
ಬಸ್ಗಳಲ್ಲಿ ಹೋಗುವಾಗ ರಶ್ನಲ್ಲಿಯೇ ತಮ್ಮ ತೀಟೆ ತೀರಿಸಿಕೊಳ್ಳುವ ಪುರುಷರು ಕೆಲವರು ಇದ್ದಾರೆ. ಆದರೆ ಕೆಲವೊಮ್ಮೆ ಇದು ಅಚಾನಕ್ ಆಗಿ ಘಟಿಸುವುದು ಇದೆ. ಆದರೆ ಯಾವುದು ಉದ್ದೇಶಪೂರ್ವಕವಾಗಿ ಮಾಡಿದ್ದು, ಯಾವುದು ಅಚಾನಕ್ ಆಗಿ ಆಗಿದ್ದು ಎಂದು ತಿಳಿಯುವುದೂ ಮಹಿಳೆಯರಿಗೆ ಎಷ್ಟೋ ಬಾರಿ ಕಷ್ಟವೇ. ಆದರೆ ಇಲ್ಲೊಂದು ಪ್ರಕರಣದಲ್ಲಿ, ಕೇರಳದಲ್ಲಿ ನಡೆದ ಘಟನೆ ಮಾತ್ರ ಭಾರಿ ಶಾಕಿಂಗ್ ಎನ್ನುವಂತಿದೆ. ಬಸ್ನಲ್ಲಿ ಹೋಗುವಾಗ ಸಹ ಪ್ರಯಾಣಿಕರೊಬ್ಬರು ತಮ್ಮನ್ನು ಟಚ್ ಮಾಡಿದರು ಎಂದು ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಮಿಲಿಯನ್ಗಟ್ಟಲೆ ವ್ಯೂವ್ಸ್ ಪಡೆದ ಬಳಿಕ ಡಿಲೀಟ್ ಮಾಡಿದ್ದಾಳೆ ಈ ಯುವತಿ. ಆದರೆ ಡಿಲೀಟ್ ಆಗುವಷ್ಟರಲ್ಲಿಯೇ ಆ ವ್ಯಕ್ತಿ ನೊಂದು ಬದುಕನ್ನೇ ಕೊನೆಗೊಳಿಸಿಗೊಂಡಿದ್ದಾಳೆ.
ಈಕೆಯ ಹೆಸರು ಶಿಮ್ಜಿತಾ ಮುಸ್ತಫಾ. ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್. ಬಸ್ನಲ್ಲಿ ಹೋಗುವಾಗಲೂ ಕೈಯಲ್ಲಿ ಸೆಲ್ಫಿ ಸ್ಟಿಕ್ ಹಿಡಿದು ವಿಡಿಯೋ ಮಾಡುತ್ತಲೇ ಹೋಗಿದ್ದಾರೆ. ದೀಪಕ್ ಎನ್ನುವವರು ಈಕೆಯ ಹಿಂದೆ ನಿಂತಿದ್ದಾರೆ. ಆ ಸಮಯದಲ್ಲಿ ದೀಪಕ್ ತಮ್ಮನ್ನು ಟಚ್ ಮಾಡಿದ್ದರು ಎನ್ನುವುದು ಶಿಮ್ಜಿತಾ ಮುಸ್ತಫಾ ಆರೋಪ. ದೀಪಕ್ ವಿರುದ್ಧ ಲೈಂ*ಗಿಕ ದೌರ್ಜನ್ಯದ ಬಗ್ಗೆ ಬರೆದು ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು ಶಿಮ್ಜಿತಾ. ಇನ್ನು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಂದಾಕ್ಷಣ ಹಿಂದೆ ಮುಂದೆ ನೋಡದೆ, ಅದರ ಸತ್ಯಾಸತ್ಯತೆಯನ್ನೂ ತಿಳಿಯದೇ ಕಮೆಂಟ್ ಹಾಕುವ ಅಭಿಮಾನಿಗಳು ಕೇಳಬೇಕೆ? ಅದರಲ್ಲಿಯೂ ಇಂಥ ವಿಡಿಯೋ ಎಂದ ಮೇಲೆ ಸಹಜವಾಗಿ ಕ್ಲಿಕ್ ಮಾಡುವವರ ಸಂಖ್ಯೆ ಏರುತ್ತದೆ. ಅದೇ ರೀತಿ, ಈ ವಿಡಿಯೋಗೂ ಮಿಲಿಯನ್ಗಟ್ಟಲೆ ವ್ಯೂವ್ಸ್ ಬಂದು ಕಮೆಂಟ್ಗಳ ಸುರಿಮಳೆಯಾಯಿತು.
ಇದೇ ಖುಷಿಯಲ್ಲಿ ಮಾರನೆಯ ದಿನ ಈಕೆ, ಈ ಘಟನೆಯ ಬಗ್ಗೆ ಇನ್ನಷ್ಟು ರೋಚಕವಾಗಿ ಇನ್ನೊಂದು ಪೋಸ್ಟ್ ಮಾಡಿದಾಗಲೂ ಅದು ಕೂಡ ಕಮೆಂಟ್ಗಳ ಸುರಿಮಳೆಯಿಂದಲೇ ತುಂಬಿತು. ಒಂದು ವೇಳೆ ದೌರ್ಜನ್ಯ ಆಗಿದ್ದರೆ, ಕನಿಷ್ಠ ಪೊಲೀಸರಿಗೆ ದೂರನ್ನಾದರೂ ನೀಡುವ ಕೆಲಸವನ್ನೂ ಮಾಡಲಿಲ್ಲ. ಆದರೆ ಈ ವಿಡಿಯೋದಲ್ಲಿ ದೀಪಕ್ ಅವರ ಮುಖ ಸ್ಪಷ್ಟವಾಗಿ ಕಾಣುತ್ತಿದ್ದ ಹಿನ್ನೆಲೆಯಲ್ಲಿ, ಸೋಷಿಯಲ್ ಮೀಡಿಯಾ ಎಂದರೇನು ಎಂದೇ ಅರಿಯದ ದೀಪಕ್ ಅವರ ತಂದೆ-ತಾಯಿಗೂ ವಿಷಯ ಮುಟ್ಟಿತು. ದೀಪಕ್ ಅವರನ್ನು ಎಲ್ಲರೂ ನೋಡುವ ವೈಖರಿಯೇ ಬದಲಾಗಿ ಹೋಯಿತು.
