ನಲಪಾಡ್ ಯೂತ್ ಕಾಂಗ್ರೆಸ್ ಹೆಸರೇಳಿ ಕಿಡ್ನಾಪ್: ಹಣಕ್ಕಾಗಿ ವಿದ್ಯಾರ್ಥಿಯನ್ನ ನಗ್ನಗೊಳಿಸಿ ಹಲ್ಲೆ ಆರೋಪ, ಎಫ್‌ಐಆರ್ ದಾಖಲು

Published : Aug 19, 2024, 12:04 PM IST
ನಲಪಾಡ್ ಯೂತ್ ಕಾಂಗ್ರೆಸ್ ಹೆಸರೇಳಿ ಕಿಡ್ನಾಪ್: ಹಣಕ್ಕಾಗಿ ವಿದ್ಯಾರ್ಥಿಯನ್ನ ನಗ್ನಗೊಳಿಸಿ ಹಲ್ಲೆ ಆರೋಪ, ಎಫ್‌ಐಆರ್ ದಾಖಲು

ಸಾರಾಂಶ

ಕಾಂಗ್ರೆಸ್ ಪಕ್ಷದ ಯುತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೆಸರು ಹೇಳಿ ಯುವಕರ ಗ್ಯಾಂಗ್ ನಿಂದ ಹಣಕ್ಕಾಗಿ ಜೀವೆಲ್ ಜೈನ್ ಎಂಬ ವಿದ್ಯಾರ್ಥಿ ಕಿಡ್ನಾಪ್ ಮಾಡಿ ನಗ್ನಗೊಳಿಸಿ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. 

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಆ.19): ಕಾಂಗ್ರೆಸ್ ಪಕ್ಷದ ಯುತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೆಸರು ಹೇಳಿ ಯುವಕರ ಗ್ಯಾಂಗ್ ನಿಂದ ಹಣಕ್ಕಾಗಿ ಜೀವೆಲ್ ಜೈನ್ ಎಂಬ ವಿದ್ಯಾರ್ಥಿ ಕಿಡ್ನಾಪ್ ಮಾಡಿ ನಗ್ನಗೊಳಿಸಿ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ. ನಗರದ ಚರ್ಚ್ ಸ್ಟ್ರೀಟ್ ಬಳಿ ರಾಯಲ್ ಬ್ರಿಗೇಡ್ ಹೊಟೇಲ್ ನಲ್ಲಿ ಎರಡು ತಿಂಗಳ ಹಿಂದೆ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಗರದ ಕೆಂಗೇರಿ ಬಳಿಯ ನಿವಾಸಿ ಜೀವನ್ ಜೈನ್ ಸ್ಟೂಡೆಂಟ್ ಆಗಿದ್ದು, ಮೊದಲ ವರ್ಷದ ಬಿಬಿಎಯನ್ನು ಸೆಂಟ್ ಜೋಸೆಫ್ ಯೂನಿವರ್ಸಿಟಿ ಓದುತ್ತಿದ್ದಾನೆ. 

ಬೆಂಗಳೂರು ವಿತ್ ಸಿಂಗರ್ಸ್ ಆ್ಯಂಡ್ ಡಿಜೆ ಅಂತಾ ಇವೆಂಟ್ ಮಾಡ್ಕೊಂಡಿದ್ದ. 2023ರ ಡಿಸೆಂಬರ್ ನಲ್ಲಿ ಆಯೋಜನೆ ಇವೆಂಟ್ ಮಾಡಲು ತಯಾರಿ ನಡೆಸಿದ್ದ. ಹೀಗೆ ಪಾರ್ಟಿಯಲ್ಲಿ ಪರಿಚಯವಿದ್ದ ,ಆಯುಷ್ ಶ್ರೀನಾಥ್ ಎಂಬಾತನ ಕಡೆಯಿಂದ ಮೂರು ಲಕ್ಷ ಸಾಕವನ್ನು ಜೀವೆಲ್ ಜೈನ್ ಪಡೆದುಕೊಂಡಿದ್ದ. ಸಾಲವಾಗಿ ಪಡೆದಿದ್ದ ಹಣವನ್ನ ಇವೆಂಟ್ ಗೆ ಖರ್ಚು ಮಾಡಿದ್ದ. ಜೈನ್ ಅಡ್ವಾನ್ಸ್ ಅಂತಾ ಡಿಜೆ ಮತ್ತು ಸಿಂಗರ್ ಗೆ ಹಣ ಕೊಟ್ಟಿರ್ತಾನೆ.. ಆದ್ರೆ ಕಾರಣಾಂತರಗಳಿಂದ ಡಿಜೆ ಮತ್ತು ಸಿಂಗರ್ಸ್ ಬರದೆ ಇವೆಂಟ್ ಕ್ಯಾನ್ಸಲ್ ಆಗಿತ್ತು. ಆರೋಪಿಗಳಾದ ಆಯುಷ್ ಶ್ರೀನಾಥ್, ಅಮೃತ್, ಕರಣ್ ಗೌಡ.. ರಿಶಿ ಅಲಿಯಾಸ್ ರಿಕ್ಕಿ ಸೇರಿ ಹಲವರು ಹಣ ವಾಪಸ್ ಕೊಡಲು ಬೆದರಿಕೆ ಮಾಡ್ತಿರ್ತಾರೆ. ಮೂರು ಲಕ್ಷಕ್ಕೆ ಬಡ್ಡಿ ಸಮೇತ ಆರು ಲಕ್ಷ ಕೊಡು ಅಂತಾ ಕೇಳಿರ್ತಾರೆ. 

