
ಮುಂಬೈ, (ನ.07): ಪಾನಿಪೂರಿ ತಯಾರು ಮಾಡುವುದನ್ನು ನೋಡಿದ್ರೆ ತಿನ್ನಬಾರದು ಅಂತಾರೆ. ಕರೆಕ್ಟ್ ಈ ಇಲ್ಲೊಬ್ಬ ಆಸಾಮಿ ಪಾನಿ ಪೂರಿ ಮಾಡುವುದನ್ನು ನೋಡಿದ್ರೆ ನಿಜವಾಗಲೂ ತಿನ್ನಲೇ ಬಾರದು.
ಹೌದು.. ಶೌಚಾಲಯದ ನೀರನ್ನ ಬಳಸಿ ಪಾನಿಪುರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಳಕಿಗೆ ಬಂದಿದೆ.
ಇಂತಹ ಪಾನಿಪೂರಿ ನೀವೆಂದೂ ತಿಂದಿರಲಾರಿರಿ!
ರಂಕಾಲಾ ಸರೋವರದ ಬಳಿ ಇರುವ ವಿಶೇಷ ಪಾನಿಪುರಿವಾಲಾ ಎಂಬ ಅಂಗಡಿ ಮಾಲೀಕ ಈ ಕೆಲಸ ಮಾಡಿದ್ದಾನೆ. ಟಾಯ್ಲೆಟ್ನ ನೀರನ್ನ ಕ್ಯಾನ್ನಲ್ಲಿ ತುಂಬಿಸಿಕೊಂಡು ಅದರಿಂದ ಪಾನಿಪುರಿ ತಯಾರಿಸಿದ್ದಾನೆ.
ಈ ವಿಚಾರ ಜನರ ಕಿವಿಗೆ ಬೀಳುತ್ತಿದ್ದಂತೆಯೇ ಅಂಗಡಿಗೆ ಆಗಮಿಸಿದ ಗ್ರಾಹಕರು ಅಂಗಡಿಯನ್ನ ನಾಶ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಬೀದಿಬದಿಯ ಪಾನಿಪೂರಿ ಅಂಗಡಿಗಳ ಪಾನಿ-ಪೂರಿ ತಯಾರಿಸುವ ರಹಸ್ಯ ಬಯಲಾಗುತ್ತಿರುವುದು ಇದೇ ಮೊದಲೇನಲ್ಲ. ಕಾಲಿನಿಂದ ತುಳಿದು ಹಿಟ್ಟು ನಾದಿ ಪೂರಿ ತಯಾರಿಸುವ, ಕೊಳಕು ನೀರಿನಿಂದ ಪಾನಿ ತಯಾರಿಸುವ ಪ್ರಕರಣಗಳು ವಿಡಿಯೋ ಸಮೇತ ಹಲವಾರು ಬಾರಿ ಬಯಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