ನೀರಿನ ವಿಚಾರಕ್ಕೆ ಲೇಡೀಸ್ ಹಾಸ್ಟೆಲ್‌ನ ಸೀನಿಯರ್ಸ್ಸ್ ಗ್ಯಾಂಗ್ ರ‍್ಯಾಗಿಂಗ್, ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು

By Suvarna NewsFirst Published Mar 22, 2024, 1:46 PM IST
Highlights

ಕುಡಿಯುವ ನೀರಿನ ವಿಚಾರಕ್ಕಾಗಿ ಲೇಡೀಸ್ ಹಾಸ್ಟೆಲ್ ನಲ್ಲಿ ರ‍್ಯಾಗಿಂಗ್ ನಡೆದಿದ್ದು, ಜೂನಿಯರ್ ವಿದ್ಯಾರ್ಥಿನಿ ಒಬ್ಬಳನ್ನು ಕೂಡಿ ಹಾಕಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ರಾಯಚೂರು (ಮಾ.22): ಕುಡಿಯುವ ನೀರಿನ ವಿಚಾರಕ್ಕಾಗಿ ಲೇಡೀಸ್ ಹಾಸ್ಟೆಲ್ ನಲ್ಲಿ ರ‍್ಯಾಗಿಂಗ್ ನಡೆದಿದ್ದು, ಜೂನಿಯರ್ ವಿದ್ಯಾರ್ಥಿನಿ ಒಬ್ಬಳನ್ನು ಕೂಡಿ ಹಾಕಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ರಾಯಚೂರು ಜಿಲ್ಲೆ ಮಾನ್ವಿ ಸರಕಾರಿ ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೆಲ್ ನಲ್ಲಿ ಘಟನೆ ನಡೆದಿದ್ದು ಬಿ.ಎಡ್‌ ವಿಭಾಗದ ನಾಲ್ವರು ಸೀನಿಯರರ್ಸ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ.

ಸುದೀರ್ಘ ವಿಚಾರಣೆ ಬಳಿಕ 5,8,9, ನೇ ತರಗತಿಗಳ ಬೋರ್ಡ್ ಎಕ್ಸಾಂ ನಡೆಸಲು ಹೈಕೋರ್ಟ್ ಒಪ್ಪಿಗೆ

ಪಿಯುಸಿ ವಿದ್ಯಾರ್ಥಿನಿ ಮಂಜುಳಾ ಎಂಬಾಕೆಯನ್ನು ರೂಮ್ ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಲಾಗಿದ್ದು, ಕುಡಿಯುವ ನೀರು ತುಂಬಿದ್ದ ಬಕೆಟ್ ನಲ್ಲಿ ಸೀನಿಯರರ್ಸ್ ಜಗ್ ಹಾಕಿದ್ದರು.  ಜಗ್ ಹಾಕಬೇಡಿ ಎಂದು ಸೀನಿಯರರ್ಸ್ ಬಳಿ ಹೇಳಿದ್ದ ಮಂಜುಳಾ. ಇದರಿಂದ ಸೀನಿಯರ್‌ನನ್ನೇ ಪ್ರಶ್ನೆ ಮಾಡುತ್ತಿದ್ದೀಯಾ ಎಂದು ಮಂಜುಳಾ ವಿರುದ್ಧ ಐದು ಜನರಿಂದಲೇ ಹಲ್ಲೆ ನಡೆದಿದೆ.

ಕೆಪಿಎಸ್‌ಸಿಯಿಂದ ಮುಂದುವರೆದ ವಿಳಂಬ ನೀತಿ, ಪರೀಕ್ಷೆ ಆಗಿ 2 ತಿಂಗಳಾದರೂ ಬಾರದ ಫಲಿತಾಂಶ!

ಶರಣಮ್ಮ, ದೇವಮ್ಮ, ಮಂಜುಳಾ, ಶಿಲ್ಪಾ ತಂಡದಿಂದ ವಿದ್ಯಾರ್ಥಿನಿ  ಮಂಜುಳಾ ಮೇಲೆ ಹಲ್ಲೆ ನಡೆದಿದ್ದು, ಸದ್ಯ ಗಾಯಾಳು ವಿದ್ಯಾರ್ಥಿನಿಯನ್ನು ಮಾನ್ವಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

click me!