ಆದ್ರೆ ಸಂಕಷ್ಟ ಅಂತಾ ಲೇಟಾಗಿ ಆರು ಲಕ್ಷ ಹಣ ಕೂಡ ಹಣವನ್ನು ಆರೋಪಿಗಳಿಗೆ ಜೀವೆಲ್ ಜೈನ್ ನೀಡಿದ್ದ. ಆದ್ರೂ ಖಾಲಿ ಪೇಪರ್ ಗೆ ಸಹಿ ಮಾಡಿಸಿಕೊಂಡು ಇನ್ನೂ ಹಣ ಕೊಡಬೇಕು ಅಂತಾ ಪಿಡಿಸುತ್ತಿದ್ರು. ಬಡ್ಡಿ ಸಮೇತ 10 ಲಕ್ಷ ಹಣ ಕೊಡಬೇಕು ಅಂತ ಜೈನ್ ಗೆ ಹಿಂಸೆ ನೀಡಲಾಗಿತ್ತು. ಇಂದಿರಾ ನಗರಕ್ಕೆ ಬಾ ಮಾತನಾಡಬೇಕು ಅಂತ ಕರೆಸಿದ್ದ ಆರೋಪಿಗಳು ಬಳಿಕ ಜೈನ್ ಕಿಡ್ನಾಪ್ ಮಾಡಿದ್ದರು. ನಂತ್ರ ಚರ್ಚ್ ಶೀಟ್ ಹತ್ರ ಬ್ರಿಗೆಡ್ ರಾಯಲ್ ಹೋಟೆಲ್ ಕರೆತಂದಿದ್ರು. ಸುಲಿಗೆ ಮಾಡಿ ಇನ್ನೂ ಹತ್ತು ಲಕ್ಷವರೆಗೂ ಕೊಡಬೇಕು ಅಂತಾ ಬೆದರಿಕೆ ಹಾಕಿದ್ದಾರೆ. ಚರ್ಚ್ ಶೀಟ್ ನ ರಾಯಲ್ ಬ್ರಿಗೆಡ್ 104 ರೂಮ್ ನಲ್ಲಿ ಕುಡಿ ಹಾಕಿದ್ರು. ಅಲ್ಲದೇ ಜೈನ್ ಬಟ್ಟೆ ಬಿಚ್ಚಿಸಿ  ನಗ್ನ ವಿಡಿಯೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಕೋದಾಗಿ ಬೆದರಿಕೆ ಹಾಕಿದ್ರು. ನಾವು ಯೂತ್ ಕಾಂಗ್ರೆಸ್ ಲೀಡರ್ ನಲಪಾಡ್ ಹುಡುಗರು ನೀನು ಪೊಲೀಸರಿಗೆ ದೂರು ಕೊಟ್ರೆ ನಿನ್ನ ಸುಮ್ಮನೆ ಬಿಡಲ್ಲ ಅಂತಾ ಆರೋಪಿಗಳು ಬೆದರಿಕೆ ಹಾಕಿದ್ರು. 

ಆರೋಪ ಬಂದ ತಕ್ಷಣ ಪತ್ರಕರ್ತರನ್ನು ಬಂಧಿಸಿದ್ರೆ ಹೇಗೆ?: ಖಾರವಾಗಿಯೇ ಮಾತಾಡಿದ ಸಚಿವ ಪರಮೇಶ್ವರ್

ಕಳೆದ ಎರಡು ತಿಂಗಳಿಂದ ಬೆದರಿಕೆ ,ಚಿತ್ರಹಿಂಸೆ ಕೊಟ್ಟಿರೋ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮೊದಲು ಇ ಮೇಲ್ ಮೂಲಕ ಬೆಂ.ನಗರ ಕಮಿಷನರ್ ಗೆ ದೂರು ನೀಡಿದ್ದ ಜೀವೆಲ್ ಜೈನ್. ಬಳಿಕ ಮೊನ್ನೆ ಮೊನ್ನೆ ಕೆಂಗೇರಿ ಪೊಲೀಸ್ ಠಾಣೆಗೆ ಜೀವೆಲ್ ಜೈನ್ ದೂರು ನೀಡಿದ್ದರು.ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ  ಪೊಲೀಸರು ಬಲೆ ಬಿಸಿದ್ದಾರೆ. ಇನ್ನು ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಯುವ ಮುಖಂಡ ನಲಪಾಡ್ ಸಂಪರ್ಕಿಸಿದಾಗ ನನಗೆ ಕೃತ್ಯದಲ್ಲಿ ಭಾಗಿಯಾದ ಯುವಕರ ಪರಿಚಯವಿಲ್ಲ. ನೊಂದ ಯುವಕನನ್ನ ಬಳಿ ಕಳಿಸಿ ನಾನೇ ಎಫ್ ಐಆರ್ ಮಾಡಿಸುತ್ತೇನೆ. ನನ್ನ ಹೆಸರನ್ನು ವಿನಾ ಕಾರಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ನಲಪಾಡ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?