
ಕೊಪ್ಪಳ (ಜು. 01): ಹೋಮ್ ವರ್ಕ್ (Home Work) ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಕಿವಿಯಲ್ಲಿ ರಕ್ತ ಬರುವಂತೆ ಶಿಕ್ಷಕ (Teacher) ಹೊಡೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೋಚಿಂಗ್ ಸೆಂಟರ್ (Coaching Centre) ಶಿಕ್ಷಕನಿಂದ ಈ ಅಮಾನವೀಯ ಕೃತ್ಯ ನಡೆದಿದೆ. ಕೊಪ್ಪಳ (Koppal) ನಗರದ ಧನ್ವಂತರಿ ಕಾಲೋನಿಯಲ್ಲಿ ಲೋಹಿತ್ ಟುಟೋರಿಯಲ್ಸ್ ಹೆಸರಿನ ನವೋದಯ, ಸೈನಿಕ್ ಶಾಲೆಯ ಕೋಚಿಂಗ್ ಕ್ಲಾಸ್ ನಡೆಸುತ್ತಿರುವ ಶಿಕ್ಷಕ ಲೋಹಿತ್ 10 ವರ್ಷದ ಬಾಲಕ ಪ್ರಥಮ್‌ಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಮೈ ಮೇಲೆ ಬರೆ ಬರೋ ಹಾಗೆ ಶಿಕ್ಷಕ ಲೋಹಿತ್ ಥಳಿಸಿದ್ದಾರೆ.
ಹೋಮ್ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ, ಕಿವಿಯಲ್ಲಿ ರಕ್ತ ಬರುವ ಹಾಗೆ 10 ವರ್ಷದ ಪ್ರಥಮ್‌ನನ್ನು ಶಿಕ್ಷಕ ಥಳಿಸಿದ್ದಾರೆ. ಶಿಕ್ಷಕನ ಅಮಾನವೀಯ ವರ್ತನೆಗೆ ವಿದ್ಯಾರ್ಥಿ ಸಂಕಷ್ಟ ಅನುಭವಿಸುತ್ತಿದ್ದಾನೆ. ಕ್ಲಾಸ್‌ಗೆ ಬರೋ ವಿದ್ಯಾರ್ಥಿಗಳ ಮೇಲೆ ಶಿಕ್ಷಕ ಹಲ್ಲೆ ಮಾಡುತ್ತಾರೆ ಎಂದು ಆರೋಪಿಸಲಾಗಿದೆ. ಬಾಲಕ ಪ್ರಥಮ್ ಮೈಮೇಲೆ ಎಲ್ಲ ಗಾಯಗಳಾಗಿದ್ದು, ಸದ್ಯ ಪ್ರಥಮ್‌ಗೆ ಪೋಷಕರು ಚಿಕಿತ್ಸೆ ಕೊಡಿಸಿದ್ದಾರೆ. ಶಿಕ್ಷಕನ ವರ್ತನೆಗೆ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೂರು ವರ್ಷದ ಮಗು ಕೊಂದು ತಾನೂ ಆತ್ಮಹತ್ಯೆಗೆ ಮಾಡಿಕೊಂಡ ಅಮ್ಮ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