ಶಾಲೆಗೆ ರಜೆ ಇದ್ದುದರಿಂದ ಗ್ರಾಮದ ಪಕ್ಕದಲ್ಲಿಯೇ ಹರಿಯುವ ಕಾವೇರಿ ನದಿಯಲ್ಲಿ ಮೀನು ಹಿಡಿಯುವುದಾಗಿ ಹೋದ ಮಕ್ಕಳು, ನದಿಯ ಆಳವಿರುವ ಸ್ಥಳಕ್ಕೆ ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ.
ಕೊಡಗು (ಫೆ.12): ಭಾನುವಾರ ರಜಾದಿನವಾದ್ದು, ಬಿಸಿಲು ಹೆಚ್ಚಾಗಿದ್ದರಿಂದ ಮಕ್ಕಳು ಮನೆಯಲ್ಲಿರದೇ ಪೋಷಕರೊಂದಿಗೆ ಹೊಲಕ್ಕೆ ಹೋಗಿದ್ದಾರೆ. ಅಲ್ಲಿ ಪಕ್ಕದಲ್ಲಿಯೇ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ಮೀನು ಹಿಡಿಯುವುದಾಗಿ ಹೋಗಿದ್ದಾರೆ. ಆದರೆ, ಮಕ್ಕಳಿಬ್ಬರಿಗೂ ಈಜು ಬರುತ್ತಿರಲಿಲ್ಲ. ಹೀಗಾಗಿ, ಮೀನು ಹಿಡಿಯಲು ಹೋದ ಮಕ್ಕಳು ಆಳವಿರುವ ಸ್ಥಳಕ್ಕೆ ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ.
ಮಕ್ಕಳನ್ನು ಒಂದು ದಿನ ಬೇರೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದೇ ಪೋಷಕರಿಗೆ ದೊಡ್ಡ ಸವಾಲಾಗಿರುತ್ತದೆ. ಮಕ್ಕಳನ್ನು ಮನೆಯಲ್ಲಿ ನಿಯಂತ್ರಣ ಮಾಡಲಾಗುವುದಿಲ್ಲ ಎಂದು ಮನೆಯಿಂದ ಎಲ್ಲಾದರೂ ಹೋಗಿ ಆಟವಾಡಿಕೊಳ್ಳಲು ಬಿಟ್ಟರೆ ಆಗುವಂತಹ ಅನಾಹುತಗಳನ್ನು ಕೂಡ ಪೋಷಕರೇ ಅನುಭವಿಸಬೇಕು. ಆದರೆ, ಮಕ್ಕಳ ಜೀವಕ್ಕೆ ಅಪಾಯ ಆಗುತ್ತದೆ ಎನ್ನುವುದನ್ನು ಮೈಮರೆತರೆ ಮಕ್ಕಳು ಪ್ರಾಣ ಕಳೆದುಕೊಂಡು ನಮ್ಮಿಂದ ಶಾಶ್ವತವಾಗಿ ದೂರವಾಗುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ಇರಬೇಕು. ಇಲ್ಲವಾದಲ್ಲಿ ಕೊಡಗು ಜಿಲ್ಲೆಯಲ್ಲಿ ಉಂಟಾದ ಘಟನೆಯಂತೆ ಮಕ್ಕಳ ಜೀವಕ್ಕೆ ಅಪಾಯವಾಗುತ್ತದೆ.
undefined
ರಾಯಚೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ತನ್ನ ಮಕ್ಕಳನ್ನೇ ಕತ್ತು ಹಿಸುಕಿ ಕೊಂದ ಪಾಪಿ ತಂದೆ!
ಹೊಲದ ಬಳಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ದುರಂತ: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ ಹೊಂದಿದ್ದಾರೆ. ಪೃಥ್ವಿ (7), ಪ್ರಜ್ವಲ್ (4) ಮೃತ ಬಾಲಕರು ಆಗಿದ್ದಾರೆ. ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಬಳಿ ಹರಿಯುವ ಕಾವೇರಿ ನದಿಯಲ್ಲಿ ದರ್ಘಟನೆ ನಡೆದಿದೆ. ಮೀನು ಹಿಡಿಯಲು ತೆರಳಿದ ಸಂದರ್ಭ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ. ಕೂಡ್ಲೂರು ನಿವಾಸಿ ನಾಗರಾಜ್ ಎಂಬವರ ಪುತ್ರ ಪೃಥ್ವಿ ಹಾಗೂ ಸತೀಶ್ ಎಂಬವರ ಪುತ್ರ ಪ್ರಜ್ವಲ್ ಮೃತ ಬಾಲಕರಾಗಿದ್ದಾರೆ. ಈ ಕುರಿತಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆಗೆ ರಜೆಯ ಹಿನ್ನೆಲೆಯಲ್ಲಿ ನದಿ ಕಡೆಗೆ ಹೋಗಿದ್ದರು: ಇಂದು ಭಾನುವಾರ ಆಗಿದ್ದರಿಂದ ಶಾಲೆಗೆ ರಜೆ ಇತ್ತು. ಈ ಹಿನ್ನೆಲೆಯಲ್ಲಿ ಮಕ್ಕಳು ತಮ್ಮ ಹೊಲದ ಬಳಿಗೆ ಹೋಗಿದ್ದರು. ಈ ವೇಳೆ ಪೋಷಕರು ಕೆಲಸ ಮಾಡುವ ಸ್ಥಳದಲ್ಲಿಯೂ ಇರದೇ ಹೊಲದ ಪಕ್ಕದಲ್ಲಿ ಹರಿಯುತ್ತಿದ್ದ ಕಾವೇರಿ ನದಿಯ ಬಳಿ ತೆರಳಿದ್ದಾರೆ. ಅಲ್ಲಿ ಮೀನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಹೊಳೆಯಲ್ಲಿ ತಾ ಮುಂದು ನೀ ಮುಂದು ಎನ್ನುವಂತೆ ಆಟವಾಡಿಕೊಂಡು ಮೀನು ಹಿಡಿಯಲು ನದಿಯ ಆಳವಿರುವ ಸ್ಥಳಕ್ಕೆ ತೆರಳಿದ್ದಾರೆ. ಆಳದ ಗುಂಡಿಯ ಕಡೆಗೆ ತೆರಳಿ ಈಜು ಬಾರದೇ ಮುಳುಗಿ ಸಾವನ್ನಪ್ಪಿದ್ದಾರೆ.
