Mysuru Crime: ವಾಟ್ಸಾಪ್‌ಗೆ ಬೆತ್ತಲೆ ಫೋಟೋ ಕಳಿಸಿ ಹಣ ಪೀಕುತ್ತಿದ್ದ ಲೇಡಿ: ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ

Published : Dec 18, 2022, 04:50 PM IST
Mysuru Crime: ವಾಟ್ಸಾಪ್‌ಗೆ ಬೆತ್ತಲೆ ಫೋಟೋ ಕಳಿಸಿ ಹಣ ಪೀಕುತ್ತಿದ್ದ ಲೇಡಿ: ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ

ಸಾರಾಂಶ

ಪುರುಷರಿಂದ ಹಣವನ್ನು ವಸೂಲಿ ಮಾಡಲು ತನ್ನ ನಗ್ನ ಫೋಟೋ ಕಳುಹಿಸುತ್ತಿದ್ದ ಕಿಲಾಡಿ ಲೇಡಿ. ಮೈಸೂರಿನಲ್ಲಿ ನೆಮ್ಮದಿಯಿಂದ ಕುಟುಂಬಗಳನ್ನು ಬೇರೆ ಮಾಡಿದ ಕಿರಾತಕಿ. ವಿಜಯನಗರದಲ್ಲಿ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ಆರಂಭ.

ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್‌ ಸುವರ್ಣ ನ್ಯೂಸ್ 

ಮೈಸೂರು (ಡಿ.18):  ಆಕೆ ಬ್ಯೂಟಿ ಪಾರ್ಲರ್ ನಡೆಸುವ ಬ್ಯೂಟಿ. ಆ ಬ್ಯೂಟಿಯನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡೊದು ಅವಳ ಇನ್ನೊಂದು ಕಸುಬು. ರಂಗು ತುಂಬಿದ ಮುಖ ಇಟ್ಟುಕೊಂಡು ಬಣ್ಣದ ಮಾತುಗಳ ಮೂಲಕ ಗಂಡಸರನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದವಳು ಇಂದು ಖಾಕಿ ಬಲೆಗೆ ಬಿದ್ದಿದ್ದಾಳೆ. ಅದು ಯಾಕೆ ಅನ್ನೋದು ಮುಂದಿದೆ ನೋಡಿ.

ಬೆತ್ತಲೆ ಪೋಟೋ ತೋರಿಸಿ ಪುರುಷರನ್ನ ಬುಟ್ಟಿಗೆ ಬೀಳಿಸಿಕೊಂಡು ಯಾಮಾರಿಸುವುದು ಇವಳ ಕೆಲಸ. ಕೊಟ್ಟ ಸಾಲ ಕೇಳಿದಕ್ಕೆ ಮೊಬೈಲ್‌ನಲ್ಲಿ ಅರೆಬೆತ್ತಲೆ ಪೋಟೋ ಕಳುಯಿಸಿ ಬೆದರಿಸುವುದು ಬೇರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗೆ ಹಣ ಕಿತ್ತು ಎಸ್ಕೇಪ್ ಆಗ್ತಿದ್ದ ಖತರ್ನಾಕ್ ಲೇಡಿ ಇದೀಗ ಪೊಲೀಸರ ಅಥಿತಿ ಆಗಿದ್ದಾಳೆ. ಪುರುಷರನ್ನ ಅಟ್ರ್ಯಾಕ್ಟ್ ಮಾಡೋಕೆ ತನ್ನ ಮೈ ಕೈ  ಕುಣಿಸಿ ಯಾಮಾರಿಸ್ತಿದ್ದ ಆ ಲೇಡಿ ಹೆಸರು ಸವಿತ ಆಲಿಯಾಸ್ ಮಂಜುಳ ಯಾದವ್. ಈಗೆ ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನವಳು. ಈ ಸವಿತಾ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದು ಸೆಟಲ್ ಆಗಿ ಮಾಡ್ತಿದ್ದದ್ದು ಮಾತ್ರ ಮನೆ ಹಾಳು ಮಾಡೋ ಕೆಲಸ.

