ತುಮಕೂರು: ರಾಜಕೀಯ ದ್ವೇಷ, ಕೆರೆಗೆ ವಿಷ ಹಾಕಿ ಲಕ್ಷಾಂತರ ಮೀನುಗಳ ಮಾರಣಹೋಮ

By Girish GoudarFirst Published Nov 27, 2022, 11:09 AM IST
Highlights

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ವಡೆಘಟ್ಟ ಗ್ರಾಮದಲ್ಲಿ  ನಡೆದ ಘಟನೆ

ತುಮಕೂರು(ನ.27):  ರಾಜಕೀಯ ದ್ವೇಷಕ್ಕೆ ಕೆರೆಗೆ ವಿಷ ಹಾಕಿದ್ದರಿಂದ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ವಡೆಘಟ್ಟ ಗ್ರಾಮದಲ್ಲಿ ನಿನ್ನೆ(ಶನಿವಾರ) ರಾತ್ರಿ ನಡೆದಿದೆ. 

ವಡೆಘಟ್ಟ ಗ್ರಾಮದ ಕೆರೆಗೆ ವಿಷ ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಜೋಡಿ ಹೊಸಹಳ್ಳಿ ಗ್ರಾಮ‌ ಪಂಚಾಯ್ತಿ ಸದಸ್ಯ ಚಂದನ್ ಎಂಬುವರು ಮೀನು ಸಾಕಾಣಿಕೆ ಮಾಡಲು ಕೆರೆಯನ್ನ ಗುತ್ತಿಗೆ ಪಡೆದಿದ್ದರು. ಕಳೆದ ಎರಡು ತಿಂಗಳ ಹಿಂದೆ ಬರೋಬ್ಬರಿ ಐದುವರೆ ಲಕ್ಷ ಮೀನಿನ ಮರಿಗಳನ್ನ ಕೆರೆಗೆ ಬಿಟ್ಟಿದ್ದರು. ಹಗಲು ರಾತ್ರಿ ನಿದ್ದೆಗೆಟ್ಟು ಮೀನುಗಳನ್ನ ಸಾಕಿದ್ರು. ಆದರೆ, ರಾಜಕೀಯ ದ್ವೇಷಕ್ಕೆ ನಿನ್ನೆ ರಾತ್ರಿ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿ ವಿಕೃತಿ ಮೆರೆದಿದ್ದಾರೆ. 

ಮತಾಂತರ ಆರೋಪ: ವೈದ್ಯೆ ಸೇರಿದಂತೆ ಮೂವರ ವಿರುದ್ಧ ಕೇಸ್‌

ಕೆರೆಗೆ ವಿಷ ಮಿಶ್ರಣವಾದ ಹಿನ್ನೆಲೆಯಲ್ಲಿ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳೆಲ್ಲ ಸಾವನ್ನಪ್ಪಿವೆ. ಇಂದು(ಭಾನುವಾರ)ಬೆಳಗ್ಗೆ ಗ್ರಾಮಸ್ಥರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

click me!