ಎಲ್ಲೆಡೆಯಿಂದ ಬಂದ ಕೆಟ್ಟ ಕಮೆಂಟ್ಸ್, ಟೀಕೆಗಳನ್ನು ಸಹಿಸಿಕೊಳ್ಳಲು ಆಗದ 41 ವರ್ಷದ ಮಾರಾಟ ವ್ಯವಸ್ಥಾಪಕ ದೀಪಕ್ ಅವರು ಜೀವವನ್ನು ಕೊನೆಗೊಳಿಸಿಕೊಂಡರು. ಅವರು ಸತ್ತ ಬಳಿಕ, ಈಕೆ ಹಾಕಿರುವ ವಿಡಿಯೋ ಡೌನ್‌ಲೋಡ್ ಮಾಡಿಕೊಂಡವರು ಅದನ್ನು ನೋಡಿದಾಗ, ಅದರಲ್ಲಿ ಆಕೆ ನಗುನಗುತ್ತಾ ಆ ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ. ದೀಪಕ್ ಅವರ ಕೈ ಈಕೆಗೆ ಟಚ್ ಆಗಿದ್ದು ನಿಜವಾಗಿದ್ದರೂ ಇದು ಉದ್ದೇಶಪೂರ್ವಕವೋ, ದುರುದ್ದೇಶವೋ ಎನ್ನುವುದು ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ ಯಾವುದೇ ಹೆಣ್ಣು ಬಸ್ನಲ್ಲಿ ಅಥವಾ ಇನ್ನೆಲ್ಲಿಯೋ ಪ್ರಯಾಣಿಸುವ ಸಂದರ್ಭದಲ್ಲಿ ಈಗ ಬಾಡಿ ಪಾರ್ಟ್ ಟಚ್ ಮಾಡಿದರೆ ಆಕೆಯ ಕೋಪ ಯಾವ ಮಟ್ಟಿಗೆ ಹೋಗುತ್ತದೆ ಎನ್ನುವುದು ಮುಖದ ಭಾವನೆಯಲ್ಲಿಯೇ ತಿಳಿಯುತ್ತದೆ. ಆದರೆ ಈ ವಿಡಿಯೋದಲ್ಲಿ ಆ ಘಟನೆ ನಡೆದ ಮೇಲೆಯೂ ಮುಗುಳ್ನಗುತ್ತಲೇ ಇದ್ದಾರೆ ಎನ್ನುವ ಆರೋಪವೂ ಇದೆ. ಇದು ಕೇವಲ ಲೈಕ್ಗೋಸ್ಕರ ಮಾಡಿದ ವಿಡಿಯೋ ಎನ್ನುವ ಆರೋಪ ಕೇಳಿಬರುತ್ತಿದೆ. ಸತ್ಯಾಸತ್ಯತೆ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ!
ಒಬ್ಬನೇ ಮಗನನ್ನು ಕಳೆದುಕೊಂಡಿರುವ ದುಃಖದಲ್ಲಿ ದೀಪಕ್ ಕುಟುಂಬಸ್ಥರು ಇದ್ದಾರೆ. ಪೊಲೀಸರಿಗೆ ದೂರನ್ನೂ ದಾಖಲು ಮಾಡದೇ, ವಿಡಿಯೋ ಹಾಕಿ ಮಿಲಿಯನ್ಗಟ್ಟಲೆ ವ್ಯೂವ್ಸ್ ಪಡೆದ ಬಳಿಕ, ತಾನು ಹೇಳ್ತಿರೋದು ನಿಜ ಎಂದು ಹೇಳುವುದಕ್ಕಾದರೂ ವಿಡಿಯೋ ಇಟ್ಟುಕೊಳ್ಳುವ ಬದಲು ಅದನ್ನು ಅನುಮಾನಾಸ್ಪದವಾಗಿ ಡಿಲೀಟ್ ಮಾಡಿರುವುದು ಏಕೆ ಎನ್ನುವ ಪ್ರಶ್ನೆ ಶುರುವಾಗಿದೆ. ಈಕೆಯ ವಿರುದ್ಧ ಕಠಿಣಾತಿಕಠಿಣ ಕ್ರಮ ತೆಗೆದುಕೊಳ್ಳಬೇಕು, ದೀಪಕ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎನ್ನುವ ಕೂಗು ಜೋರಾಗಿದೆ. ಒಬ್ಬರ ಪ್ರಾಣವನ್ನು ಪಡೆದಿರುವ ಈಕೆ ಮಾಡಿದ್ದು ಕೊ*ಲೆ ಎನ್ನಲಾಗುತ್ತಿದೆ. ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲು ಮಾಡಿದ್ದಾರೆ. ಮುಂದೆ ಏನಾಗುತ್ತೋ ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