Vijayapura ಬೆತ್ತಲೆ ವಿಡಿಯೋ ಮಾಡಿ ಹಾಸನ 'ಪ್ರಿಯತಮೆ'ಯಿಂದ ದೋಖಾ: ₹ 40 ಲಕ್ಷ ಕಳೆದುಕೊಂಡ 'ಹೀರೋ'

ಹಣ ಪಡೆದ ಬಳಿಕ ವರಸೆ ಬದಲು: ಕಷ್ಟ ಅಂತಾ ಕೆಲ ದಂಪತಿ ಬಳಿ ಹಣ ಇಸ್ಕೊಳ್ಳೋ ಈಕೆ ಹಣ ಪಡೆದ ಬಳಿಕ ತನ್ನ ವರಸೆ ಬದಲಿಸ್ತಾಳೆ. ದಂಪತಿ ನಡುವೆ ಕಲಹ ತಂದಿಟ್ಟು ಹಣ ಕೇಳಿದರೆ ತನ್ನದೇ ನಗ್ನ ಪೋಟೋ ಕಳಿಸಿ ಹಣ ಕೊಡದೆ ಯಾಮಾರಿಸ್ತಾಳೆ. ಈಕೆಯ ವರಸೆ ಗಂಡನಿಗೆ ಗೊತ್ತಾಗಿ ಸ್ವತಃ ಪತಿಯೇ ಚಾಕುವಿನಿಂದ ಇರಿದಿದ್ದರೂ ಈಕೆ ಮಾತ್ರ ಬುದ್ದಿ ಕಲಿತಿರಲಿಲ್ಲ. ಸಿಕ್ಕ ಸಿಕ್ಕವರನ್ನ ಬುಟ್ಟಿಗೆ ಹಾಕೊಳ್ಳೋಕೆ  ವಾಟ್ಸಪ್ ಚಾಟ್ ಮಾಡಿ ತನ್ನ ಅರೆ ನಗ್ನ ಸ್ಥಿತಿಯ ಪೋಟೋಗಳನ್ನ ಸೆಂಡ್ ಮಾಡಿ ಅಮಾಯಕರನ್ನ ಯಾಮಾರಿಸಿ ಲಕ್ಷ ಲಕ್ಷ ಹಣ ಪೀಕುತ್ತಿದ್ದಳು.

ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ: ಈ ಖತರ್ನಾಕ್ ಲೇಡಿಯ ಮುಖವಾಡ ಈಗ ಬಯಲಾಗಿದೆ. ಮೈಸೂರಿನಲ್ಲಿ ಪರಿಚಯಸ್ಥ ದಂಪತಿಗೆ ಯಾಮಾರಿಸಿ ಲಕ್ಷ ಹಣ ಪೀಕಿದ್ದ ಈ ಲೇಡಿ ಹಣ ಕೇಳೋಕೆ ಬಂದ ದಂಪತಿ ಮೇಲೆ ಹಲ್ಲೆ ಕೂಡ  ಮಾಡೋಕೆ ಹೋಗಿದ್ದ ಆರೋಪವೂ ಇದೆ. ಇನ್ನೂ ವಿಜಯನಗರ ಎರಡನೇ ಹಂತದ ವಾಟರ್ ಟ್ಯಾಂಕ್ ಬಳಿಯ ಅಭಿಷೇಕ್ ರಸ್ತೆಯಲ್ಲಿ ಸ್ಪಾ ಹೆಸರಲ್ಲಿ ವೈಶ್ಯವಾಟಿಕೆ ದಂಧೆ ನಡೆಸಿ ಈ ಸವಿತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ‌. ಸದ್ಯ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಖತರ್ನಾಕ್ ಲೇಡಿಯನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಲಿಂಗಸೂಗೂರು ಆಸ್ಪತ್ರೆ ನರ್ಸ್ ಲಂಚಾವತಾರ: ಹಣ ಕೊಟ್ಟರೆ ಮಾತ್ರ ಚಿಕಿತ್ಸೆ

ಅಂದ ಹಾಗೆ ಮೊಬೈಲ್ ನಲ್ಲಿ ಚಾಟ್ ಮಾಡೋಕೆ ಲೇಡಿ ಒಬ್ಬಳು ಸಿಕ್ಕಿದ್ಲು ಅಂತಾ ಹಿಂದೆ ಮುಂದೆ ನೋಡದೆ ಚಾಟ್ ಮಾಡೋಕೆ ಹೋದ್ರೆ ನೀವು ಬೆತ್ತಲಾಗೋದು ಗ್ಯಾರಂಟಿ ಹುಷಾರ್‌ ಆಗಿರಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