ಆಸ್ತಿ ವಿವಾದಕ್ಕೆ ಮನನೊಂದು ಡೆತ್ ನೋಟ್ ಬರೆದು ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಸದ್ಯ ತಾತನ ಮನೆಯಲ್ಲಿ ಉಳಿದಿದ್ದ ಮತ್ತೊಬ್ಬ ಪುತ್ರಿ ಬಚಾವ್ ಆಗಿದ್ದಾಳೆ.
ವರದಿ - ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ
ಚಾಮರಾಜನಗರ (ಜೂ.23) - ಆಸ್ತಿ ವಿವಾದಕ್ಕೆ ಮನನೊಂದು ಡೆತ್ ನೋಟ್ ಬರೆದು ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಸದ್ಯ ತಾತನ ಮನೆಯಲ್ಲಿ ಉಳಿದಿದ್ದ ಮತ್ತೊಬ್ಬ ಪುತ್ರಿ ಬಚಾವ್ ಆಗಿದ್ದಾಳೆ.
undefined
ದಂಪತಿ- ಮಗಳು ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದಲ್ಲಿ ನಡೆದಿದೆ. ಗಂಡ-ಹೆಂಡತಿ ಹಾಗೂ ಮಗಳು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಮಹಾದೇವಸ್ವಾಮಿ(42), ಪತ್ನಿ ಸವಿತಾ(33) ಹಾಗೂ ಮಗಳು ಸಿಂಚನಾ(15) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಆನೇಕಲ್‌ನಲ್ಲಿ 22 ವರ್ಷದ ವಿಲೇಜ್ ಅಕೌಂಟೆಂಟ್ ನೇಣಿಗೆ ಶರಣು: ಯುವತಿ ಸಾವಿನ ಸುತ್ತ ಅನುಮಾನ
ಬೆಳಗ್ಗೆ ಈ ದುರ್ಘಟನೆ ನಡೆದಿದ್ದು ಡೆತ್ ನೋಟ್ ಬರೆದಿಟ್ಟಿದ್ದು ಮೃತನ ಅಕ್ಕ-ತಂಗಿಯರ ಹೆಸರು ಬರೆದಿದ್ದು ಇವರಿಗೆಲ್ಲಾ ಶಿಕ್ಷೆ ಆಗಬೇಕೆಂದು ಕೋರಿಕೊಂಡಿದ್ದಾರೆ. ಇನ್ನೂ ಮಹದೇವಸ್ವಾಮಿ ಮೂಲತಃ ಕೃಷಿಕರಾಗಿದ್ದು 10 ಎಕರೆಗೂ ಕೂಡ ಜಮೀನಿತ್ತು. ಸವಿತಾ ಟೈಲರಿಂಗ್ ಮಾಡುತ್ತಿದ್ದರಂತೆ, ಇವರಿಗೆ ಇಬ್ಬರು ಪುತ್ರಿಯರಿದ್ದು ಓರ್ವ ಪುತ್ರಿ ಕಾಲೇಜು ವ್ಯಾಸಂಗ ಮಾಡುತ್ತಿದ್ದು ತಾತನ ಮನೆಯಲ್ಲಿದ್ದಾಳೆ. ಕಿರಿಯ ಮಗಳು ಸಿಂಚನಾ 9 ನೇ ತರಗತಿ ಓದುತ್ತಿದ್ದು ಅಪ್ಪ-ಅಮ್ಮನ ಜೊತೆ ಇದ್ದಳು.
ಹೋಮ್ ವರ್ಕ್ ಮಾಡಿಸದ ಗಂಡನ ಮೇಲಿನ ಕೋಪಕ್ಕೆ, ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ
ಸದ್ಯ,ಮೂವರು ಸಾವಿಗೆ ಶರಣಾಗಿದ್ದು ಗ್ರಾಮ ಬೆಚ್ಚಿ ಬಿದ್ದಿದೆ, ಹೃದಯ ವಿದ್ರಾವಕ ದೃಶ್ಯ ಕಂಡು ಮಮ್ಮುಲ ಮರುಗುತ್ತಿದ್ದಾರೆ. ಮೇಲ್ನೋಟಕ್ಕೆ ಹೆಂಡತಿ, ಮಗಳು ಮೊದಲು ಸಾವಿಗೆ ಶರಣಾಗಿದ್ದು ಅದಾದ ಬಳಿಕ ಮಾಹದೇವಸ್ವಾಮಿ ನೇಣಿಗೆ ಕೊರಳೊಡ್ಡಿದ್ದಾನೆ. ಆಸ್ತಿ ವಿಚಾರದಿಂದ ಸಾವು ಸಂಭವಿಸಿದೆ. ಒಟ್ನಲ್ಲಿ ಆಸ್ತಿ ವಿವಾದ ಇದೀಗ ಇಡೀ ಕುಟುಂಬವನ್ನು ಬಲಿ ಪಡೆದಿದೆ.
ಸ್ಥಳಕ್ಕೆ ಪೊಲೀಸರು, ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಡೆತ್ ನೋಟ್ ಹಾಗೂ ಸ್ಥಳ ಮಹಜರು ನಡೆಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.