸಗಿ ಶಾಲೆ ಶಿಕ್ಷಕ ರಾಜು ಬ್ಯಾಡಗಿ ಅವರು ಸೆಲ್ಫಿ ವೀಡಿಯೋ ಮಾಡಿದ್ದಾರೆ. ಕುಷ್ಟಗಿ ಸಾಯಿಬಾಬಾ ದೇವಸ್ಥಾನ ಹಿಂಭಾಗ ತನ್ನ‌ ಕೆಲವು ಮಿತ್ರರಿಗೆ ಲೈವ್ ವಿಡಿಯೋ ಮಾಡಿ ವಿಷ ಸೇವಿಸಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಈ ವೀಡಿಯೋ ಆಧರಿಸಿ ಸ್ಥಳಕ್ಕೆ ತೆರಳಿದ ಕುಷ್ಟಗಿ ಠಾಣೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ವಿಡಿತೋ ಆಧರಿಸಿ ಕಂಪನಿಯ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.

ಚಾಮರಾಜನಗರ: ಆಸ್ತಿ ವಿವಾದಕ್ಕೆ ಕುಟುಂಬದ ಮೂವರು ನೇಣಿಗ ಶರಣು!

ಆಸ್ತಿ ವಿವಾದಕ್ಕೆ ಕುಟುಂಬದ ಮೂವರು ನೇಣಿಗೆ ಶರಣು: ಚಾಮರಾಜನಗರ (ಜೂ.23):  ಆಸ್ತಿ ವಿವಾದಕ್ಕೆ ಮನನೊಂದು ಡೆತ್ ನೋಟ್ ಬರೆದು ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಸದ್ಯ ತಾತನ ಮನೆಯಲ್ಲಿ ಉಳಿದಿದ್ದ ಮತ್ತೊಬ್ಬ ಪುತ್ರಿ ಬಚಾವ್ ಆಗಿದ್ದಾಳೆ. ದಂಪತಿ- ಮಗಳು ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದಲ್ಲಿ ನಡೆದಿದೆ. ಗಂಡ-ಹೆಂಡತಿ ಹಾಗೂ ಮಗಳು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಮಹಾದೇವಸ್ವಾಮಿ(42), ಪತ್ನಿ ಸವಿತಾ(33) ಹಾಗೂ ಮಗಳು ಸಿಂಚನಾ(15) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.

ಅಜ್ಜಿ ಮನೆಯಲ್ಲಿದ್ದ ಮಗಳು ಬಚಾವ್:  ಬೆಳಗ್ಗೆ ಈ ದುರ್ಘಟನೆ ನಡೆದಿದ್ದು ಡೆತ್ ನೋಟ್ ಬರೆದಿಟ್ಟಿದ್ದು ಮೃತನ ಅಕ್ಕ-ತಂಗಿಯರ ಹೆಸರು ಬರೆದಿದ್ದು ಇವರಿಗೆಲ್ಲಾ ಶಿಕ್ಷೆ ಆಗಬೇಕೆಂದು ಕೋರಿಕೊಂಡಿದ್ದಾರೆ. ಇನ್ನೂ ಮಹದೇವಸ್ವಾಮಿ ಮೂಲತಃ ಕೃಷಿಕರಾಗಿದ್ದು 10 ಎಕರೆಗೂ ಕೂಡ ಜಮೀನಿತ್ತು. ಸವಿತಾ ಟೈಲರಿಂಗ್ ಮಾಡುತ್ತಿದ್ದರಂತೆ, ಇವರಿಗೆ ಇಬ್ಬರು ಪುತ್ರಿಯರಿದ್ದು ಓರ್ವ ಪುತ್ರಿ ಕಾಲೇಜು ವ್ಯಾಸಂಗ ಮಾಡುತ್ತಿದ್ದು ತಾತನ ಮನೆಯಲ್ಲಿದ್ದಾಳೆ. ಕಿರಿಯ ಮಗಳು ಸಿಂಚನಾ 9 ನೇ ತರಗತಿ ಓದುತ್ತಿದ್ದು ಅಪ್ಪ-ಅಮ್ಮನ ಜೊತೆ ಇದ್ದಳು. 

click me!