ಹೆದ್ದಾರಿಯಲ್ಲಿ ಬೈಕ್‌ಗೆ ಗುದ್ದಿದ ಅಪರಿಚಿತ ವಾಹನ: ದಿಕ್ಕಾಪಾಲಾಗಿ ಬಿದ್ದ ಯುವಕರ ಮೃತದೇಹಗಳು
ಹುಡುಕಿದರೂ ಸಿಗದ ಮಕ್ಕಳು: ಮಕ್ಕಳು ಹೊಲದಿಂದ ನದಿಯ ಕಡೆಗೆ ಹೋಗಿದ್ದರೂ ತುಂಬಾ ಹೊತ್ತು ಮರಳಿ ಬಾರದ ಹಿನ್ನೆಲೆಯಲ್ಲಿ ಪೋಷಕರು ಹೋಗಿ ನೋಡಿದ್ದಾರೆ. ಅಲ್ಲಿ ಚಪ್ಪಲಿ ಸೇರಿ ಇತರೆ ವಸ್ತುಗಳು ಲಭ್ಯವಾಗಿದ್ದು, ಮಕ್ಕಳು ನದಿಯಲ್ಲು ಮುಳುಗಿದ್ದಾರೆ ಎಂಬುದು ಖಚಿತವಾಗಿದೆ. ಇನ್ನು ಮಕ್ಕಳು ಮುಳುಗಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ನದಿಗಿಳಿದು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಅಷ್ಟರಲ್ಲಿ ಮಕ್ಕಳು ನೀರಿನಲ್ಲಿ ಮುಳುಗಿದ್ದ ಮಕ್ಕಳ ಪ್ರಾಣಪಕ್ಷಿ ಹಾರಿಹೋಗಿತ್ತು. ಸದ್ಯ ಕುಶಾಲನಗರ ಆಸ್ಪತ್ರೆಗೆ ಮಕ್ಕಳ ಮೃತದೇಹ ರವಾನೆ ಮಾಡಲಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಬೇಸಿಗೆ ರಜೆ ವೇಳೆ ಮಕ್ಕಳ ಜಾಗ್ರತೆ ಅತ್ಯಗತ್ಯ: ಇನ್ನು ಈಗ ಚಳಿಗಾಳ ಮುಕ್ತಾಯ ಆಗುತ್ತಿದ್ದು ಬಿಸಿಲ ಬೇಗೆ ಹೆಚ್ಚಳವಾಗುತ್ತದೆ. ನದಿ, ಕೆರೆ ಹಾಗೂ ಬಾವಿ ಸೇರಿದಂತೆ ಜಲಮೂಲಗಳಿಗೆ ಈಜಲು ಹೋಗುವ ಮಕ್ಕಳ ಮೇಲೆ ನಿಗಾವಹಿಸಬೇಕಿರುವುದು ಪೋಷಕರ ಕರ್ತವ್ಯವೂ ಆಗಿರಬೇಕು. ಈಜು ಬಾರದಿದ್ದರೂ ಮಕ್ಕಳೊಂದಿಗೆ ಆಟವಾಡುತ್ತಾ ಗುಂಪಿನಲ್ಲಿ ನೀರಿನ ಮೂಲಗಳತ್ತ ಹೋದರೆ ಮಕ್ಕಳು ಅನ್ಯಾಯವಾಗಿ ಬಲಿಯಾಗುತ್ತಾರೆ. ಇನ್ನು ಬೇಸಿಗೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಇರಲಿದ್ದು, ಆಗ ಮಕ್ಕಳನ್ನು ಮನೆಯಲ್ಲಿರಿಸಿ ಬೇರೊಂದು ಮಕ್ಕಳು ಆರೋಗ್ಯಕರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು.